ರಾಧಿಕಾ ಪಂಡಿತ್ ಬರ್ತ್‌ಡೇ ಸೆಲೆಬ್ರೇಷನ್: ಮುಂಬೈ ಏರ್‌ಪೋರ್ಟ್‌ನಲ್ಲಿ ಟಾಕ್ಸಿಕ್ ಲುಕ್‌ನಲ್ಲಿ ಮಿಂಚಿದ ಯಶ್
x

ಮುಂಬೈನ ಬೀದಿಗಳಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಜೋಡಿ ಸುತ್ತಾಟ

ರಾಧಿಕಾ ಪಂಡಿತ್ ಬರ್ತ್‌ಡೇ ಸೆಲೆಬ್ರೇಷನ್: ಮುಂಬೈ ಏರ್‌ಪೋರ್ಟ್‌ನಲ್ಲಿ 'ಟಾಕ್ಸಿಕ್' ಲುಕ್‌ನಲ್ಲಿ ಮಿಂಚಿದ ಯಶ್

ಈ ಬದಲಾವಣೆಯಿಂದಾಗಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರದೊಂದಿಗೆ ಆಗಬೇಕಿದ್ದ ನೇರ ಪೈಪೋಟಿಯನ್ನು 'ಟಾಕ್ಸಿಕ್' ತಪ್ಪಿಸಿದಂತಾಗಿದೆ.


Click the Play button to hear this message in audio format

ನಟ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 'ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ನಂತರ ದಂಪತಿಗಳು ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಮಾರ್ಚ್ 7 ರಂದು ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವಿದ್ದು, ಈ ವಿಶೇಷ ದಿನವನ್ನು ಆಚರಿಸಲು ಈ ತಾರಾ ದಂಪತಿ ಅಜ್ಞಾತ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಈ ಜೋಡಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಕಾರಿನಿಂದ ಇಳಿದು ಮುಗುಳ್ನಗುತ್ತಲೇ ಪೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದ ಯಶ್ ಅವರ ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಈ ಹಿಂದೆ ಯಶ್ ಶೂಟಿಂಗ್ ಮಧ್ಯೆ ಮುಂಬೈ ಬೀದಿಯಲ್ಲಿ ರಾಧಿಕಾ ಜೊತೆ ಸುತ್ತಾಡಿದ ವಿಡಿಯೋ ವೈರಲ್ ಆಗಿತ್ತು. ಇದುವರೆಗೆ ಯಶ್ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ಆದರೆ, ಈಗ ಟಿಕೆಟ್ ಪಾತ್ರದ ಲುಕ್ ರಿವೀಲ್ ಆಗಿರುವುದರಿಂದ ಬಹಿರಂಗವಾಗಿ ಹೊಸ ಲುಕ್​ನಲ್ಲಿ ಓಡಾಡುತ್ತಿದ್ದಾರೆ.

ಮಾರ್ಚ್ 8 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಭರ್ಜರಿ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಚಿತ್ರತಂಡ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಮಾರ್ಚ್ 2 ರಂದೇ ಬಿಡುಗಡೆಯಾಗಬೇಕಿದ್ದ ಸಿನಿಮಾದ ಮೊದಲ ಹಾಡು 'ತಬಾಹಿ'ಯನ್ನು ಸಹ ಪ್ರಚಾರದ ತಂತ್ರವಾಗಿ ಸದ್ಯಕ್ಕೆ ತಡೆಹಿಡಿಯಲಾಗಿದೆ. ವಿತರಕರ ಸಲಹೆಯ ಮೇರೆಗೆ ಚಿತ್ರದ ಒಳಿತಿಗಾಗಿ ಬಿಡುಗಡೆಯನ್ನು ಮುಂದೂಡಿರುವ ನಿರ್ಮಾಪಕರು, ಜೂನ್ ತಿಂಗಳಿನಲ್ಲಿ ಅದ್ಧೂರಿಯಾಗಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಯಶ್ ಅವರು ತಮ್ಮ ಕುಟುಂಬದೊಂದಿಗೆ ರಾಧಿಕಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಈ ಮೊದಲು ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದ್ದ ಈ ಚಿತ್ರವು ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಪ್ರಕಟಿಸಿವೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಂಡುಬಂದಿರುವ ಅಸ್ಥಿರತೆ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇದರೊಂದಿಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2: ದ ರಿವೆಂಜ್' ಚಿತ್ರದೊಂದಿಗಿನ ನೇರ ಪೈಪೋಟಿಯನ್ನು 'ಟಾಕ್ಸಿಕ್' ಸಿನಿಮಾ ತಪ್ಪಿಸಿದಂತಾಗಿದೆ.

Read More
Next Story