ರಶ್ಮಿಕಾ-ವಿಜಯ್ ಮದುವೆ; ಫೆ.26ಕ್ಕೆ ಲಗ್ನ, ಮಾರ್ಚ್ 4ಕ್ಕೆ ರಿಸೆಪ್ಷನ್: ವೆಡ್ಡಿಂಗ್ ಕಾರ್ಡ್ ವೈರಲ್​
x

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ಉದಯಪುರದ ಸುಂದರ ತಾಣದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. 

ರಶ್ಮಿಕಾ-ವಿಜಯ್ ಮದುವೆ; ಫೆ.26ಕ್ಕೆ ಲಗ್ನ, ಮಾರ್ಚ್ 4ಕ್ಕೆ ರಿಸೆಪ್ಷನ್: ವೆಡ್ಡಿಂಗ್ ಕಾರ್ಡ್ ವೈರಲ್​

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26ರಂದು ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದ್ದು, ಇವರ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.


Click the Play button to hear this message in audio format

ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಇದೇ ಫೆಬ್ರವರಿ 26 ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಇವರಿಬ್ಬರ ಮದುವೆ ಆರತಕ್ಷತೆಯ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸದ್ಯ ಮೂಲಗಳ ಪ್ರಕಾರ, ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರ ವಿವಾಹ ಮಹೋತ್ಸವ ನಡೆಯಲಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ಆಯೋಜನೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರಶ್ಮಿಕಾ ಮತ್ತು ವಿಜಯ್ ಅವರ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಹೀಗೆ ಬರೆಯಲಾದ್ದು, "ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ, ರಶ್ಮಿಕಾ ಮತ್ತು ನಾನು 26- 02- 26 ರಂದು ಅತ್ಯಂತ ಸರಳ ಮತ್ತು ಆಪ್ತ ಸಮಾರಂಭದಲ್ಲಿ ವಿವಾಹವಾಗುತ್ತಿದ್ದೇವೆ. ನಮ್ಮ ನೆನಪುಗಳನ್ನು ಸಂಭ್ರಮಿಸುವ ಈ ಹೊಸ ಅಧ್ಯಾಯವನ್ನು ನಾವು ಪ್ರಾರಂಭಿಸುತ್ತಿರುವಾಗ, ನಮ್ಮ ಪ್ರಯಾಣದ ಭಾಗವಾಗಿರುವ ನಿಮ್ಮೊಂದಿಗೆ ಸಂಭ್ರಮಿಸುವುದು ನಮಗೆ ಬಹಳ ಅರ್ಥಪೂರ್ಣವಾಗಿದೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ಈ ಸಂದರ್ಭವನ್ನು ನಮಗೆ ಇನ್ನಷ್ಟು ವಿಶೇಷವಾಗಿಸುತ್ತದೆ. ನಮ್ಮ ವಿವಾಹದ ಔತಣಕೂಟಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ" ಎಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಈ ಜೋಡಿಯು ಮದುವೆಯ ತಯಾರಿ ಮತ್ತು ದಿನಾಂಕದ ಬಗ್ಗೆ ಮೌನವಾಗಿದ್ದರೂ, ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಅವರಿಗೆ ಪಾಪರಾಜಿಗಳು ಶಾದಿ ಮುಬಾರಕ್ ಎಂದು ಹೇಳಿದ ವಿಡಿಯೋ ವೈರಲ್ ಆಗುವ ಮೂಲಕ ಈ ಚರ್ಚೆಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ಈ ವೇಳೆ ಪಾಪರಾಜಿಗಳ ಶುಭಾಶಯಕ್ಕೆ ರಶ್ಮಿಕಾ ಅವರು ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿ ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ.

ವೈರಲ್‌ ಆಗಿರುವ ಆಮಂತ್ರಣ ಪತ್ರ

ಕೆಲವು ಮೂಲಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್ 3 ರಂದು ಈ ಜೋಡಿಯು ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಶ್ಮಿಕಾ ಅವರು ದಸರಾ ಹಬ್ಬದ ಸಮಯದಲ್ಲಿ ಸೀರೆಯುಟ್ಟು ಫೋಟೋ ಹಂಚಿಕೊಂಡಾಗ ಮತ್ತು ರಿಯಾಲಿಟಿ ಶೋ ಒಂದರಲ್ಲಿ ನಟ ಜಗಪತಿ ಬಾಬು ಅವರು ರಶ್ಮಿಕಾ ಅವರ ಕೈಬೆರಳಿನ ಉಂಗುರದ ಬಗ್ಗೆ ಪ್ರಶ್ನಿಸಿದಾಗ, ಅವರು ನೀಡಿದ ನಾಚಿಕೆಯ ಪ್ರತಿಕ್ರಿಯೆಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದವು. ಅಷ್ಟೇ ಅಲ್ಲದೆ, ಜಗಪತಿ ಬಾಬು ಅವರು ವಿಜಯ್ ದೇವರಕೊಂಡ ಹೆಸರನ್ನು ಪ್ರಸ್ತಾಪಿಸಿ ರಶ್ಮಿಕಾ ಅವರನ್ನು ಕಾಲೆಳೆದಿದ್ದರು.

ಜಗಪತಿ ಬಾಬು ಅವರು ವಿಜಯ್ ದೇವರಕೊಂಡ ಹೆಸರನ್ನು ಪ್ರಸ್ತಾಪಿಸಿ ರಶ್ಮಿಕಾ ಅವರನ್ನು ಕಾಲೆಳೆದಿದ್ದರು.

'ಗೀತ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿಯ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದೆ. ವಿಜಯ್ ಮತ್ತು ರಶ್ಮಿಕಾ ಅವರ ಪ್ರೇಮ ಜೀವನದ ವದಂತಿಗಳು 2023ರ ಮಾಲ್ಡೀವ್ಸ್ ಪ್ರವಾಸದ ನಂತರ ಆರಂಭವಾಗಿದ್ದವು. ಅಂದಿನಿಂದ ಇಂದಿನವರೆಗೆ ಈ ಜೋಡಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ರಶ್ಮಿಕಾ ಅವರು ತಮ್ಮ 29ನೇ ಹುಟ್ಟುಹಬ್ಬವನ್ನು ಓಮನ್‌ನಲ್ಲಿ ಆಚರಿಸಿಕೊಂಡಾಗ, ವಿಜಯ್ ಕೂಡ ಅದೇ ಜಾಗದ ಫೋಟೋಗಳನ್ನು ಹಂಚಿಕೊಂಡಿದ್ದು ಇವರ ಸಂಬಂಧಕ್ಕೆ ಸಾಕ್ಷಿಯಂತಿತ್ತು. ಸದ್ಯಕ್ಕೆ ಈ ಮದುವೆಯ ಸುದ್ದಿಯು ಅಧಿಕೃತವಾಗಿ ದೃಢಪಡದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ಜೋಡಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಸದ್ಯ ವೈರಲ್ ಆಗಿರುವ ಮದುವೆಯ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎಂಬುದು ದೃಢಪಡಬೇಕಿದೆ.

Read More
Next Story