ಆದಿತ್ಯ ಅಭಿನಯದ ಟೆರರ್ ಟ್ರೇಲರ್ ಲಾಂಚ್: ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್‌
x

ಆದಿತ್ಯ ಅಭಿನಯದ 'ಟೆರರ್' ಟ್ರೇಲರ್ ಲಾಂಚ್: ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್‌

'ಡೆಡ್ಲಿ' ಸ್ಟಾರ್ ಆದಿತ್ಯ ಹಾಗೂ ಶ್ರೀನಗರ ಕಿಟ್ಟಿ ನಟನೆಯ 'ಟೆರರ್' ಚಿತ್ರದ ಟ್ರೇಲರ್ ಬಿಡುಗಡೆ! ರಂಜನ್ ನಿರ್ದೇಶನದ ಈ ಆಕ್ಷನ್ ಸಿನಿಮಾ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಆದಿತ್ಯ ಹಾಗೂ ಶ್ರೀನಗರ ಕಿಟ್ಟಿ ಬಹಳ ವರ್ಷಗಳ ನಂತರ ತೆರೆ ಹಂಚಿಕೊಳ್ಳುತ್ತಿರುವ `ಟೆರರ್' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಬೆಂಗಳೂರಿನಲ್ಲಿ ನಡೆಯಿತು.

ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸುಂದರರಾಜ್, ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಲಹರಿ ವೇಲು ಹಾಗೂ ಬ್ರಹ್ಮಾಂಡ ಗುರೂಜಿ `ಟೆರರ್' ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.


ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರ ಜಂಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರಂಜನ್ ಶಿವರಾಮ್ ಗೌಡ ಆ್ಯಕ್ಷನ್ ಕಟ್ ಹೇಳಿದ್ದಾರೆ.

`ಟೆರರ್' ಸಿನಿಮಾದ ಟ್ರೇಲರ್‌

ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಆದಿತ್ಯ, ಮೊದಲ ನಿರ್ದೇಶನದಲ್ಲೇ ರಂಜನ್ ಅವರು ಒಂದು ಪ್ರಬಲವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಅಲ್ಲದೆ, ಸುಮಾರು 21 ವರ್ಷಗಳ ಸುದೀರ್ಘ ಬಿಡುವಿನ ನಂತರ ತಾವು ಮತ್ತು ಶ್ರೀನಗರ ಕಿಟ್ಟಿ ಮತ್ತೆ ಒಟ್ಟಾಗಿ ನಟಿಸಿರುವುದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು ಎಂದು ಅವರು ಹಂಚಿಕೊಂಡರು.

ನಿರ್ಮಾಪಕ ಸಿಲ್ಕ್ ಮಂಜು ಅವರು ಮಾತನಾಡಿ, ಕಥೆಯ ಮೇಲಿನ ನಂಬಿಕೆಯಿಂದ ತಾವು ಮತ್ತು ಅಮೆರಿಕಾದಲ್ಲಿರುವ ತಮ್ಮ ಸ್ನೇಹಿತ ರವಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿರುವುದಾಗಿ ತಿಳಿಸಿದರು. ಹರ್ಷವರ್ಧನ್ ರಾಜ್ ಅವರ ಸಂಗೀತ ಹಾಗೂ ಡಾ. ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ ಚಿತ್ರದ ಪ್ಲಸ್ ಪಾಯಿಂಟ್ ಎನ್ನಲಾಗಿದೆ. ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ ಮತ್ತು ಶರತ್ ಲೋಹಿತಾಶ್ವ ಅಂತಹ ದಿಗ್ಗಜ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಆಕ್ಷನ್ ಮತ್ತು ಸಸ್ಪೆನ್ಸ್ ಕಥಾಹಂದರ ಹೊಂದಿರುವ ʻಟೆರರ್ʼ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಕನ್ನಡ ಚಿತ್ರರಂಗವನ್ನು ಬೆಂಬಲಿಸಬೇಕೆಂದು ಚಿತ್ರತಂಡ ಮನವಿ ಮಾಡಿದೆ.

Read More
Next Story