
ವಿಜಯ್ ದೇವರಕೊಂಡ ಸ್ವಾತಂತ್ರ್ಯ ಹೋರಾಟಗಾರ 'ರಣಬಾಲಿ'ಯಾಗಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ 'ಜಯಮ್ಮ' ಎಂಬ ಗೃಹಿಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮದುವೆಯ ನಂತರ ಮತ್ತೆ ತೆರೆ ಮೇಲೆ ಒಂದಾಗಲಿರುವ ವಿಜಯ್-ರಶ್ಮಿಕಾ: 'ರಣಬಾಲಿ' ಚಿತ್ರೀಕರಣ ಶೀಘ್ರ ಆರಂಭ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣಮದುವೆಯ ಸಂಭ್ರಮದ ಬೆನ್ನಲ್ಲೇ ಈ ಜೋಡಿ ಈಗ ವೃತ್ತಿಜೀವನಕ್ಕೆ ಮರಳಲು ಸಜ್ಜಾಗಿದೆ.
ಸ್ಯಾಂಡಲ್‌ವುಡ್‌ನಿಂದ ಕೆರಿಯರ್ ಆರಂಭಿಸಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾದ ಈ ಜೋಡಿ, ಇದೀಗ ತಮ್ಮ ವೃತ್ತಿಜೀವನದ ಕಡೆಗೆ ಗಮನ ಹರಿಸಲು ಸಜ್ಜಾಗಿದೆ.
ಮದುವೆಯ ಸಂಭ್ರಮ ಮುಗಿಯುತ್ತಿದ್ದಂತೆಯೇ ಈ ಜೋಡಿ ಮತ್ತೆ ಕ್ಯಾಮೆರಾ ಎದುರಿಸಲು ಸಿದ್ಧವಾಗಿದ್ದು, ತಮ್ಮ ಮುಂಬರುವ 'ರಣಬಾಲಿ' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಮಾರ್ಚ್ 9 ರಿಂದಲೇ ಚಿತ್ರದ ಕೆಲಸಗಳು ಮರುಪ್ರಾರಂಭಗೊಳ್ಳಲಿದ್ದು, ವಿಜಯ್ ಮತ್ತು ರಶ್ಮಿಕಾ ಮಾರ್ಚ್ 12 ರಿಂದ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
'ರಣಬಾಲಿ' ಚಿತ್ರದ ಹಾಡು
ಏನಿದು ರಣಬಾಲಿ ಕಥೆ?
ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರವು 1854 ರಿಂದ 1878 ರ ಅವಧಿಯಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡುವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ 'ರಣಬಾಲಿ' ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡರೆ, ಅವರ ಪತ್ನಿ 'ಜಯಮ್ಮ' ಎಂಬ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಬ್ರಿಟಿಷರ ಕಾಲದ ಹಿಂಸಾಚಾರ, ಆರ್ಥಿಕ ಸಂಕಷ್ಟ ಮತ್ತು ಜನರ ಹೋರಾಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ವೈರಲ್ ಆದ ವೆಡ್ಡಿಂಗ್ ಪೋಸ್ಟರ್
ಇತ್ತೀಚೆಗಷ್ಟೇ ಚಿತ್ರತಂಡ ಬಿಡುಗಡೆ ಮಾಡಿದ ಇವರ ಮದುವೆಯ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಪೋಸ್ಟರ್ ಆಗಿರದೆ, 19ನೇ ಶತಮಾನದ ಹಳೆಯ ಭಾವಚಿತ್ರದಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿತ್ತು. ಇವರ ನಿಜ ಜೀವನದ ಮದುವೆಯ ಸಮಯದಲ್ಲೇ ಈ ಪೋಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಕಾಣಿಸಿಕೊಂಡಿದ್ದಾರೆ. ಅಜಯ್-ಅತುಲ್ ಈ ಸಿನಿಮಾಕ್ಕಿದೆ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೆಡ್' ನಂತರ ಈ ಜೋಡಿ ಒಂದಾಗುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಸೆಪ್ಟೆಂಬರ್ 11ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಕಾಣುವ ನಿರೀಕ್ಷೆಯಿದೆ.
ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯು, ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಔತಣಕೂಟವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್‌ನ ಗಣ್ಯಾತಿಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದರು.

