ವಿಜಯ್-ರಶ್ಮಿಕಾ ದಾಂಪತ್ಯ ಜೀವನಕ್ಕೆ ರಣಬಾಲಿ ಶೈಲಿಯಲ್ಲೇ ಶುಭಕೋರಿದ ಚಿತ್ರತಂಡ
x

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮಕ್ಕೆ 'ರಣಬಾಲಿ' ಚಿತ್ರತಂಡದಿಂದ ರೊಮ್ಯಾಂಟಿಕ್ ಉಡುಗೊರೆ. 

ವಿಜಯ್-ರಶ್ಮಿಕಾ ದಾಂಪತ್ಯ ಜೀವನಕ್ಕೆ 'ರಣಬಾಲಿ' ಶೈಲಿಯಲ್ಲೇ ಶುಭಕೋರಿದ ಚಿತ್ರತಂಡ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸಂಭ್ರಮಕ್ಕೆ 'ರಣಬಾಲಿ' ಚಿತ್ರತಂಡದಿಂದ ರೊಮ್ಯಾಂಟಿಕ್ ಉಡುಗೊರೆ. ನವಜೋಡಿಯ ಅಭಿನಯದ 'ಓ ಮೇರೆ ಸಾಜನ್' ಹೊಸ ಹಾಡು ಈಗ ಬಿಡುಗಡೆ.


Click the Play button to hear this message in audio format

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನವಜೋಡಿಯ ಮದುವೆಯ ಸಂಭ್ರಮದ ಬೆನ್ನಲ್ಲೇ, ಅವರು ನಟಿಸುತ್ತಿರುವ ಮುಂಬರುವ ಚಿತ್ರ 'ರಣಬಾಲಿ' ತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ.

ಮದುವೆಯ ನಂತರ ಈ ಜೋಡಿಯ ಅಭಿನಯದ 'ರಣಬಾಲಿ' ಚಿತ್ರದ ವಿಶೇಷ ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಿದೆ. 'ಓ ಮೇರೆ ಸಾಜನ್' ಎಂಬ ಹೆಸರಿನ ಈ ಹಾಡಿನಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ತೆರೆಯ ಮೇಲಿನ ಮದುವೆಯ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಅಜಯ್-ಅತುಲ್ ಸಂಗೀತ ಸಂಯೋಜಿಸಿರುವ ಈ ಗೀತೆಯನ್ನು ಶ್ವೇತಾ ಮೋಹನ್ ಮತ್ತು ಜಾವೇದ್ ಅಲಿ ಹಾಡಿದ್ದಾರೆ.

'ಓ ಮೇರೆ ಸಾಜನ್' ಹಾಡಿನ ವಿಡಿಯೋ

ಈ ವಿಡಿಯೋದಲ್ಲಿ ಚಿತ್ರದ ಪಾತ್ರಗಳ ವಿವಾಹದ ಸಿದ್ಧತೆ, ಸಾಂಪ್ರದಾಯಿಕ ಉಡುಗೆಯಲ್ಲಿ ದಂಪತಿಗಳು ಮನೆ ಪ್ರವೇಶಿಸುವ ದೃಶ್ಯಗಳು ಹಾಗೂ ಮದುವೆಯ ನಂತರದ ಸುಂದರ ಕ್ಷಣಗಳನ್ನು ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ "ವಿಜಯ್ ಮತ್ತು ರಶ್ಮಿಕಾ ಅವರಿಗೆ ಸುಖಿ ಸಂಸಾರ ಜೀವನದ ಶುಭಾಶಯಗಳು" ಎಂಬ ಸಂದೇಶವನ್ನು ಹಾಕುವ ಮೂಲಕ ಚಿತ್ರತಂಡವು ಅವರ ನಿಜ ಜೀವನದ ಮದುವೆಗೂ ಶುಭ ಹಾರೈಸಿದೆ.

ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರವು ವಿಜಯ್ ಮತ್ತು ರಶ್ಮಿಕಾ ಒಂದಾಗಿ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ. ಈ ಹಿಂದೆ ಇವರು 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಚಿತ್ರವು ವಿಜಯ್ ಮತ್ತು ರಶ್ಮಿಕಾ ಒಂದಾಗಿ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ.

19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಸ್ವಾತಂತ್ರ್ಯ ಹೋರಾಟಗಾರ 'ರಣಬಾಲಿ' ಪಾತ್ರದಲ್ಲಿ ಮತ್ತು ರಶ್ಮಿಕಾ 'ಜಯಮ್ಮ' ಎಂಬ ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಚಿತ್ರವು ಸೆಪ್ಟೆಂಬರ್ 11 ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ಎರಡು ಸಂಪ್ರದಾಯಗಳಂತೆ ನೆರವೇರಿದ ವಿವಾಹ

ಫೆಬ್ರವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ರಶ್ಮಿಕಾ- ವಿಜಯ್‌ ದೇವರಕೊಂಡ ಅವರ ವಿವಾಹ ಮಹೋತ್ಸವವು ಅತ್ಯಂತ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು. ವಿಶೇಷವೆಂದರೆ, ವಿಜಯ್ ಅವರ ತೆಲುಗು (ಆಂಧ್ರ) ಸಂಪ್ರದಾಯ ಹಾಗೂ ರಶ್ಮಿಕಾ ಅವರ ಕೊಡವ ಸಂಪ್ರದಾಯಗಳೆರಡರ ಪ್ರಕಾರವೂ ವಿವಾಹದ ವಿಧಿವಿಧಾನಗಳು ನಡೆದವು. ಈ ಅದ್ಧೂರಿ ಸಮಾರಂಭದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ಫೆಬ್ರವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ರಶ್ಮಿಕಾ- ವಿಜಯ್‌ ದೇವರಕೊಂಡ ಅವರ ವಿವಾಹ ಮಹೋತ್ಸವವು ಅತ್ಯಂತ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು.

ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಔತಣಕೂಟ

ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಸಹೋದ್ಯೋಗಿಗಳಿಗಾಗಿ ಈ ನವಜೋಡಿ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದಾರೆ ಎನ್ನಲಾಗಿದೆ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳ ಮೂಲಕ ಸಿನಿಪ್ರಿಯರ ನೆಚ್ಚಿನ ಜೋಡಿಯಾಗಿದ್ದ ಇವರು, ಶೀಘ್ರದಲ್ಲೇ ತೆರೆಕಾಣಲಿರುವ ಚಿತ್ರವೊಂದರಲ್ಲಿ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Read More
Next Story