ನಜ್ರಿಯಾ ನಜೀಮ್ ರಹಸ್ಯ ಪೋಸ್ಟ್: ಅಭಿಮಾನಿಗಳಲ್ಲಿ ಮೂಡಿದ ತೀವ್ರ ಕುತೂಹಲ
x

ಇನ್‌ಸ್ಟಾಗ್ರಾಮ್‌ನಲ್ಲಿ ರಹಸ್ಯ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ನಜ್ರಿಯಾ ನಾಜಿಮ್

ನಜ್ರಿಯಾ ನಜೀಮ್ ರಹಸ್ಯ ಪೋಸ್ಟ್: ಅಭಿಮಾನಿಗಳಲ್ಲಿ ಮೂಡಿದ ತೀವ್ರ ಕುತೂಹಲ

ರೆಡ್ ಫ್ಲ್ಯಾಗ್ ಬೆನ್ನಟ್ಟುವ ಗೂಳಿಗಳ ಕುರಿತು ನಟಿ ನಜ್ರಿಯಾ ನಜೀಮ್ ಹಂಚಿಕೊಂಡಿರುವ ರಹಸ್ಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ.


Click the Play button to hear this message in audio format

ಖ್ಯಾತ ಮಲಯಾಳಂ ನಟಿ ನಜ್ರಿಯಾ ನಜೀಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ರಹಸ್ಯ ಬರಹವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. "ಗೂಳಿಗಳು ರೆಡ್ ಫ್ಲ್ಯಾಗ್ (ಕೆಂಪು ಬಾವುಟ) ಬೆನ್ನತ್ತಿ ಓಡುವುದನ್ನು ನೋಡಿ ಅವುಗಳಿಗೆ ಹುಚ್ಚು ಇರಬೇಕು ಎಂದು ನಾನು ಭಾವಿಸಿದ್ದೆ, ಆದರೆ ಈಗ ನಾನೂ ಅದೇ ಪರಿಸ್ಥಿತಿಯಲ್ಲಿದ್ದೇನೆ" ಎಂಬರ್ಥದ ಉಲ್ಲೇಖವನ್ನು ನಜ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತು ಅಭಿಮಾನಿಗಳು ಇದರ ಹಿಂದಿನ ನಿಜವಾದ ಅರ್ಥವೇನಿರಬಹುದು ಎಂದು ತೀವ್ರವಾಗಿ ಚರ್ಚಿಸಲು ಶುರು ಮಾಡಿದ್ದಾರೆ.

ರೆಡ್ಡಿಟ್ ಹಾಗೂ ಎಕ್ಸ್ ಮಾಧ್ಯಮಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಕೆಲವರು ನಜ್ರಿಯಾ ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದಾದರೂ ತೊಂದರೆ ಎದುರಿಸುತ್ತಿದ್ದಾರೆಯೇ ಅಥವಾ 'ರೆಡ್ ಫ್ಲ್ಯಾಗ್' ಗುಣ ಹೊಂದಿರುವವರನ್ನು ನಂಬಿ ಮೋಸ ಹೋದರೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಇನ್ನು ಕೆಲವು ಸಿನಿಪ್ರಿಯರು ಇದು ಅವರ ಮುಂಬರುವ ಹೊಸ ಸಿನಿಮಾದ ಪ್ರಚಾರದ ಭಾಗವಾಗಿರಬಹುದು ಎಂದು ಅಂದಾಜಿಸಿದ್ದಾರೆ.

ನಟ ಟೊವಿನೊ ಥಾಮಸ್ ಜೊತೆ ನಜ್ರಿಯಾ ನಟಿಸುತ್ತಿರುವ ಮುಂದಿನ ಚಿತ್ರದ ಕಥೆಯು ಸ್ಪೇನ್ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಗೂಳಿ ಕಾಳಗದ ಪರಿಕಲ್ಪನೆಗೆ ಈ ಪೋಸ್ಟ್ ಸಂಬಂಧಿಸಿರಬಹುದು, ಹಾಗಾಗಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಲು ಅವರು ಹೀಗೆ ಬರೆದುಕೊಂಡಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇಂಟರ್ನೆಟ್‌ನಲ್ಲಿ ಇಷ್ಟೆಲ್ಲಾ ಊಹಾಪೋಹಗಳು ಹರಿದಾಡುತ್ತಿದ್ದರೂ, ನಜ್ರಿಯಾ ಅವರ ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇರುವಂತೆ ಕಾಣುತ್ತಿಲ್ಲ. ಮಲಯಾಳಂ ಚಿತ್ರರಂಗದ ಅತ್ಯಂತ ಸುಂದರ ಜೋಡಿ ಎಂದೇ ಹೆಸರಾಗಿರುವ ನಜ್ರಿಯಾ ನಜೀಮ್ ಮತ್ತು ಫಹಾದ್ ಫಾಸಿಲ್ ಸದಾ ತಮ್ಮ ಸುಖಿ ಸಂಸಾರದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬಾಸಿಲ್ ಜೋಸೆಫ್ ಜೊತೆ ನಜ್ರಿಯಾ ನಟಿಸಿದ್ದ 'ಸೂಕ್ಷ್ಮದರ್ಶಿನಿ' ಸಿನಿಮಾ ಸೂಪರ್ ಹಿಟ್ ಆಗಿದ್ದು, ಸದ್ಯ ಅವರ ಈ ಹೊಸ ಪೋಸ್ಟ್ ಮಾತ್ರ ಸಿನಿಕುತೂಹಲಿಗಳ ತಲೆಗೆ ಭಾರಿ ಕೆಲಸ ಕೊಟ್ಟಿದೆ.

Read More
Next Story