Kiara Advani| ಮಗಳ ಆಗಮನದ ನಂತರ ಹೆಣ್ಣು ಹುಲಿಯಾದೆ ಎಂದ ನಟಿ ಕಿಯಾರಾ ಅಡ್ವಾಣಿ
x

Kiara Advani| ಮಗಳ ಆಗಮನದ ನಂತರ 'ಹೆಣ್ಣು ಹುಲಿ'ಯಾದೆ ಎಂದ ನಟಿ ಕಿಯಾರಾ ಅಡ್ವಾಣಿ

ನಟಿ ಕಿಯಾರಾ ಅಡ್ವಾಣಿ ತಮ್ಮ ಮಗಳು ಸಾರಾಯಾ ಜನನದ ನಂತರದ ಬದಲಾವಣೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾಯ್ತನವು ತನ್ನನ್ನು 'ಹೆಣ್ಣು ಹುಲಿ'ಯಂತೆ ಮಾಡಿದೆ ಎಂದ ಕಿಯಾರಾ ತಿಳಿಸಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ನಟಿ ಕಿಯಾರಾ ಅಡ್ವಾಣಿ ಇದೀಗ ತಾಯ್ತನದ ಹೊಸ ಪಯಣವನ್ನು ಅತ್ಯಂತ ಸಂಭ್ರಮದಿಂದ ಆನಂದಿಸುತ್ತಿದ್ದಾರೆ. 2025ರ ಜುಲೈನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ದಂಪತಿ ತಮ್ಮ ಮೊದಲ ಮಗು, ಹೆಣ್ಣು ಮಗು 'ಸಾರಾಯಾ'ಳನ್ನು ಬರಮಾಡಿಕೊಂಡಿದ್ದರು. ಮಗಳ ಆಗಮನದ ನಂತರ ತಮ್ಮ ಜೀವನದಲ್ಲಿ ಉಂಟಾದ ಭಾವನಾತ್ಮಕ ಬದಲಾವಣೆಗಳ ಬಗ್ಗೆ ಕಿಯಾರಾ ಇತ್ತೀಚಿನ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಮಗುವನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ತಾನು ಈಗ ಒಬ್ಬ ‘ಹೆಣ್ಣು ಹುಲಿ’ಯಂತೆ ಬದಲಾಗಿದ್ದೇನೆ ಎಂದು ಕಿಯಾರಾ ಹೇಳಿದ್ದಾರೆ. "ಈಗ ನಾನು ಜೀವನವನ್ನು ಸಂಪೂರ್ಣವಾಗಿ ಹೊಸ ದೃಷ್ಟಿಕೋನದಿಂದ ನೋಡುತ್ತಿದ್ದೇನೆ. ಮಗಳಿಗಾಗಿ ಏನು ಮಾಡಲೂ ಸಿದ್ಧ ಎನ್ನುವಂತಹ ಅದಮ್ಯ ಶಕ್ತಿ ನನ್ನಲ್ಲಿ ಮೂಡಿದೆ" ಎಂದು ಅವರು ಭಾವಪರವಶರಾಗಿ ಹಂಚಿಕೊಂಡಿದ್ದಾರೆ. ಈ ಹಿಂದೆ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ನಟಿಯರು ಕೂಡ ತಾಯ್ತನದ ನಂತರ ಇಂತಹುದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಸಿದ್ದಾರ್ಥ್ ಜೊತೆಗಿನ ಬಾಂಧವ್ಯ ಮತ್ತಷ್ಟು ಗಟ್ಟಿ

ಮದುವೆ ಮತ್ತು ಮಗುವಿನ ನಂತರ ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಅವರು, "ಮದುವೆಗೆ ಮುಂಚೆ ನಾವು ಹೇಗೆ ತಮಾಷೆ ಮಾಡುತ್ತಾ, ಪ್ರವಾಸಗಳನ್ನು ಕೈಗೊಳ್ಳುತ್ತಾ ಸಮಯ ಕಳೆಯುತ್ತಿದ್ದೇವೋ, ಈಗಲೂ ಅದೇ ಪ್ರೀತಿ ಮುಂದುವರಿದಿದೆ. ನಾವು ಇಬ್ಬರೂ ಒಟ್ಟಿಗೆ ಕುಳಿತು ಸಿನಿಮಾಗಳನ್ನು ನೋಡುತ್ತೇವೆ ಮತ್ತು ನಟ-ನಟಿಯರಾಗಿ ಆ ಚಿತ್ರಗಳ ಬಗ್ಗೆ ಗಹನವಾಗಿ ಚರ್ಚಿಸುತ್ತೇವೆ. ಮಗು ಬಂದ ಮೇಲೆ ನಮ್ಮ ನಡುವಿನ ಆತ್ಮೀಯತೆ ಮತ್ತಷ್ಟು ಹೆಚ್ಚಾಗಿದೆ" ಎಂದು ತಿಳಿಸಿದ್ದಾರೆ.

ತಾಯ್ತನದ ಜವಾಬ್ದಾರಿಗಳ ನಡುವೆಯೂ ಕಿಯಾರಾ ಅಡ್ವಾಣಿ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. 2025ರಲ್ಲಿ ತೆರೆಕಂಡ 'ವಾರ್ 2' ಚಿತ್ರದ ಯಶಸ್ಸಿನ ನಂತರ, ಅವರು ಈಗ ಸೌತ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ನಲ್ಲಿ 'ನಾಡಿಯಾ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2026ರ ಜೂನ್ 4 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

Read More
Next Story