ಜೈಲಿನಿಂದ ಬಂದ ಬೆನ್ನಲ್ಲೇ ಹೊಸ ಇನಿಂಗ್ಸ್‌ಗೆ ಸಿದ್ಧರಾದ ನಟ ರಾಜ್‌ಪಾಲ್ ಯಾದವ್
x

ಜ್‌ಪಾಲ್ ಯಾದವ್ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರ ಕಾಂಬಿನೇಷನ್‌ನ 'ಭೂತ್ ಬಂಗ್ಲಾ'  ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಜೈಲಿನಿಂದ ಬಂದ ಬೆನ್ನಲ್ಲೇ ಹೊಸ ಇನಿಂಗ್ಸ್‌ಗೆ ಸಿದ್ಧರಾದ ನಟ ರಾಜ್‌ಪಾಲ್ ಯಾದವ್

ಸುಮಾರು ಎರಡು ದಶಕಗಳಿಂದ 'ಹಂಗಾಮಾ', 'ಭೂಲ್ ಭುಲೈಯಾ' ಮತ್ತು 'ಫಿರ್ ಹೇರಾ ಫೇರಿ'ಯಂತಹ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸಿರುವ ರಾಜ್‌ಪಾಲ್ ಯಾದವ್, ಇದೀಗ ಮತ್ತೊಂದು ದೊಡ್ಡ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಹೆಸರಾಂತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಸಂಕಷ್ಟಗಳು ಮತ್ತು ಕಾನೂನು ಹೋರಾಟಗಳ ಬಗ್ಗೆ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜ್‌ಪಾಲ್, "ಜೀವನದಲ್ಲಿ ಪ್ರತಿದಿನವೂ ಒಂದು ಹೊಸ ಆರಂಭ. ಹಳೆಯ ಕಹಿ ಘಟನೆಗಳನ್ನು ಹಿಡಿದುಕೊಂಡು ಕೂರುವವನು ನಾನಲ್ಲ. ಪ್ರತಿದಿನ ಹೊಸ ದಿನವಾಗಿ, ಹೊಸ ಕೆಲಸದ ದಿನವಾಗಿ ಕಾಣುತ್ತದೆ" ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಎದುರಾದ ಕಾನೂನು ಸಂಕಷ್ಟಗಳು ನಟನೆಯ ಮೇಲೆ ಪರಿಣಾಮ ಬೀರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಮುಖ ನೋಡಿದರೆ ಜನರಿಗೆ ನಗು ಬರಬೇಕೇ ಹೊರತು ಬೇರೇನೂ ಅಲ್ಲ. ಸಮಾಜದಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ತಿಳಿಸಿದರು.

ವಿಶೇಷವೆಂದರೆ, ರಾಜ್‌ಪಾಲ್ ಯಾದವ್ ಜೈಲಿನಲ್ಲಿದ್ದಾಗ ಬಾಲಿವುಡ್‌ನ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್ ಮತ್ತು ಮಿಕಾ ಸಿಂಗ್ ಅವರಂತಹ ದಿಗ್ಗಜರು ಅವರಿಗೆ ಬೆಂಬಲವಾಗಿ ನಿಂತಿದ್ದರು. ಸುಮಾರು ಎರಡು ದಶಕಗಳ ಕಾಲ 'ಭೂಲ್ ಭುಲೈಯಾ', 'ಫಿರ್ ಹೇರಾ ಫೇರಿ'ಯಂತಹ ಐಕಾನಿಕ್ ಸಿನಿಮಾಗಳ ಮೂಲಕ ನಗಿಸಿದ್ದ ಇವರು, ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್‌ನೊಂದಿಗೆ ಮರಳುತ್ತಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಭೂತ್ ಬಂಗ್ಲಾ' ಚಿತ್ರದಲ್ಲಿ ರಾಜ್‌ಪಾಲ್ ಯಾದವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ಇದೇ ಏಪ್ರಿಲ್ 10 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಟಬು, ಪರೇಶ್ ರಾವಲ್ ಮತ್ತು ವಾಮಿಕಾ ಗಬ್ಬಿ ಅವರಂತಹ ಸ್ಟಾರ್ ಕಲಾವಿದರಿದ್ದಾರೆ.

ಏನಿದು ವಿವಾದ?

2012 ರಲ್ಲಿ ರಾಜ್‌ಪಾಲ್ ಯಾದವ್ ಅವರು ಮೊದಲ ಬಾರಿಗೆ ನಿರ್ದೇಶಿಸಿದ್ದ ʻಆಟ ಪಟಾ ಲಪಟಾʼ ಚಿತ್ರದ ನಿರ್ಮಾಣಕ್ಕಾಗಿ ಅವರು ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದರಿಂದ ನಟನಿಗೆ ದೊಡ್ಡ ನಷ್ಟವಾಯಿತು. ಕಾಲಕ್ರಮೇಣ ಬಡ್ಡಿಯೂ ಸೇರಿ ಈ ಸಾಲದ ಮೊತ್ತ 9 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಮುರಳಿ ಪ್ರಾಜೆಕ್ಟ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಈಗಾಗಲೇ ಈ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಎರಡು ಬಾರಿ ಜೈಲು ಸೇರಿದ್ದಾರೆ.

Read More
Next Story