Kara| ಧನುಷ್ ಅಭಿನಯದ ‘ಕಾರಾ’ ರಿಲೀಸ್ ಡೇಟ್ ಫಿಕ್ಸ್
x

ಧನುಷ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಕಾರಾ' ಸಿನಿಮಾ ಏಪ್ರಿಲ್ 30 ರಂದು ತೆರೆಗೆ ಬರಲಿದೆ. 

Kara| ಧನುಷ್ ಅಭಿನಯದ ‘ಕಾರಾ’ ರಿಲೀಸ್ ಡೇಟ್ ಫಿಕ್ಸ್

ವೇಲ್ಸ್ ವಿಶ್ವವಿದ್ಯಾಲಯದ 'ವೇಲ್ಸ್ ನಕ್ಷತ್ರ 2026' ಸಾಂಸ್ಕೃತಿಕ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ನಿರ್ಮಾಪಕ ಐಶಾರಿ ಕೆ ಗಣೇಶ್ ಅವರು ಈ ಅಧಿಕೃತ ಘೋಷಣೆ ಮಾಡಿದ್ದಾರೆ.


Click the Play button to hear this message in audio format

ಕಾಲಿವುಡ್‌ನ ನಟ ಧನುಷ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಕಾರಾ' ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರಲಿದೆ. ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ರಾಜಾ ಮತ್ತು ಧನುಷ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ.

ವೇಲ್ಸ್ ವಿಶ್ವವಿದ್ಯಾಲಯದ 'ವೇಲ್ಸ್ ನಕ್ಷತ್ರ 2026' ಸಾಂಸ್ಕೃತಿಕ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ನಿರ್ಮಾಪಕ ಐಶಾರಿ ಕೆ ಗಣೇಶ್ ಅವರು ಈ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಧನುಷ್ ಅವರೊಂದಿಗೆ 'ವಡಾ ಚೆನ್ನೈ 2' ಮಾಡುವುದು ನನ್ನ ಕನಸಿನ ಪ್ರಾಜೆಕ್ಟ್ ಆಗಿದೆ, ಆದರೆ ಸದ್ಯಕ್ಕೆ ನಮ್ಮ ನಿರ್ಮಾಣದ 'ಕಾರಾ' ಚಿತ್ರವು ಏಪ್ರಿಲ್ ಅಂತ್ಯಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಮಾಹಿತಿ ನೀಡಿದರು.

ಈ ಚಿತ್ರವು ಆರಂಭದಿಂದಲೂ ಸಿನಿರಂಗದಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿತ್ತು. ಈ ಹಿಂದೆ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಧನುಷ್ ಅವರ ರಗಡ್ ಲುಕ್ ಅಭಿಮಾನಿಗಳ ಗಮನ ಸೆಳೆದಿತ್ತು. "ಜೀವಂತವಾಗಿರಲು ಕೆಲವೊಮ್ಮೆ ಅಪಾಯಕಾರಿಯಾಗಿರುವುದೇ ಏಕೈಕ ಮಾರ್ಗ" ಎಂಬ ಕ್ಯಾಪ್ಷನ್ ಮೂಲಕ ಇದೊಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಎಂಬ ಮುನ್ಸೂಚನೆಯನ್ನು ಚಿತ್ರತಂಡ ನೀಡಿತ್ತು. ಚಿತ್ರದ ಚಿತ್ರೀಕರಣದ ವೇಳೆ ಧನುಷ್ ಅವರು ಎಸ್‌ಟಿಡಿ ಬೂತ್‌ನಲ್ಲಿ ಫೋನ್ ಮಾತನಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದು ಸಿನಿಮಾದ ಕಥಾಹಂದರವು ಹಳೆಯ ಕಾಲದ ಅಥವಾ ಭಾವುಕ ಹಿನ್ನೆಲೆಯುಳ್ಳದ್ದಾಗಿರಬಹುದು ಎಂಬ ಚರ್ಚೆಗೆ ಕಾರಣವಾಗಿದೆ.

ವಿಶೇಷವೆಂದರೆ, ಕಳೆದ ವರ್ಷ ಸೌತ್ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ 'ಪೋರ್ ತೊಳಿಲ್' ಎಂಬ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ನೀಡಿದ ವಿಘ್ನೇಶ್ ರಾಜಾ ಮತ್ತು ಆಲ್ಫ್ರೆಡ್ ಪ್ರಕಾಶ್ ಜೋಡಿ ಈ ಚಿತ್ರಕ್ಕೆ ಕಥೆ ಬರೆದಿದೆ. ಚಿತ್ರದಲ್ಲಿ ಮಮಿತಾ ಬೈಜು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಜಯರಾಮ್, ಸೂರಜ್ ವೆಂಜಾರಮೂಡು, ಕೆ.ಎಸ್. ರವಿಕುಮಾರ್ ಮತ್ತು ಕರುಣಾಸ್ ಅವರಂತಹ ಅನುಭವಿ ಕಲಾವಿದರ ದಂಡೇ ಇದೆ. ರಾಷ್ಟ್ರಪ್ರಶಸ್ತಿ ವಿಜೇತ ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದು, ತೇನಿ ಈಶ್ವರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Read More
Next Story