Dhanveers much-awaited film Hayagriva to hit the screens on February 27
x

ಸಿನಿಮಾದಲ್ಲಿ ನಟ ಧನ್ವೀರ್‌

ಫೆಬ್ರವರಿ 27 ರಂದು ಧನ್ವೀರ್ ಅಭಿನಯದ ಬಹು ನಿರೀಕ್ಷಿತ "ಹಯಗ್ರೀವ" ತೆರೆಗೆ

ಚಿತ್ರದ ಕಥೆಯನ್ನು ಇಂಡಿಯನ್ ಮೈಥಾಲಜಿ ಪ್ರಮುಖವಾಗಿಟ್ಟುಕೊಂಡು ಹೆಣೆಯಲಾಗಿದೆ. ಈ ರೀತಿಯ ಕಥೆ ಕನ್ನಡದಲ್ಲಿ ಅಪರೂಪ ಎನ್ನಬಹುದು ಎಂದು ನಿರ್ದೇಶಕ ರಘುಕುಮಾರ್ ತಿಳಿಸಿದ್ದಾರೆ.


Click the Play button to hear this message in audio format

ಧನ್ವೀರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಹಯಗ್ರೀವ" ಚಿತ್ರ ಫೆ. 27 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಮಂಗಳವಾರ (ಫೆ.24) ಚಿತ್ರದ ಕುರಿತು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡಿ, "ಹಯಗ್ರೀವ" ನಮ್ಮ ಸಂಸ್ಥೆಯ ಮೂರನೇ ಚಿತ್ರ. ನಾನು ಚಿತ್ರಪ್ರೇಮಿ. ಹೆಚ್ಚು ಚಿತ್ರಗಳನ್ನು ನೋಡುತ್ತಿರುತ್ತೇನೆ.‌ ರಘುಕುಮಾರ್ ನಿರ್ದೇಶಿಸಿದ್ದ ಕಿರುಚಿತ್ರ ನೋಡಿದ್ದೆ. ಬಹಳ ಇಷ್ಟವಾಗಿತ್ತು. ಅವರನ್ನು ಕರೆದು ಒಂದೊಳ್ಳೆ ಕಥೆ ಇದ್ದರೆ ಸಿನಿಮಾ ಮಾಡೋಣ ಅಂತ ಹೇಳಿದೆ. ಅವರು ಈ ಚಿತ್ರದ ಕಥೆ ಹೇಳಿದರು. ನಟ ದರ್ಶನ್ ಮೂಲಕ ಧನ್ವೀರ್ ಪರಿಚಯವಾಯಿತು. ಧನ್ವೀರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಕನ್ನಡದಲ್ಲಿ ತೀರ ಅಪರೂಪದ ಕಥೆ ಇದು. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು. ಇದೇ ಫೆ. 27 ರಂದು "ಹಯಗ್ರೀವ" ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ‌. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಟ ಧನ್ವೀರ್‌ ಮಾತನಾಡಿದರು.

ತಾರಾಬಳಗ

ನಿರ್ದೇಶಕ ರಘುಕುಮಾರ್ ಮಾತನಾಡಿ, ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕರಿಗೆ ಧನ್ಯವಾದ. ಚಿತ್ರದ ಕಥೆಯನ್ನು ಇಂಡಿಯನ್ ಮೈಥಾಲಜಿನ್ನು ಪ್ರಮುಖವಾಗಿಟ್ಟುಕೊಂಡು ಹೆಣೆಯಲಾಗಿದೆ. ಈ ರೀತಿಯ ಕಥೆ ಕನ್ನಡದಲ್ಲಿ ಅಪರೂಪ ಎನ್ನಬಹುದು. ಧನ್ವೀರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಶೈಲೇಶ್ ಕುಮಾರ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ದ್ವಿಪಾತ್ರದಲ್ಲಿ ನಟ

ನಟ ಧನ್ವೀರ್ ಮಾತನಾಡಿ, ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ದರ್ಶನ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದರು. ನಿರ್ದೇಶಕ ರಘುಕುಮಾರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಕಥೆ ಹೇಳಿದ ರೀತಿಯಲ್ಲೇ ಚಿತ್ರವನ್ನು ತೆರೆಯ ಮೇಲೂ ತಂದಿದ್ದಾರೆ. ಎರಡು ಶೇಡ್‌ಗಳಲ್ಲಿ ನನ್ನ ಪಾತ್ರವಿರುತ್ತದೆ. ಒಂದು ಪೊಲೀಸ್ ಅಧಿಕಾರಿ ಪಾತ್ರ. ಮತ್ತೊಂದು ಏನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ನಾಯಕಿ ಸಂಜನಾ ಆನಂದ್ ಚೆನ್ನಾಗಿ ನಟಿಸಿದ್ದಾರೆ. ಹಿರಿಯ ಕಲಾವಿದರ ಜೊತೆಗೆ ಅಭಿನಯಿದ್ದು ಬಹಳ ಖುಷಿಯಾಯಿತು. ಮೊದಲಿನಿಂದಲೂ ನೀವೆಲ್ಲರೂ ನೀಡುತ್ತಾ ಬಂದಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ ಎಂದರು.

ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ ನಾಯಕಿ ಸಂಜನಾ ಆನಂದ್, ಚಿತ್ರತಂಡಕ್ಕೆ ಧನ್ಯವಾದ ಹೇಳಿದರು‌. ಚಿತ್ರದಲ್ಲಿ ನಟಿಸಿರುವ ನಟ ಅಶ್ವಿನ್ ಹಾಸನ್ ಹಾಗೂ ನಟಿ ಆಶಾರಾಣಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.‌

Read More
Next Story