ಇಸ್ಲಾಂ ಧರ್ಮ ಸ್ವೀಕರಿಸಿ ಅಮೀರ್ ಖಾನ್ ವರಿಸ್ತೀನಿ ಎಂದ ರಾಖಿ ಸಾವಂತ್
x

ರಾಖಿ ಸಾವಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಇಸ್ಲಾಂ ಧರ್ಮ ಸ್ವೀಕರಿಸಿ ಅಮೀರ್ ಖಾನ್ ವರಿಸ್ತೀನಿ ಎಂದ ರಾಖಿ ಸಾವಂತ್

ಅಮೀರ್ ಖಾನ್ ಮೂರನೇ ಮದುವೆಯಾದರೆ ನಾನು ಇಸ್ಲಾಂ ಧರ್ಮ ಸ್ವೀಕರಿಸಿ ಅವರನ್ನು ವರಿಸಲು ಸಿದ್ಧ ಎಂದು ವಿವಾದಿತ ನಟಿ ರಾಖಿ ಸಾವಂತ್ ಹೇಳಿಕೆ ನೀಡಿದ್ದು, ನೆಟ್ಟಿಗರು ಇವರನ್ನು ಭಾರಿ ಟ್ರೋಲ್ ಮಾಡುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ವಿವಾದಿತ ನಟಿ ರಾಖಿ ಸಾವಂತ್ ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಅವರ ವಿಭಿನ್ನ ಫ್ಯಾಶನ್ ಸೆನ್ಸ್ ಮತ್ತು ದಿಢೀರ್ ಹೇಳಿಕೆಗಳು ಸದಾ ಸಾರ್ವಜನಿಕರ ಗಮನ ಸೆಳೆಯುತ್ತವೆ. ಇದೀಗ ರಾಖಿ ಸಾವಂತ್ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮತ್ತು ಅವರ ಮದುವೆಯ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನ 'ಫಿಲ್ಮಿ ಗ್ಯಾನ್' ಪುಟದಲ್ಲಿ ರಾಖಿ ಸಾವಂತ್ ಅವರ ವಿಡಿಯೋವೊಂದು ಅಪ್ಲೋಡ್ ಆಗಿದೆ. ಈ ವಿಡಿಯೋದಲ್ಲಿ ರಾಖಿ ವಿಭಿನ್ನವಾದ ಸ್ಕರ್ಟ್ ಮತ್ತು ಟಾಪ್ ಧರಿಸಿ, ಕೂದಲಿಗೆ ಬಣ್ಣ ಹಚ್ಚಿ, ಕಪ್ಪು ಕನ್ನಡಕ ಧರಿಸಿ ಪಾಪಾರಾಜಿಗಳಿಗೆ ಫೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ವೇಳೆ ಅಮೀರ್ ಖಾನ್ ಅವರ ಮೂರನೇ ಮದುವೆಯ ರೂಮರ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ರಾಖಿ, "ಅಮೀರ್ ಖಾನ್ ಇನ್ನೆಷ್ಟು ಮದುವೆಯಾಗುತ್ತಾರೋ ಗೊತ್ತಿಲ್ಲ, ಈಗ ಅವರು ಮೂರನೇ ಮದುವೆಯಾಗಲು ಹೊರಟಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಒಂದು ವೇಳೆ ಅವರು ಮತ್ತೊಂದು ಮದುವೆಯಾಗಲು ಸಿದ್ಧರಿದ್ದರೆ, ಅದಕ್ಕೆ ನಾನು ತಯಾರಾಗಿದ್ದೇನೆ. ಅಮೀರ್ ಖಾನ್ ಅವರ ಜೊತೆ ಮದುವೆಯಾಗಲು ನಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಲೂ ಸಿದ್ಧಳಿದ್ದೇನೆ" ಎಂದು ಹೇಳಿದ್ದಾರೆ.

ರಾಖಿ ಸಾವಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ರಾಖಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಅವರ ಹಳೆಯ ಮದುವೆಗಳನ್ನು ನೆನಪಿಸಿ ಟ್ರೋಲ್ ಮಾಡುತ್ತಿದ್ದಾರೆ. "ರಾಖಿ ಅವರೇ, ನೀವೂ ಈಗಾಗಲೇ ಎರಡು ಮದುವೆಯಾಗಿದ್ದೀರಿ ಮತ್ತು ನಿಮ್ಮದೂ ವಿಚ್ಛೇದನವಾಗಿದೆ. ಇತರರ ಬಗ್ಗೆ ಕಾಮೆಂಟ್ ಮಾಡುವ ಮೊದಲು ನಿಮ್ಮ ಸ್ವಂತ ಜೀವನದಲ್ಲಿ ಏನಾಗಿದೆ ಎಂಬುದನ್ನು ಒಮ್ಮೆ ತಿರುಗಿ ನೋಡಿ" ಎಂದು ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಅಮೀರ್ ಖಾನ್ ಕುರಿತಾದ ಈ ಹೇಳಿಕೆಯ ಜೊತೆಗೆ, ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ತನ್ನ ಪತಿ ಗೌರವ್ ಖನ್ನಾಗೆ ವಿಚ್ಛೇದನ ನೀಡುವುದಾಗಿ ಹೇಳಿದ್ದ ನಟಿ ಆಕಾಂಕ್ಷಾ ಚಮೋಲಾ ಅವರ ವಿಡಿಯೋ ಕ್ಲಿಪ್‌ಗೂ ರಾಖಿ ಪ್ರತಿಕ್ರಿಯಿಸಿದ್ದಾರೆ. ಆಕಾಂಕ್ಷಾ ಅವರ ವಿಡಿಯೋವನ್ನು ಸುಳ್ಳು ಎಂದು ಕರೆದಿರುವ ರಾಖಿ, ನಗುವಿನ ಎಮೋಜಿಯೊಂದಿಗೆ 'ಸುಳ್ಳುಗಾರ್ತಿ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ರಾಖಿ ಸಾವಂತ್ ಈ ಹಿಂದೆಯೂ ಇಂತಹ ಹಲವು ಹಾಸ್ಯಸ್ಪದ ಹಾಗೂ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರಾದರೂ, ಪ್ರಸ್ತುತ ಅಮೀರ್ ಖಾನ್ ಕುರಿತು ಅವರು ಮಾಡಿರುವ ಈ ಹೇಳಿಕೆ ಮಾತ್ರ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read More
Next Story