ಡಿ.5ಕ್ಕೆ ಡೆವಿಲ್‌ ಚಿತ್ರದ ಟ್ರೇಲರ್‌ ಬಿಡುಗಡೆ, ಡಿ.12ಕ್ಕೆ ಸಿನಿಮಾ ರಿಲೀಸ್‌
x

ಡಿ.5ಕ್ಕೆ ಡೆವಿಲ್‌ ಚಿತ್ರದ ಟ್ರೇಲರ್‌ ಬಿಡುಗಡೆ, ಡಿ.12ಕ್ಕೆ ಸಿನಿಮಾ ರಿಲೀಸ್‌

‘ಡೆವಿಲ್’ ಚಿತ್ರ ತಂಡದ ವತಿಯಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಅಧಿಕೃತವಾಗಿ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಿದೆ. ಡಿ.5ರಂದು ಬೆಳಿಗ್ಗೆ 10.05ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೇಲರ್ ನೋಡಬಹುದು.


ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್ ಅಭಿನಯಿಸಿರುವ ‘ಡೆವಿಲ್’ ಚಿತ್ರವು ಡಿ.12 ರಂದು ವಿಶ್ವಾದ್ಯಂತ ಅದ್ಧೂರಿ ತೆರೆ ಕಾಣಲಿದೆ. ದರ್ಶನ್ ಜೈಲಿನಲ್ಲಿ ಇರುವಾಗಲೇ ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ನಿರೀಕ್ಷೆ ಗರಿಗೆದರಿದೆ.

ಚಿತ್ರದ ಟ್ರೇಲರ್ ಹಾಗೂ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ದರ್ಶನ್ ಮೊದಲು ಜೈಲಿಗೆ ಹೋಗುವುದಕ್ಕೂ ಮುನ್ನ ತಮ್ಮ ಪಾತ್ರದ ಕೆಲ ಭಾಗಗಳ ಚಿತ್ರೀಕರಣ ಮುಗಿಸಿದ್ದರು. ಆ ಬಳಿಕ ಜೈಲು ಪಾಲಾದರು. ಮತ್ತೆ ದರ್ಶನ್ ಜಾಮೀನು ಪಡೆದು ಹೊರಬಂದ ಮೇಲೆ ಉಳಿದ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಈ ವೇಳೆ ದೇಶ ಹಾಗೂ ವಿದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅಲ್ಲದೇ ತಮ್ಮ ಪಾಲಿನ ಡಬ್ಬಿಂಗ್ ಕೆಲಸವನ್ನು ಮುಗಿಸಿಕೊಟ್ಟಿದ್ದರು.

ಚಿತ್ರತಂಡದಿಂದ ದಿನಾಂಕ ಘೋಷಣೆ

‘ಡೆವಿಲ್’ ಚಿತ್ರ ತಂಡದ ವತಿಯಿಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಅಧಿಕೃತವಾಗಿ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಿದೆ. ಡಿ.5ರಂದು ಬೆಳಿಗ್ಗೆ 10.05ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೇಲರ್ ನೋಡಬಹುದು. ಡಿ.12 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದಲ್ಲಿ ದರ್ಶನ್ ಲುಕ್ ರಿವೀಲ್ ಆಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಟ್ರೇಲರ್ ಬಿಡುಗಡೆಯಾದ ಬಳಿಕ ಸಿನಿಮಾದ ಕಥೆ ಯಾವ ರೀತಿ ಇರಲಿದೆ, ಮೇಕಿಂಗ್ ಹೇಗಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ವಿಜಯಲಕ್ಷ್ಮಿ ದರ್ಶನ್ ಅವರು ಅಭಿಮಾನಿಗಳ ಸಭೆ ನಡೆಸಿದ್ದು, ಚಿತ್ರಕ್ಕೆ ಪ್ರಚಾರ ನೀಡುವ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಡಿ.12ರಂದು ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಮಿಲನ ಪ್ರಕಾಶ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ರಚನಾ ರೈ ಚಿತ್ರದ ನಾಯಕಿಯಾಗಿದ್ದು, ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್ ಇತರರು ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Read More
Next Story