ʻಜೈಲರ್ 2  ಚಿತ್ರಕ್ಕೆ ಶಾರುಖ್​​ ಖಾನ್ ಎಂಟ್ರಿ?​
x

  ಶಾರುಖ್ ಖಾನ್

ʻಜೈಲರ್ 2' ಚಿತ್ರಕ್ಕೆ ಶಾರುಖ್​​ ಖಾನ್ ಎಂಟ್ರಿ?​

ರಜನಿಕಾಂತ್ ಮತ್ತು ಶಾರುಖ್ ಖಾನ್ ಈ ಹಿಂದೆ 'ರಾ ಒನ್' ಚಿತ್ರದ ಅತಿಥಿ ಪಾತ್ರ ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ಹಾಡಿನ ಮೂಲಕ ಪರಸ್ಪರ ಗೌರವ ಸಲ್ಲಿಸಿದ್ದರಾದರೂ, ಪೂರ್ಣ ಪ್ರಮಾಣದಲ್ಲಿ ಒಂದೇ ದೃಶ್ಯದಲ್ಲಿ ನಟಿಸಿರಲಿಲ್ಲ.


Click the Play button to hear this message in audio format

ಸ್ಟಾರ್ ಶಾರುಖ್ ಖಾನ್ ಮತ್ತು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಇದೇ ಮೊದಲ ಬಾರಿಗೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರದ ಮೂಲಕ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಬ್ರೇಕ್‌ ಬಿದ್ದಿದೆ.

ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಮೋಹನ್‌ಲಾಲ್ ಅವರ ಸ್ಟೈಲಿಸ್ಟ್ ಜಿಶಾದ್ ಶಂಸುದ್ದೀನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಈ ಸುದ್ದಿಯನ್ನು ಬಹುತೇಕ ಖಚಿತಪಡಿಸಿದೆ. ಶಾರುಖ್ ಖಾನ್, ಮೋಹನ್ ಲಾಲ್, ರಜನಿಕಾಂತ್ ಮತ್ತು ಶಿವರಾಜ್‌ಕುಮಾರ್ ಒಂದೇ ಫ್ರೇಮ್‌ನಲ್ಲಿರುವ ಎಐ ಚಿತ್ರವನ್ನು ಹಂಚಿಕೊಂಡಿರುವ ಜಿಶಾದ್, ಇಂತಹ ದೃಶ್ಯ ಖಂಡಿತವಾಗಿಯೂ ಇರಲಿದೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಹಿರಿಯ ನಟ ಮಿಥುನ್ ಚಕ್ರವರ್ತಿ ಕೂಡ 'ಜೈಲರ್ 2' ಚಿತ್ರದಲ್ಲಿ ಶಾರುಖ್ ಖಾನ್ ಅವರ ಪಾತ್ರದ ಬಗ್ಗೆ ಸುಳಿವು ನೀಡಿದ್ದರು. ಚಿತ್ರದಲ್ಲಿ ರಜನಿಕಾಂತ್, ಮೋಹನ್‌ಲಾಲ್, ಶಾರುಖ್ ಖಾನ್ ಮತ್ತು ಶಿವರಾಜ್‌ಕುಮಾರ್ ಎಲ್ಲರೂ ತಮ್ಮ ವಿರುದ್ಧ ಹೋರಾಡಲಿದ್ದಾರೆ ಎಂದು ಹೇಳುವ ಮೂಲಕ ಅವರು ಚಿತ್ರದ ಖಳನಾಯಕನ ಪಾತ್ರವನ್ನು ತಾವೇ ನಿರ್ವಹಿಸುತ್ತಿರುವುದನ್ನು ಪರೋಕ್ಷವಾಗಿ ಬಹಿರಂಗಪಡಿಸಿದ್ದರು. ಮೊದಲ ಭಾಗದಲ್ಲಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಎರಡನೇ ಭಾಗದಲ್ಲೂ ಮುಂದುವರಿಯಲಿದ್ದು, ಅವರೊಂದಿಗೆ ಶಾರುಖ್ ಖಾನ್ ಸೇರ್ಪಡೆಯಾಗುತ್ತಿದ್ದಾರೆ ಎನ್ನಲಾಗಿದೆ.

ರಜನಿಕಾಂತ್ ಮತ್ತು ಶಾರುಖ್ ಖಾನ್ ಈ ಹಿಂದೆ 'ರಾ ಒನ್' ಚಿತ್ರದ ಅತಿಥಿ ಪಾತ್ರ ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ಹಾಡಿನ ಮೂಲಕ ಪರಸ್ಪರ ಗೌರವ ಸಲ್ಲಿಸಿದ್ದರಾದರೂ, ಪೂರ್ಣ ಪ್ರಮಾಣದಲ್ಲಿ ಒಂದೇ ದೃಶ್ಯದಲ್ಲಿ ನಟಿಸಿರಲಿಲ್ಲ. 'ಜೈಲರ್ 2' ಈ ಇಬ್ಬರು ದಗ್ಗಜ ನಟರನ್ನು ಒಟ್ಟಾಗಿ ನೋಡುವ ಅಭಿಮಾನಿಗಳ ದಶಕಗಳ ಕನಸನ್ನು ನನಸು ಮಾಡಲಿದೆ. ಈ ಚಿತ್ರವು ಎಪ್ರಿಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದ್ದು, ವಿಜಯ ಸೇತುಪತಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಶನ್‌ನ 'ಜೈಲರ್' ಚಿತ್ರವು 2023ರ ಆಗಸ್ಟ್ 10 ರಂದು ಬಿಡುಗಡೆಯಾಗಿತ್ತು ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡು ಸುಮಾರು 600 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ವಿದೇಶಗಳಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

Read More
Next Story