Kattalan Trailer| ಆಂಟೋನಿ ವರ್ಗೀಸ್ ಕಾಟ್ಟಾಲನ್ ಟ್ರೈಲರ್ ಔಟ್; ರವಿ ಬಸ್ರೂರ್ ಮ್ಯೂಸಿಕ್ ಕಿಕ್
x

ಆಂಟೋನಿ ವರ್ಗೀಸ್ ನಟನೆಯ 'ಕಾಟ್ಟಾಲನ್' ಟ್ರೈಲರ್ ಬಿಡುಗಡೆಯಾಗಿದೆ. 

'Kattalan' Trailer| ಆಂಟೋನಿ ವರ್ಗೀಸ್ 'ಕಾಟ್ಟಾಲನ್' ಟ್ರೈಲರ್ ಔಟ್; ರವಿ ಬಸ್ರೂರ್ ಮ್ಯೂಸಿಕ್ ಕಿಕ್

ಆಂಟೋನಿ ವರ್ಗೀಸ್ ನಟನೆಯ 'ಕಾಟ್ಟಾಲನ್' ಟ್ರೈಲರ್ ಔಟ್! ದಂತ ಚೋರರ ಕಥೆಯ ಈ ಚಿತ್ರದಲ್ಲಿ ಭಾರತದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಮ್ಯೂಸಿಕ್ ವೇರಿಯಂಟ್ ಪರಿಚಯಿಸಲಾಗಿದೆ.


Click the Play button to hear this message in audio format

ಖ್ಯಾತ ಮಲಯಾಳಂ ನಟ ಆಂಟೋನಿ ವರ್ಗೀಸ್ ಅಭಿನಯದ ಬಹುನಿರೀಕ್ಷಿತ 'ಕಾಟ್ಟಾಲನ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ವಿಭಿನ್ನವಾದ ಇಂಟರ್ಯಾಕ್ಟಿವ್ ಮ್ಯೂಸಿಕ್ ವೇರಿಯಂಟ್ ಮೂಲಕ ಹೊಸ ದಾಖಲೆ ಬರೆದಿದೆ. ಕ್ಯೂಬ್ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ನಿರ್ಮಿಸಿರುವ ಈ ಚಿತ್ರವು ಆನೆ ದಂತಗಳ ಅಕ್ರಮ ಸಾಗಾಣಿಕೆಯ ಕಥಾವಸ್ತುವನ್ನು ಹೊಂದಿದ್ದು, ಟ್ರೈಲರ್‌ನಲ್ಲೇ ಅತಿ ಭೀಕರ ಸಾಹಸ ದೃಶ್ಯಗಳ ಝಲಕ್ ತೋರಿಸಲಾಗಿದೆ.

ಕಾಟ್ಟಾಳನ್ ಸಿನಿಮಾ ತಾಂತ್ರಿಕತೆಯಲ್ಲಿ ವಿಭಿನ್ನ ಪ್ರಯೋಗದೊಂದಿಗೆ ಬರುತ್ತಿದೆ. ಪ್ರೇಕ್ಷಕರು ತಮಗೆ ಇಷ್ಟವಾದ ಹಿನ್ನೆಲೆ ಸಂಗೀತವನ್ನು ಆಯ್ಕೆ ಮಾಡಿಕೊಂಡು ಟ್ರೈಲರ್ ನೋಡಬಹುದು ಎನ್ನುವುದು ಇದರ ವಿಶೇಷತೆ. ಜಂಗಲ್ ಬೀಸ್ಟ್, ವೈಲ್ಡ್ ಬೀಸ್ಟ್ ಮತ್ತು ಓಷಿಯನ್ ಬೀಸ್ಟ್ ಎಂಬ ಮೂರು ವಿಭಿನ್ನ ಥೀಮ್‌ಗಳಲ್ಲಿ ಈ ಟ್ರೈಲರ್ ಅನ್ನು ಆನಂದಿಸಬಹುದು. ಭಾರತೀಯ ಸಿನಿಮಾದಲ್ಲಿಯೇ ಇಂತಹ ಪ್ರಯತ್ನ ಇದೇ ಮೊದಲು ಎನ್ನಲಾಗಿದೆ.

ಕೆಜಿಎಫ್ ಖ್ಯಾತಿಯ ನಂತರ ರವಿ ಬಸ್ರೂರ್ ಅವರು ಮಲಯಾಳಂ ಚಿತ್ರರಂಗಕ್ಕೆ ಬರುತ್ತಿರುವುದು ಈ ಸಿನಿಮಾದ ಮತ್ತೊಂದು ವಿಶೇಷತೆ. ಕಾಡಿನ ವನ್ಯತೆಯನ್ನು ಪ್ರತಿಬಿಂಬಿಸುವ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಕ್ಕಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಕಾಟ್ಟಾಳನ್ ಚಿತ್ರಕ್ಕೆ ಸ್ವರ ಸಂಯೋಜನೆ ಮಾಡುತ್ತಿದ್ದಾರೆ. ಉಣ್ಣಿ ಆರ್. ಅವರ ಸಂಭಾಷಣೆ ಮತ್ತು ಶಮೀರ್ ಮುಹಮ್ಮದ್ ಅವರ ಸಂಕಲನ ಈ ಸಿನಿಮಾಕ್ಕಿದೆ.

ಬಾಹುಬಲಿ ಮತ್ತು ಜವಾನ್ ಅಂತಹ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಶ್ವಪ್ರಸಿದ್ಧ ಸ್ಟಂಟ್ ಕೋರಿಯೋಗ್ರಾಫರ್ ಕೆಚಾ ಕೆಂಪಾಡಿಕ್ಕೆ ಕಾಟ್ಟಾಳನ್ ಚಿತ್ರದ ಸಾಹಸ ದೃಶ್ಯಗಳನ್ನು ಸಿದ್ಧಪಡಿಸಿದ್ದಾರೆ. ಥೈಲ್ಯಾಂಡ್‌ನ ಸಮರ ಕಲೆಗಳ ಹಿನ್ನೆಲೆಯಲ್ಲಿ ರೂಪಿಸಲಾದ ಆಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ. ವಿಶೇಷವೆಂದರೆ ಯಾವುದೇ ವಿಎಫ್‌ಎಕ್ಸ್ ಸಹಾಯವಿಲ್ಲದೆ ನೈಜ ಆನೆಗಳನ್ನು ಬಳಸಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಪಾಲ್ ಜಾರ್ಜ್ ನಿರ್ದೇಶನದ ಈ ಚಿತ್ರದಲ್ಲಿ ದುಶಾರ ವಿಜಯನ್, ಸುನಿಲ್ ಮತ್ತು ಕಬೀರ್ ದುಹಾನ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 140 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಈ ಸಿನಿಮಾವು ಇದೇ ಮೇ ತಿಂಗಳಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ರಕ್ತಸಿಕ್ತ ಸಂಘರ್ಷ, ದಂತ ಚೋರರ ಕರಾಳ ಜಗತ್ತು ಮತ್ತು ಸೇಡಿನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಚಿತ್ರದಲ್ಲಿ ಆಂಟನಿ ವರ್ಗೀಸ್ (ಪೆಪ್ಪೆ) ಜೊತೆಗೆ ತಮಿಳು ನಟಿ ದುಶಾರಾ ವಿಜಯನ್ ನಾಯಕಿಯಾಗಿ ನಟಿಸಿದ್ದಾರೆ. ಸುನಿಲ್, ಕಬೀರ್ ಸಿಂಗ್, ಜಗದೀಶ್, ಸಿದ್ದಿಕ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಕರ್ನಾಟಕದ ವಿತರಣಾ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ.

Read More
Next Story