ಶಾರುಖ್ ಖಾನ್ ‘ಕಿಂಗ್’ ಕ್ಲೈಮ್ಯಾಕ್ಸ್ ದೃಶ್ಯ ಸೋರಿಕೆ: ಫೋಟೋಸ್ ವೈರಲ್
x

ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದ ಹೈ-ವೋಲ್ಟೇಜ್ ಕಾರ್ ಚೇಸಿಂಗ್ ಕ್ಲೈಮ್ಯಾಕ್ಸ್ ದೃಶ್ಯದ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. 

ಶಾರುಖ್ ಖಾನ್ ‘ಕಿಂಗ್’ ಕ್ಲೈಮ್ಯಾಕ್ಸ್ ದೃಶ್ಯ ಸೋರಿಕೆ: ಫೋಟೋಸ್ ವೈರಲ್

ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದ ಹೈ-ವೋಲ್ಟೇಜ್ ಕಾರ್ ಚೇಸಿಂಗ್ ಕ್ಲೈಮ್ಯಾಕ್ಸ್ ದೃಶ್ಯದ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.


Click the Play button to hear this message in audio format

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಕಿಂಗ್’ ಸೆಟ್‌ನಿಂದ ದೃಶ್ಯಗಳು ಸೋರಿಕೆಯಾಗುತ್ತಿರುವ ಸರಣಿ ಮುಂದುವರಿದಿದ್ದು, ಇದೀಗ ಚಿತ್ರದ ಅತ್ಯಂತ ಪ್ರಮುಖವಾದ ಕ್ಲೈಮ್ಯಾಕ್ಸ್ ದೃಶ್ಯದ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈಗಾಗಲೇ ಶಾರುಖ್, ದೀಪಿಕಾ ಪಡುಕೋಣೆ, ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಅವರ ಫಸ್ಟ್‌ ಲುಕ್ ಹಾಗೂ ಸಾಂಗ್ ಸೀಕ್ವೆನ್ಸ್‌ಗಳು ಸೋರಿಕೆಯಾಗಿದ್ದ ಬೆನ್ನಲ್ಲೇ, ಈ ಹೈ-ವೋಲ್ಟೇಜ್ ಆಕ್ಷನ್ ಸೀನ್ ಫೋಟೋಗಳು ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

ವೈರಲ್ ಆಗಿರುವ ಈ ಚಿತ್ರಗಳಲ್ಲಿ ಶಾರುಖ್ ಖಾನ್ ಗಂಭೀರವಾದ ಮುಖಭಾವದೊಂದಿಗೆ ಕಾಣಿಸಿಕೊಂಡಿದ್ದು, ಅವರ ಮುಖದ ಮೇಲೆ ಗಾಯದ ಗುರುತುಗಳಿವೆ. ಹಿನ್ನೆಲೆಯಲ್ಲಿ ಹಲವು ಕಾರುಗಳು ನಿಂತಿರುವುದನ್ನು ಕಾಣಬಹುದು. ಕಳೆದ ಒಂದು ತಿಂಗಳಿನಿಂದ ಚಿತ್ರೀಕರಿಸಲಾದ ಪ್ರಮುಖ ಕಾರ್ ಚೇಸಿಂಗ್ ದೃಶ್ಯದ ಫೋಟೋಗಳು ಇವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಈ ಹಿಂದೆ ಚಿತ್ರದ ವಿಲನ್ ಪಾತ್ರಧಾರಿ ಅಭಿಷೇಕ್ ಬಚ್ಚನ್ ಅವರು ಚಲಿಸುವ ಕಾರಿನ ಮೇಲೆ ನಿಂತು ಶೂಟ್‌ಗನ್ ಹಿಡಿದು ಆಕ್ಷನ್ ಸೀನ್ ಮಾಡುತ್ತಿರುವ ಫೋಟೋ ಲೀಕ್ ಆಗಿತ್ತು.

ಇದೀಗ ಶಾರುಖ್ ಅವರ ಫೋಟೋ ಕೂಡ ಹೊರಬಂದಿರುವುದರಿಂದ, ಇಬ್ಬರ ನಡುವಿನ ತೀವ್ರ ಮುಖಾಮುಖಿಯ ದೃಶ್ಯ ಇದಾಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಶಾರುಖ್ ಖಾನ್ ಕಪ್ಪು ಬಣ್ಣದ ಮಸ್ಟಾಂಗ್ ಕಾರಿನಲ್ಲಿ ಶೂಟಿಂಗ್ ಮಾಡುತ್ತಿದ್ದಾಗಲೂ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ ಎಂಬ ವದಂತಿಗಳು ಹರಡಿದ್ದವು.

ಚಿತ್ರದ ದೃಶ್ಯಗಳು ಹೀಗೆ ಸತತವಾಗಿ ಲೀಕ್ ಆಗುತ್ತಿರುವುದಕ್ಕೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದು, ಸೆಟ್‌ನಿಂದ ಯಾವುದೇ ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳದಂತೆ ವಿನಂತಿಸಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮಾ ಅನುಭವ ನೀಡಲು ಇಡೀ ತಂಡ ಹಗಲಿರುಳು ಶ್ರಮಿಸುತ್ತಿದೆ, ಆದ್ದರಿಂದ ಚಿತ್ರಮಂದಿರದಲ್ಲಿ ಸಿಗುವ ಆಶ್ಚರ್ಯವನ್ನು ಹಾಳು ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ‘ಪಠಾಣ್’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ಶಾರುಖ್ ಖಾನ್ ಮತ್ತು ಸಿದ್ಧಾರ್ಥ್ ಆನಂದ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾವು ಡಿಸೆಂಬರ್ 24ರ ಕ್ರಿಸ್ಮಸ್ ಹಬ್ಬದ ರಜಾದಿನಗಳ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

Read More
Next Story