
ನಟಿ ರುಕ್ಮಿಣಿ ವಸಂತ್ ಅವರ ಬಿಕಿನಿ ಅವತಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಕಿನಿ ಅವತಾರದಲ್ಲಿ ರುಕ್ಮಿಣಿ ವಸಂತ್; ಫ್ಯಾನ್ಸ್ ಶಾಕ್
ನಟಿ ರುಕ್ಮಿಣಿ ವಸಂತ್ ಅವರ ಬಿಕಿನಿ ಅವತಾರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಭಾರಿ ಶಾಕ್ ಆಗಿದ್ದಾರೆ.
ಚಿತ್ರರಂಗ ಎನ್ನುವುದು ಗ್ಲಾಮರ್ ಪ್ರಪಂಚ. ಇಲ್ಲಿ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಬೇಕಾದರೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ಅನಿವಾರ್ಯ ಎಂಬ ಮಾತಿದೆ. ಸದ್ಯ ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಕನ್ನಡದ ಕುವರಿ ರುಕ್ಮಿಣಿ ವಸಂತ್ ಇದೀಗ ತಮ್ಮ ರೂಟ್ ಬದಲಿಸಿದಂತೆ ಕಾಣುತ್ತಿದ್ದಾರೆ. ಇದುವರೆಗೆ ಯಾವುದೇ ಸಿನಿಮಾದಲ್ಲಿಯೂ ಗ್ಲಾಮರ್ ಹದ್ದು ಮೀರದ ಈ ನಟಿ, ದಿಢೀರನೆ ತಮ್ಮ ಅಭಿಮಾನಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಹಸಿರು ಬಣ್ಣದ ಬಿಕಿನಿ ಧರಿಸಿ ಈಜುಕೊಳಕ್ಕೆ ಇಳಿಯುತ್ತಿರುವ ಅವರ ವಿಡಿಯೋ ಮತ್ತು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿವೆ.
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರುಕ್ಮಿಣಿ ವಸಂತ್, ತಮ್ಮ ಮುಗ್ಧ ಮುಖ ಹಾಗೂ ಕಣ್ಣುಗಳ ಅಭಿನಯದ ಮೂಲಕವೇ ತೆಲುಗು ಮತ್ತು ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಅದರಲ್ಲೂ ಕಾಂತಾರ-2 ಚಿತ್ರದಲ್ಲಿನ ಅವರ ರಾಜಕುಮಾರಿಯಂತಹ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ಜೂನಿಯರ್ ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಹಾಗೂ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗಳಿಗೆ ಇವರೇ ನಾಯಕಿ ಎಂದು ತಿಳಿದಾಗಿನಿಂದ ಅಭಿಮಾನಿಗಳು ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಇದೀಗ ಹೊರಬಂದಿರುವ ವಿಡಿಯೋದಲ್ಲಿ ರುಕ್ಮಿಣಿ ಸುತ್ತಲೂ ಕ್ಯಾಮೆರಾಮನ್‌ಗಳು ಇರುವುದನ್ನು ಗಮನಿಸಿದರೆ, ಇದೊಂದು ಜಾಹೀರಾತು ಶೂಟಿಂಗ್ ಇರಬಹುದು ಎಂದು ಅಂದಾಜಿಸಲಾಗಿದೆ.
ಸಾಂಪ್ರದಾಯಿಕ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಟಿ ದಿಢೀರನೆ ಇಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವುದನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ನಿಜವಾಗಿಯೂ ಇದು ರುಕ್ಮಿಣಿ ವಸಂತ್ ಅವರೇನಾ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ನಕಲಿ ವಿಡಿಯೋನಾ ಎಂಬ ಸಂಶಯವೂ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಆದರೂ, ಈ ವಿಡಿಯೋ ಮಾತ್ರ ಸೊಶಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

