
ಅಜೇಯ್ ರಾವ್ ಅಭಿನಯದ ಸುಂದರ ಕೌಟುಂಬಿಕ ಕಥಾನಕ "ಸರಳ ಸುಬ್ಬರಾವ್"
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಅವರ ಛಾಯಾಗ್ರಹಣವಿದೆ. ಬಸವರಾಜ ಅರಸ್ ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
1971 ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಹಾಗೂ ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿಸಿರುವ ಚಿತ್ರ "ಸರಳ ಸುಬ್ಬರಾವ್". ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ, ಹಲವು ಸದಭಿರುಚಿ ಚಿತ್ರಗಳ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ "ಸರಳ ಸುಬ್ಬರಾವ್" ಚಿತ್ರ ಈ ವಾರ ಫೆಬ್ರವರಿ 20 ರಂದು ತೆರೆಗೆ ಬಂದಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಪ್ರದೀಪ್ ಪದ್ಮಕುಮಾರ್ ಅವರ ಛಾಯಾಗ್ರಹಣವಿದೆ. ಬಸವರಾಜ ಅರಸ್ ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಅಜೇಯ್ ರಾವ್, ಮಿಶಾ ನಾರಂಗ್, ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್, ವಿಜಯ್ ಚಂಡೂರ್, ರಘು ರಾಮನಕೊಪ್ಪ ಮುಂತಾದವರು "ಸರಳ ಸುಬ್ಬರಾವ್" ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಅಜೇಯ್ ರಾವ್ ಯಶಸ್ವಿ ಚಿತ್ರಗಳು
ಕನ್ನಡ ಚಿತ್ರರಂಗದಲ್ಲಿ 'ಸ್ಯಾಂಡಲ್‌ವುಡ್ ಕೃಷ್ಣ' ಎಂದೇ ಖ್ಯಾತರಾಗಿರುವ ಅಜೇಯ್ ರಾವ್ ಪ್ರಮುಖ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ರಂಜಿಸಿದ್ದರು. ಆರಂಭದಲ್ಲಿ ಎಕ್ಸ್ ಕ್ಯೂಸ್ ಮಿ ಮೊದಲ ಚಿತ್ರವಾಗಿದ್ದರೂ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. 2008ರಲ್ಲಿ ತರೆಕಂಡ ತಾಜ್ ಮಹಲ್ ಭರ್ಜರಿ ಬ್ರೇಕ್ ನೀಡಿತ್ತು. ಕೃಷ್ಣನ್ ಲವ್ ಸ್ಟೋರಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾವಾಗಿತ್ತು. ಕೃಷ್ಣನ್ ಮ್ಯಾರೇಜ್ ಸ್ಟೋರಿ ಯಶಸ್ವಿ ಚಿತ್ರವಾಗಿದ್ದರೆ ಕೃಷ್ಣ ಲೀಲಾ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.
ನಟ ಅಜೇಯ್ ರಾವ್ ಹಾಗೂ ನಟಿ ಮಿಶಾ ನಾರಂಗ್
ಇತ್ತೀಚಿನ ಚಿತ್ರಗಳು
ಕೃಷ್ಣ ಟಾಕೀಸ್, ಲವ್ ಯೂ ರಚ್ಚು, ಶೋಕಿವಾಲ, ಯುದ್ಧಕಾಂಡ ಚಾಪ್ಟರ್ 2, ರಾಧೇಯಾ, ಜಾನ್ ಜಾನಿ ಜನಾರ್ದನ್, ಧೈರ್ಯಂ, ತಾಯಿಗೆ ತಕ್ಕ ಮಗ, ಕೃಷ್ಣನ್ S/O ಸಿಎಂ ಚಿತ್ರಗಳು ತೆರೆ ಕಂಡಿದ್ದವು.

