
'ಹಾಯ್ ನಾನ್ನ' ಖ್ಯಾತಿಯ ಶೌರ್ಯುವ್ ಜೊತೆ ವಿಜಯ್ ದೇವರಕೊಂಡ ಸಿನಿಮಾ
vijay deverakonda| 'ಹಾಯ್ ನಾನ್ನ' ಖ್ಯಾತಿಯ ಶೌರ್ಯುವ್ ಜೊತೆ ವಿಜಯ್ ದೇವರಕೊಂಡ ಸಿನಿಮಾ
'ಹಾಯ್ ನಾನ್ನ' ಖ್ಯಾತಿಯ ನಿರ್ದೇಶಕ ಶೌರ್ಯುವ್ ಹಾಗೂ ನಟ ವಿಜಯ ದೇವರಕೊಂಡ ಕಾಂಬಿನೇಷನ್ನ ಹೊಸ ಸಿನಿಮಾ ಘೋಷಣೆಯಾಗಿದೆ.
ಟಾಲಿವುಡ್ನ ನಟ ವಿಜಯ ದೇವರಕೊಂಡ 'ಹಾಯ್ ನಾನ್ನ' ಖ್ಯಾತಿಯ ಯುವ ನಿರ್ದೇಶಕ ಶೌರ್ಯುವ್ ಅವರೊಂದಿಗೆ ಮುಂದಿನ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ ದೇವರಕೊಂಡ, ಚಿತ್ರತಂಡವನ್ನು ಪರಿಚಯಿಸುತ್ತಾ ಇದು ಅತ್ಯಂತ ಪ್ರಭಾವಶಾಲಿ ಮತ್ತು ಸವಾಲಿನ ಚಿತ್ರವಾಗಲಿದೆ ಎಂದು ಬಣ್ಣಿಸಿದ್ದಾರೆ.
ಚಿತ್ರದ ಅಧಿಕೃತ ಘೋಷಣೆಯ ಪೋಸ್ಟರ್ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟರ್ನಲ್ಲಿ ವಿಜಯ ದೇವರಕೊಂಡ ಅವರು ಬೇಟೆ ನಾಯಿಗಳ ಗುಂಪಿನೊಂದಿಗೆ ನಡೆದು ಬರುತ್ತಿದ್ದರೆ, ನಿರ್ದೇಶಕ ಶೌರ್ಯುವ್ ಕುದುರೆಯ ಪಕ್ಕದಲ್ಲಿ ಭುಜದ ಮೇಲೆ ಖಡ್ಗ ಇಟ್ಟುಕೊಂಡು ಸಾಗುತ್ತಿದ್ದಾರೆ. ಉಳಿದ ತಾಂತ್ರಿಕ ತಂಡದ ಸದಸ್ಯರು ಕೂಡ ವಿವಿಧ ಯುದ್ಧೋಪಕರಣಗಳನ್ನು ಹಿಡಿದಿರುವುದು ಕಂಡುಬಂದಿದೆ. ಇದನ್ನು ನೋಡಿದರೆ ಇದೊಂದು ಅದ್ದೂರಿ ವಾರ್-ಆಕ್ಷನ್ ಡ್ರಾಮಾ ಆಗಿರಲಿದೆ ಎಂಬ ಸುಳಿವು ಸಿಕ್ಕಿದೆ.
'ಹಾಯ್ ನಾನ್ನ' ನಿರ್ದೇಶಕನ ಮೇಲೆ ಭಾರೀ ನಿರೀಕ್ಷೆ
ನಿರ್ದೇಶಕ ಶೌರ್ಯುವ್ ತಮ್ಮ ಚೊಚ್ಚಲ ಚಿತ್ರ 'ಹಾಯ್ ನಾನ್ನ' ಮೂಲಕ ಭಾವುಕ ಕಥೆಯನ್ನು ತೆರೆಗೆ ತಂದು ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು. ಈಗ ಅವರು ವಿಜಯ ದೇವರಕೊಂಡ ಅವರಂತಹ ಮಾಸ್ ಹೀರೋಗಾಗಿ ಸಂಪೂರ್ಣ ವಿಭಿನ್ನವಾದ, ಸಾಹಸಮಯ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಶೌರ್ಯುವ್ ಅವರ ವಿಭಿನ್ನ ಆಲೋಚನೆ ಮತ್ತು ವಿಜಯ್ ಅವರ ಆಕ್ಷನ್ ಸ್ಟೈಲ್ ಈ ಚಿತ್ರದ ದೊಡ್ಡ ಆಕರ್ಷಣೆಯಾಗಲಿದೆ.
ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ
ಈ ಚಿತ್ರಕ್ಕಾಗಿ ವೈರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಜಾಗತಿಕ ಮಟ್ಟದ ತಾಂತ್ರಿಕ ವರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲೆಜಾಂಡ್ರೊ ಮಾರ್ಟಿನೆಜ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ, ಎರಿಕ್ ಡರ್ಸ್ಟ್ ವಿಎಫ್ಎಕ್ಸ್ ಹಾಗೂ ಸುರೇಶ್ ಸೆಲ್ವರಾಜನ್ ಕಲಾ ನಿರ್ದೇಶನ ಮಾಡಿದ್ದಾರೆ.
"ಈಗ ನೀವು ಕಾಣುತ್ತಿರುವ ಈ ಕೋಪದ ಹಿಂದೆ ಒಮ್ಮೆ ಪ್ರೀತಿಯಿತ್ತು" ಎಂಬ ಅರ್ಥದ ಟ್ಯಾಗ್ಲೈನ್ ಪೋಸ್ಟರ್ನಲ್ಲಿದ್ದು, ಚಿತ್ರದಲ್ಲಿ ಆಕ್ಷನ್ ಜೊತೆಗೆ ಬಲವಾದ ಎಮೋಷನಲ್ ಕಥೆಯೂ ಇರಲಿದೆ ಎನ್ನಲಾಗಿದೆ.

