OTTಯಲ್ಲಿ ಅಬ್ಬರಿಸೋಕೆ ಧುರಂಧರ್‌ ರೆಡಿ- ಯಾವಾಗ ರಿಲೀಸ್‌?
x

ನೆಟ್‌ಫ್ಲಿಕ್ಸ್‌ನಲ್ಲಿ ಮೇ 22 ಕ್ಕೆ ಧುರಂಧರ್ ಭಾಗ-1 ರ ಅನ್‌ಕಟ್ ವರ್ಷನ್ ಬಿಡುಗಡೆಯಾಗುತ್ತಿದೆ. 

Dhurandhar OTT release date

OTTಯಲ್ಲಿ ಅಬ್ಬರಿಸೋಕೆ ಧುರಂಧರ್‌ ರೆಡಿ- ಯಾವಾಗ ರಿಲೀಸ್‌?

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಜೂನ್ 4 ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದ್ದು, 30 ನಿಮಿಷಗಳ ಅನ್‌ಫಿಲ್ಟರ್ಡ್ ವಿಶೇಷ ದೃಶ್ಯಗಳು ವೀಕ್ಷಣೆಗೆ ಲಭ್ಯವಿರಲಿವೆ.


Click the Play button to hear this message in audio format

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ 'ಧುರಂಧರ್: ದಿ ರಿವೆಂಜ್' ಕೊನೆಗೂ ಒಟಿಟಿ ವೇದಿಕೆಗೆ ಲಗ್ಗೆ ಇಡಲು ಸಜ್ಜಾಗಿದೆ. ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ಮುಂಬರುವ ಜೂನ್ 4ರಿಂದ 'ಜಿಯೋಹಾಟ್‌ಸ್ಟಾರ್' ಒಟಿಟಿ ಆ್ಯಪ್‌ನಲ್ಲಿ ಜಾಗತಿಕವಾಗಿ ಪ್ರಸಾರವಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪ್ರೀಮಿಯರ್ ಪ್ರದರ್ಶನದ ಮತ್ತೊಂದು ವಿಶೇಷತೆಯೆಂದರೆ, ಭಾರತದಲ್ಲೇ ಮೊದಲ ಬಾರಿಗೆ ವೀಕ್ಷಕರು ಈ ಚಿತ್ರದ 30 ನಿಮಿಷಗಳ ಕತ್ತರಿಸದ, ಅನ್‌ಫಿಲ್ಟರ್ಡ್ ಹಾಗೂ ರಾ ಆವೃತ್ತಿಯನ್ನು ವೀಕ್ಷಿಸಬಹುದಾಗಿದೆ.

ಚಿತ್ರದ ಮುಖ್ಯ ಪ್ರದರ್ಶನಕ್ಕೂ ಮುನ್ನ ವೀಕ್ಷಕರಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ 30 ನಿಮಿಷಗಳ 'ಪ್ರಿ-ಶೋ' ಲಭ್ಯವಿರಲಿದ್ದು, ಇದರಲ್ಲಿ ಚಿತ್ರತಂಡದ ಸದಸ್ಯರ ಅನೌಪಚಾರಿಕ ಸಂಭಾಷಣೆಗಳು, ಚಿತ್ರೀಕರಣದ ಹಿಂದಿನ ರೋಚಕ ಕಥೆಗಳು, ತಮಾಷೆಯ ಕ್ಷಣಗಳು ಮತ್ತು ಸಿನಿಮಾ ನಿರ್ಮಾಣದ ಒಳನೋಟಗಳನ್ನು ಹಂಚಿಕೊಳ್ಳಲಾಗುತ್ತದೆ. ಜೂನ್ 4 ರ ವಿಶೇಷ ಪ್ರೀಮಿಯರ್ ಬಳಿಕ, ಜೂನ್ 5 ರಿಂದ ಸಿನಿಮಾವು ಜಿಯೋಹಾಟ್‌ಸ್ಟಾರ್‌ನ ಎಲ್ಲಾ ಚಂದಾದಾರರಿಗೆ ಮುಕ್ತವಾಗಿ ವೀಕ್ಷಣೆಗೆ ಸಿಗಲಿದೆ. ಚಿತ್ರದ ನೈಜ ತೀವ್ರತೆ, ಭವ್ಯತೆ ಮತ್ತು ಕಥಾಹಂದರವನ್ನು ನಿರ್ದೇಶಕರು ಅಂದುಕೊಂಡಂತೆಯೇ ಯಾವುದೇ ಫಿಲ್ಟರ್ ಇಲ್ಲದೆ ಮೂಲ ರೂಪದಲ್ಲಿ ಒಟಿಟಿ ವೀಕ್ಷಕರಿಗೆ ತಲುಪಿಸಲು ಜಿಯೋಹಾಟ್‌ಸ್ಟಾರ್ ನಿರ್ಧರಿಸಿದೆ.

ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸಿರುವ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಸೇರಿದಂತೆ ಭಾರತೀಯ ಚಿತ್ರರಂಗದ ಘಟಾನುಘಟಿ ಕಲಾವಿದರ ದಂಡೇ ಇದೆ. ಈ ಕುರಿತು ಸಂತಸ ಹಂಚಿಕೊಂಡಿರುವ ನಿರ್ದೇಶಕ ಆದಿತ್ಯ ಧರ್, 'ಧುರಂಧರ್: ದಿ ರಿವೆಂಜ್ ಸಿನಿಮಾವು ನಮ್ಮ ಇಡೀ ತಂಡಕ್ಕೆ ಅತ್ಯಂತ ವಿಶೇಷವಾದ ಪ್ರಯಾಣವಾಗಿದೆ. ಭವ್ಯತೆ, ತೀವ್ರತೆ ಹಾಗೂ ಭಾವನೆಗಳಿಂದ ಕೂಡಿರುವ ಈ ಅದ್ಭುತ ಕಥೆಯನ್ನು ಜೂನ್ 4 ರಿಂದ ದೇಶಾದ್ಯಂತ ಇರುವ ಜಿಯೋಹಾಟ್‌ಸ್ಟಾರ್ ವೀಕ್ಷಕರು ತಮ್ಮ ಮನೆಗಳಲ್ಲೇ ಅನುಭವಿಸಲಿದ್ದಾರೆ' ಎಂದು ಹೇಳಿದ್ದಾರೆ. ಆದಿತ್ಯ ಧರ್ ಕಥೆ ಬರೆದು ನಿರ್ದೇಶಿಸಿರುವ ಈ ಹೈ-ವೋಲ್ಟೇಜ್ ಸ್ಪೈ ಆಕ್ಷನ್ ಚಿತ್ರವನ್ನು ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ಜಂಟಿಯಾಗಿ ನಿರ್ಮಿಸಿದ್ದಾರೆ.

Read More
Next Story