
ರಣವೀರ್ ಸಿಂಗ್ ಅವರ 'ಧುರಂಧರ್ 2' ಚಿತ್ರದ ಅವಧಿ ಬಹಿರಂಗವಾಗಿದೆ. 3 ಗಂಟೆ 55 ನಿಮಿಷಗಳ ಈ ಚಿತ್ರವು ಕಳೆದ 26 ವರ್ಷಗಳಲ್ಲೇ ಅತಿ ಸುದೀರ್ಘ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದೆ.
Dhurandhar 2|ಧುರಂಧರ್ ಬರೋಬ್ಬರಿ 4ಗಂಟೆಗಳ ಸಿನಿಮಾನಾ?
ರಣವೀರ್ ಸಿಂಗ್ ನಟನೆಯ 'ಧುರಂಧರ್' ಸೀಕ್ವೆಲ್ ಹೊಸ ದಾಖಲೆ ಬರೆಯಲು ಸಜ್ಜಾಗಿದೆ! ಬರೋಬ್ಬರಿ 3 ಗಂಟೆ 55 ನಿಮಿಷಗಳ ಅವಧಿಯ ಈ ಚಿತ್ರವು 'ಲಗಾನ್' ದಾಖಲೆಯನ್ನು ಮೀರಿಸಿ, ಹಿಂದಿ ಚಿತ್ರರಂಗದ ಎರಡನೇ ಸುದೀರ್ಘ ಸಿನಿಮಾವಾಗಲಿದೆ.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ದಿಗ್ಗಜ ಕಲಾವಿದರ ದಂಡೇ ಇದೆ. ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನದ ಅಪರಾಧ ಲೋಕದೊಳಗೆ ನುಸುಳಿ ನಡೆಸುವ ಸಾಹಸದ ಕಥೆ ಈ ಚಿತ್ರದಲ್ಲಿದ್ದು, ಮಾರ್ಚ್ 19 ರಂದು ಸಿನಿಮಾ ತೆರೆಕಾಣಲಿದೆ.
ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೇಂಜ್' ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಬಿಡುಗಡೆಗೆ ಇನ್ನು ಹತ್ತು ದಿನಗಳು ಬಾಕಿ ಇರುವಂತೆಯೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಬರೆಯುತ್ತಿದೆ. ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂ ಮೂಲಕ ಹಾಗೂ ಮಾರ್ಚ್ 19 ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಿನಿಮಾ ಅಬ್ಬರಿಸುತ್ತಿದ್ದು, ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ ಈಗಾಗಲೇ 2 ಮಿಲಿಯನ್ ಡಾಲರ್ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇಲ್ಲಿಯವರೆಗೆ ಅಮೆರಿಕದಾದ್ಯಂತ ಸಾವಿರಕ್ಕೂ ಹೆಚ್ಚು ಶೋಗಳಿಗೆ ಸುಮಾರು 38,545 ಟಿಕೆಟ್‌ಗಳು ಮಾರಾಟವಾಗಿದ್ದು, ವೀಕೆಂಡ್ ಮುಂಗಡ ಬುಕಿಂಗ್ ಈಗಾಗಲೇ 1.70 ಮಿಲಿಯನ್ ಡಾಲರ್ ತಲುಪಿದೆ ಎಂದು ವರದಿಯಾಗಿದೆ.
ಇನ್ನು ಭಾರತದ ಬಾಕ್ಸ್ ಆಫೀಸ್ ವಿಚಾರಕ್ಕೆ ಬರುವುದಾದರೆ, 'ಧುರಂಧರ್ 2' ಎಲ್ಲಾ ಭಾಷೆಗಳಿಂದ ಒಟ್ಟು 18.1 ಕೋಟಿ ರೂಪಾಯಿಗಳಷ್ಟು ಮುಂಗಡ ಸಂಗ್ರಹ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಕೇವಲ ಹಿಂದಿ ಆವೃತ್ತಿಯಿಂದಲೇ ಸುಮಾರು 12.07 ಕೋಟಿ ರೂಪಾಯಿ ಹರಿದುಬಂದಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಸ್ತ್ರೀ 2' ಚಿತ್ರದ ಪೇಯ್ಡ್ ಪ್ರಿವ್ಯೂ ದಾಖಲೆಯನ್ನು ಕೇವಲ 24 ಗಂಟೆಗಳಲ್ಲಿ ಈ ಸಿನಿಮಾ ಮುರಿದು ಹೊಸ ದಾಖಲೆ ಬರೆದಿದೆ.

