Dhurandhar 2| ಸ್ಪಿರಿಟ್ ಶೂಟಿಂಗ್‌ನಲ್ಲಿ ಬ್ಯುಸಿ ನಡುವೆಯೇ ಧುರಂಧರ್‌-2 ವೀಕ್ಷಿಸಿದ ಪ್ರಭಾಸ್- ಸಂದೀಪ್ ರೆಡ್ಡಿ ವಂಗಾ
x

ಶೂಟಿಂಗ್‌ ಬ್ರೇಕ್ ಪಡೆದು ದುರಂಧರ್‌ ಸಿನಿಮಾ ವೀಕ್ಷಿಸಿದ ಪ್ರಭಾಸ್- ಸಂದೀಪ್ ರೆಡ್ಡಿ ವಂಗಾ

Dhurandhar 2| ಸ್ಪಿರಿಟ್ ಶೂಟಿಂಗ್‌ನಲ್ಲಿ ಬ್ಯುಸಿ ನಡುವೆಯೇ ಧುರಂಧರ್‌-2 ವೀಕ್ಷಿಸಿದ ಪ್ರಭಾಸ್- ಸಂದೀಪ್ ರೆಡ್ಡಿ ವಂಗಾ

'ಸ್ಪಿರಿಟ್' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿರುವ ನಟ ಪ್ರಭಾಸ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಬಿಡುವಿನ ವೇಳೆಯಲ್ಲಿ 'ಧುರಂಧರ್ 2' ವೀಕ್ಷಿಸಲು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು ವಿಶೇಷ.


Click the Play button to hear this message in audio format

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾವನ್ನು ವೀಕ್ಷಿಸಲು ನಟ ಪ್ರಭಾಸ್ ಹಾಗೂ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೈದರಾಬಾದ್‌ನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸದ್ಯ ತಮ್ಮ ಬಹುನಿರೀಕ್ಷಿತ 'ಸ್ಪಿರಿಟ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ, ಬಿಡುವಿನ ವೇಳೆಯಲ್ಲಿ ಹೈದರಾಬಾದ್‌ನ ಅಲ್ಲು ಅರ್ಜುನ್ ಒಡೆತನದ ಚಿತ್ರಮಂದಿರದಲ್ಲಿ 'ಧುರಂಧರ್ 2' ಸಿನಿಮಾ ವೀಕ್ಷಿಸಿದ್ದಾರೆ. ಅಭಿಮಾನಿಯೊಬ್ಬರು ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರೂ ಸರಳವಾಗಿ ಕಾಣಿಸಿಕೊಂಡಿದ್ದು, ಪ್ರಭಾಸ್ ಅವರನ್ನು ಹತ್ತಿರದಿಂದ ಕಂಡ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಬಾಲ್ಯದ ಹೀರೊ ಪ್ರಭಾಸ್ ಅವರನ್ನು ನೇರವಾಗಿ ನೋಡಿರುವುದು ಒಂದು ಅದ್ಭುತ ಕ್ಷಣ ಎಂದು ಅಭಿಮಾನಿಯೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ಸ್ಪಿರಿಟ್' ಚಿತ್ರದ ಅಪ್‌ಡೇಟ್

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2025ರಲ್ಲಿ ಬಿಡುಗಡೆಯಾದ ಆಡಿಯೋ ಟೀಸರ್‌ನಲ್ಲಿ ಜೈಲರ್ ಮತ್ತು ಅಸಿಸ್ಟೆಂಟ್ ನಡುವಿನ ಸಂಭಾಷಣೆ ಹಾಗೂ ಪ್ರಭಾಸ್ ಅವರ ಖಡಕ್ ಧ್ವನಿ ಭಾರೀ ಸದ್ದು ಮಾಡಿತ್ತು. ಈ ಹಿಂದೆ ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯಿತ್ತಾದರೂ, ಈಗ ತೃಪ್ತಿ ಡಿಮ್ರಿ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ತೃಪ್ತಿ ಅವರ ತೆಲುಗು ಚಿತ್ರರಂಗದ ಪದಾರ್ಪಣೆಯ ಚಿತ್ರವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ 'ಧುರಂಧರ್ 2'

ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಧೂಳೆಬ್ಬಿಸುತ್ತಿದೆ. ಅಮೆರಿಕದಲ್ಲಿ 'ಬಾಹುಬಲಿ 2' ಚಿತ್ರದ ದಾಖಲೆಯನ್ನೇ ಈ ಸಿನಿಮಾ ಮುರಿದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ನಟ ರಾಣಾ ದಗ್ಗುಬಾಟಿ, "ಒಳ್ಳೆಯ ಕಥೆಗಳಿಗೆ ಜಾಗತಿಕವಾಗಿ ಮನ್ನಣೆ ಸಿಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ" ಎಂದು ಶ್ಲಾಘಿಸಿದ್ದಾರೆ. ಸದ್ಯ ಈ ಚಿತ್ರವು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಭಾರತದ ಕಲೆಕ್ಷನ್ (1,234.10 ಕೋಟಿ ರೂ. ನೆಟ್) ಹಿಂದಿಕ್ಕುವತ್ತ ದಾಪುಗಾಲು ಹಾಕುತ್ತಿದೆ.

ಬಿ62 ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

Read More
Next Story