ಮದುವೆಗೆ ಸಜ್ಜಾದ ರಶ್ಮಿಕಾ ಮಂದಣ್ಣ-ವಿಜಯ್ ಜೋಡಿ: ಜಗಮಗಿಸುತ್ತಿದೆ ದೇವರಕೊಂಡ ಮನೆ
x

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇದೇ 26ರಂದು ಮದುವೆ ಆಗಲಿದ್ದಾರೆ ಎಂಬ ವರದಿ ಇದೆ. 

ಮದುವೆಗೆ ಸಜ್ಜಾದ ರಶ್ಮಿಕಾ ಮಂದಣ್ಣ-ವಿಜಯ್ ಜೋಡಿ: ಜಗಮಗಿಸುತ್ತಿದೆ ದೇವರಕೊಂಡ ಮನೆ

Rakshika Mandanna|ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆ ಮದುವೆ ಮನೆಯಂತೆ ಕಂಗೊಳಿಸುತ್ತಿದೆ. ಇದೇ 26ರಂದು ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.


Click the Play button to hear this message in audio format

ದಕ್ಷಿಣ ಭಾರತದ ಸಿನಿಮಾ ರಂಗದ ಜನಪ್ರಿಯ ಜೋಡಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಮದುವೆಯ ವದಂತಿಗಳು ಈಗ ನಿಜವಾಗುವ ಲಕ್ಷಣಗಳು ಕಾಣುತ್ತಿವೆ. ವರದಿಗಳ ಪ್ರಕಾರ, ಈ ಜೋಡಿ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಜಗಮಗಿಸುತ್ತಿರುವ ವಿಜಯ್ ನಿವಾಸ

ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಮನೆಯ ಮೂಲೆ ಮೂಲೆಗಳೂ ಬೆಳಕಿನ ಅಲಂಕಾರ ಹಾಗೂ ಹೂವುಗಳಿಂದ ಕಂಗೊಳಿಸುತ್ತಿದ್ದು, ಇದು ಮದುವೆಯ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ವಿಜಯ್ ಮತ್ತು ರಶ್ಮಿಕಾ ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡದಿದ್ದರೂ, ಮನೆಯ ಈ ಸಿದ್ಧತೆಗಳು ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದೆ.

ವಿಜಯ್ ದೇವರಕೊಂಡ ಅವರ ಹೈದರಾಬಾದ್ ನಿವಾಸದ ವಿಡಿಯೋಗಳು ವೈರಲ್ ಆಗುತ್ತಿವೆ.

ವೈರಲ್ ಆದ ಮದುವೆಯ ಆಮಂತ್ರಣ ಪತ್ರಿಕೆ

ಇತ್ತೀಚೆಗಷ್ಟೇ ಈ ಜೋಡಿಯ ಮದುವೆಯ ಆಮಂತ್ರಣ ಪತ್ರಿಕೆಯ ಬಾಕ್ಸ್ ವಿಡಿಯೋ ವೈರಲ್ ಆಗಿತ್ತು. ಈ ಬಾಕ್ಸ್‌ನಲ್ಲಿ ರಶ್ಮಿಕಾ ಅವರ ಬ್ರ್ಯಾಂಡ್‌ನ ಪರ್ಫ್ಯೂಮ್ ಮತ್ತು ವಿಜಯ್ ಅವರ ಬ್ರ್ಯಾಂಡ್ನ ಟಿ-ಶರ್ಟ್ ಸೇರಿದಂತೆ ವಿಶೇಷ ಉಡುಗೊರೆಗಳಿದ್ದವು. ಆಮಂತ್ರಣ ಪತ್ರಿಕೆಯ ಪ್ರಕಾರ, ಫೆಬ್ರವರಿ 26 ರಂದು ಉದಯಪುರದಲ್ಲಿ ಖಾಸಗಿಯಾಗಿ ಮದುವೆ ನಡೆಯಲಿದ್ದು, ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.

ಮದುವೆ ಸಮಾರಂಭಕ್ಕೆ ಸೆಲೆಬ್ರೆಟಿಗಳಿಗೆ ನೋ ಎಂಟ್ರಿ

ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನ ನೀಡಲಾಗಿದ್ದು, ಯಾವುದೇ ಸಿನಿಮಾ ತಾರೆಯರನ್ನು ಆಮಂತ್ರಿಸಿಲ್ಲ ಎನ್ನಲಾಗಿದೆ. ವಿಶೇಷವೆಂದರೆ, ಸಮಾರಂಭದಲ್ಲಿ 'ನೋ ಫೋನ್' ಪಾಲಿಸಿಯನ್ನು ಜಾರಿಗೊಳಿಸಲಾಗಿದ್ದು, ಫೋಟೋ ಅಥವಾ ವಿಡಿಯೋಗಳು ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕಿಗಾಗಿ ಬಂದಿದ್ದ ಕೋಟ್ಯಂತರ ರೂಪಾಯಿಗಳ ಒಟಿಟಿ ಆಫರ್ ಅನ್ನು ವಿಜಯ್ ದೇವರಕೊಂಡ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯೂ ಇದೆ.

ಮದುವೆಯ ವಿಡಿಯೋ ಸ್ಟ್ರೀಮಿಂಗ್ ಹಕ್ಕಿಗಾಗಿ ಬಂದಿದ್ದ ಕೋಟ್ಯಂತರ ರೂಪಾಯಿಗಳ ಒಟಿಟಿ ಆಫರ್ ಅನ್ನು ವಿಜಯ್ ದೇವರಕೊಂಡ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯೂ ಇದೆ.

ಸಿನಿಮಾ ಹಾದಿಯಿಂದ ಜೀವನದ ಹಾದಿಗೆ

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಶೀಘ್ರದಲ್ಲೇ 'ರಾಣಾ ಬಾಲಿ' ಸಿನಿಮಾ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮದುವೆಯ ಕಾರಣಕ್ಕೆ ಇಬ್ಬರೂ ಒಂದು ತಿಂಗಳ ವಿರಾಮ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Read More
Next Story