ತೆರೆಗೆ ಬರಲಿದೆ ಕ್ರಿಕೆಟರ್‌ ಯುವರಾಜ್ ಸಿಂಗ್ ಬಯೋಪಿಕ್
x
ಯುವರಾಜ್‌ ಸಿಂಗ್‌ ಬಯೋಪಿಕ್‌ ತೆರಗೆ ಬರಲಿದೆ.

ತೆರೆಗೆ ಬರಲಿದೆ ಕ್ರಿಕೆಟರ್‌ ಯುವರಾಜ್ ಸಿಂಗ್ ಬಯೋಪಿಕ್

ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾ ನಿರ್ಮಾಣವಾಗಲಿದೆ.


ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾ ನಿರ್ಮಾಣವಾಗಲಿದೆ.

ಭೂಷಣ್ ಕುಮಾರ್ ಮತ್ತು ರವಿ ಭಾಗಚಂದಕಾ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಬಗ್ಗೆ ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

'ಯುವರಾಜ್ ಸಿಂಗ್ ಅವರು ತಮ್ಮ 13ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದರು. ಪಂಜಾಬ್ ರಾಜ್ಯದ ಎಡಗೈ ಆಲ್‌ರೌಂಡರ್ ಯುವಿ, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತವು ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕ್ಯಾನ್ಸರ್ ಅವರನ್ನು ಕಾಡಿತ್ತು. ಆದರೂ ಛಲಬಿಡದೇ ಹೋರಾಡಿ ಗುಣಮುಖರಾಗಿದ್ದ ಅವರು, 2012ರಲ್ಲಿ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು. ಅವರ ದಿಟ್ಟ ಜೀವನವು ಯುವಜನತೆಗೆ ಸ್ಫೂರ್ತಿಯಾಗಲಿದೆ' ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಮ್ಮ ಜೀವನಾಧಾರಿತ ಚಿತ್ರದ ಕುರಿತಂತೆ ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದು "ನನ್ನ ಜೀವನಚರಿತ್ರೆ ಲಕ್ಷಾಂತರ ಜನರಿಗೆ ಅವರ ಸವಾಲುಗಳನ್ನು ಜಯಿಸಲು ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನನ್ನ ಕಥೆಯನ್ನು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿಗೆ ತೋರಿಸಲಾಗುತ್ತದೆ. ಕ್ರಿಕೆಟ್ ನನ್ನ ಅತ್ಯಂತ ಪ್ರೀತಿ ಮತ್ತು ಎಲ್ಲಾ ಏರಿಳಿತಗಳ ಮೂಲಕ ಶಕ್ತಿಯ ಮೂಲವಾಗಿದೆ. ಈ ಚಿತ್ರವು ಇತರರಿಗೆ ತಮ್ಮ ಸವಾಲುಗಳನ್ನು ಜಯಿಸಲು ಮತ್ತು ಅವರ ಕನಸುಗಳನ್ನು ಅಚಲವಾದ ಉತ್ಸಾಹದಿಂದ ಮುಂದುವರಿಸಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಈ ಅವಧಿಯಲ್ಲಿ ಅವರು 40 ಟೆಸ್ಟ್ ಪಂದ್ಯಗಳಲ್ಲಿ 33.93 ಸರಾಸರಿಯಲ್ಲಿ 1900 ರನ್ ಗಳಿಸಿದ್ದಾರೆ. 304 ಏಕದಿನ ಪಂದ್ಯಗಳಲ್ಲಿ 36.56 ಸರಾಸರಿಯಲ್ಲಿ 8701 ರನ್ ಮತ್ತು 58 ಟಿ20 ಪಂದ್ಯಗಳಲ್ಲಿ 28.02 ಸರಾಸರಿಯಲ್ಲಿ 1177 ರನ್ ಗಳಿಸಿದ್ದಾರೆ.

ಈ ಅವಧಿಯಲ್ಲಿ ಅವರು 71 ಅರ್ಧ ಶತಕ ಮತ್ತು 17 ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, ಅವರ ಹೆಸರಿನಲ್ಲಿ 148 ಅಂತರ ರಾಷ್ಟ್ರೀಯ ವಿಕೆಟ್‌ಗಳಿವೆ. 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು.

Read More
Next Story