ರಾಜು, ಶ್ಯಾಮ್, ಬಾಬುರಾವ್ ಆಗಮನಕ್ಕೆ ಮತ್ತೆ ಬ್ರೇಕ್?
x

ರಾಜು, ಶ್ಯಾಮ್ ಮತ್ತು ಬಾಬುರಾವ್ ಜೋಡಿಯನ್ನ ಬೆಳ್ಳಿತೆರೆಯ ಮೇಲೆ ನೋಡಲು ಸಿನಿಪ್ರಿಯರು ಕಾತುರರಾಗಿದ್ದರೂ, ಕಾನೂನು ಹೋರಾಟ ಮಾತ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ರಾಜು, ಶ್ಯಾಮ್, ಬಾಬುರಾವ್ ಆಗಮನಕ್ಕೆ ಮತ್ತೆ ಬ್ರೇಕ್?

ಮೂಲ ಮಲಯಾಳಂ ಚಿತ್ರ 'ರಾಮೋಜಿ ರಾವ್ ಸ್ಪೀಕಿಂಗ್'ನ ಹಿಂದಿ ರಿಮೇಕ್ ಹಕ್ಕುಗಳನ್ನು ಕೇವಲ ಒಂದು ಬಾರಿ ಮಾತ್ರ ಫಿರೋಜ್ ನಾಡಿಯಾಡ್ವಾಲಾ ಅವರಿಗೆ ನೀಡಲಾಗಿತ್ತು.


Click the Play button to hear this message in audio format

ಖ್ಯಾತ ಬಾಲಿವುಡ್ ಹಾಸ್ಯ ಚಲನಚಿತ್ರ ಸರಣಿ 'ಹೇರಾ ಫೇರಿ'ಯ ಮೂರನೇ ಭಾಗಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಎರಡು ದಶಕಗಳಿಂದ ರಾಜು, ಶ್ಯಾಮ್ ಮತ್ತು ಬಾಬುರಾವ್ ಜೋಡಿಯನ್ನ ಬೆಳ್ಳಿತೆರೆಯ ಮೇಲೆ ನೋಡಲು ಸಿನಿಪ್ರಿಯರು ಕಾತುರರಾಗಿದ್ದರೂ, ಈ ಚಿತ್ರದ ಹಕ್ಕುಗಳ ಕುರಿತಾದ ಕಾನೂನು ಹೋರಾಟ ಮಾತ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ, ಖ್ಯಾತ ನಿರ್ಮಾಣ ಸಂಸ್ಥೆಯೊಂದು ಈ ಚಿತ್ರದ ಹಕ್ಕುಗಳನ್ನು ಮೂರನೇ ವ್ಯಕ್ತಿಯಿಂದ ಸುಮಾರು 80 ಕೋಟಿ ರೂಪಾಯಿಗಳಿಗೆ ಖರೀದಿಸಲು ಮುಂದಾಗಿತ್ತು. ಆದರೆ, ಈ ಸುದ್ದಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ವಿಜಯ್ ಕುಮಾರ್ ಅವರು ತಳ್ಳಿಹಾಕಿದ್ದಾರೆ. ಇಡೀ 'ಹೇರಾ ಫೇರಿ' ಫ್ರಾಂಚೈಸಿಯ ಐಪಿ ಹಕ್ಕುಗಳು ತಮ್ಮ ಬಳಿಯೇ ಇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫಿರೋಜ್ ನಾಡಿಯಾಡ್ವಾಲಾ ವಿರುದ್ಧ ಆರೋಪ

ನಿರ್ಮಾಪಕ ವಿಜಯ್ ಕುಮಾರ್ ಅವರ ಪ್ರಕಾರ, ಮೂಲ ಚಿತ್ರವಾದ 'ರಾಮೋಜಿ ರಾವ್ ಸ್ಪೀಕಿಂಗ್' ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಕೇವಲ ಒಂದು ಬಾರಿ ಮಾತ್ರ ಫಿರೋಜ್ ನಾಡಿಯಾಡ್ವಾಲಾ ಅವರಿಗೆ ನೀಡಲಾಗಿತ್ತು. ಆದರೆ ಫಿರೋಜ್ ಅವರು ಅನುಮತಿಯಿಲ್ಲದೆ ಎರಡನೇ ಭಾಗವನ್ನು ನಿರ್ಮಿಸಿದ್ದರು. ಈಗ ಮೂರನೇ ಭಾಗಕ್ಕೂ ತಯಾರಿ ನಡೆಸುತ್ತಿರುವುದು ಮತ್ತು ಹಕ್ಕುಗಳನ್ನು ಇತರರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವುದು ಕಾನೂನುಬಾಹಿರ ಎಂದು ಅವರು ದೂರಿದ್ದಾರೆ.

ನ್ಯಾಯಾಲಯದಲ್ಲಿ ಹೋರಾಟ

ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಜಯ್ ಕುಮಾರ್ ಅವರು ಫಿರೋಜ್ ನಾಡಿಯಾಡ್ವಾಲಾ ವಿರುದ್ಧ ಐಪಿಆರ್ ಮೊಕದ್ದಮೆ ಹೂಡಿದ್ದಾರೆ. ಫಿರೋಜ್ ಅವರು ವಿಚಾರಣೆಗೆ ಹಾಜರಾಗದೆ ಪ್ರಕರಣವನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹಕ್ಕುಗಳು ತಮ್ಮ ಪರವಾಗಿಯೇ ಇವೆ ಎಂದು ನ್ಯಾಯಾಲಯ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಹೇಳಿರುವ ವಿಜಯ್ ಕುಮಾರ್, ಈ ಗೊಂದಲ ಬಗೆಹರಿಯುವವರೆಗೂ ಚಿತ್ರದ ಹಕ್ಕುಗಳನ್ನು ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಹೊಸ ತಲೆಮಾರಿನ ನಟರೊಂದಿಗೆ ಚಿತ್ರವನ್ನು ಮರುರೂಪಿಸುವ ಬಗ್ಗೆ ಕೇಳಿಬಂದಿದ್ದ ಸುದ್ದಿಗಳು ಕೇವಲ ವದಂತಿಗಳಾಗಿವೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರೇ ಈ ಚಿತ್ರಕ್ಕೆ ಸೂಕ್ತ ನಟರು ಎಂಬುದು ವಿಜಯ್ ಕುಮಾರ್ ಅವರ ಅಭಿಪ್ರಾಯವಾಗಿದೆ. ಸದ್ಯಕ್ಕೆ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ, ಈ ಚಿತ್ರ ಸೆಟ್ಟೇರಲು ಅಭಿಮಾನಿಗಳು ಇನ್ನು ಸ್ವಲ್ಪ ಸಮಯ ಕಾಯುವುದು ಅನಿವಾರ್ಯವಾಗಿದೆ.

Read More
Next Story