ಪ್ರೇಮಿಗಳ ದಿನಕ್ಕೆ ರಿ- ರಿಲೀಸ್‌ ಆಗಲಿದೆ ಈ ರೊಮ್ಯಾಂಟಿಕ್‌ ಸಿನಿಮಾ
x

ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಚಿತ್ರಗಳಾದ ದೇವದಾಸ್, ಯುವ ಮತ್ತು ತೇರೆ ನಾಮ್ ಈ ಫೆಬ್ರವರಿಯಲ್ಲಿ ಮತ್ತೆ ಬೆಳ್ಳಿತೆರೆಯ ಮೇಲೆ ಅಬ್ಬರಿಸಲಿವೆ.

ಪ್ರೇಮಿಗಳ ದಿನಕ್ಕೆ ರಿ- ರಿಲೀಸ್‌ ಆಗಲಿದೆ ಈ ರೊಮ್ಯಾಂಟಿಕ್‌ ಸಿನಿಮಾ

ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಚಿತ್ರಗಳಾದ ದೇವದಾಸ್, ಯುವ ಮತ್ತು ತೇರೆ ನಾಮ್ ಈ ಫೆಬ್ರವರಿಯಲ್ಲಿ ಮತ್ತೆ ಬೆಳ್ಳಿತೆರೆಯ ಮೇಲೆ ಅಬ್ಬರಿಸಲಿವೆ.


Click the Play button to hear this message in audio format

ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿರುವ 'ದೇವದಾಸ್' ಈ ತಿಂಗಳು ಪ್ರೇಮಿಗಳ ದಿನದ ಮುನ್ನಾದಿನದಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲು ಸಿದ್ಧವಾಗಿದೆ. ಇದರೊಂದಿಗೆ ಸಲ್ಮಾನ್ ಖಾನ್ ಅಭಿನಯದ 'ತೇರೆ ನಾಮ್' ಮತ್ತು ಮಣಿರತ್ನಂ ನಿರ್ದೇಶನದ 'ಯುವ' ಚಿತ್ರಗಳೂ ಕೂಡ ರೀ-ರಿಲೀಸ್ ಆಗಲಿದೆ.

'ದೇವದಾಸ್' ಈ ತಿಂಗಳು ಪ್ರೇಮಿಗಳ ದಿನದ ಮುನ್ನಾದಿನದಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲು ಸಿದ್ಧವಾಗಿದೆ.

2002ರಲ್ಲಿ ಬಿಡುಗಡೆಯಾಗಿದ್ದ 'ದೇವದಾಸ್' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರವು ಶರತ್ ಚಂದ್ರ ಅವರ ಕಾದಂಬರಿಯ ರೂಪಾಂತರವಾಗಿದ್ದು, ಶಾರುಖ್ ಖಾನ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಆ ಕಾಲದ ಅತ್ಯಂತ ದುಬಾರಿ ಭಾರತೀಯ ಚಿತ್ರವಾಗಿದ್ದ ಇದು ಕಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಈ ಸಂಗೀತಮಯ ಪ್ರೇಮಕಥೆಯು ದೇವದಾಸ್ ಮುಖರ್ಜಿ ತನ್ನ ಶ್ರೀಮಂತ ಕುಟುಂಬವು ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ನಂತರ ಅನುಭವಿಸುವ ನೋವಿನ ಸುತ್ತ ಸುತ್ತುತ್ತದೆ. ಆ ನೋವನ್ನು ಮರೆಯಲು ಮದ್ಯಪಾನ ಮತ್ತು ಕೆಟ್ಟ ಚಟಗಳಿಗೆ ಬಲಿಯಾಗಿ ಅವನ ಜೀವನ ಹೇಗೆ ಹದಗೆಡುತ್ತದೆ ಎಂಬುವುದನ್ನು ಈ ಸಿನಿಮಾ ತೋರಿಸಿಕೊಟ್ಟಿದೆ.

ತೇರೆ ನಾಮ್

ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ನಟನೆಯ ತೇರೆ ನಾಮ್‌, 1999ರ ತಮಿಳು ಚಿತ್ರ ಸೇತುವಿನ ರಿಮೇಕ್ ಆಗಿದೆ. ಈ ಸಿನಿಮಾ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಇದರ ಮರು-ಬಿಡುಗಡೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ನಟನೆಯ ತೇರೆ ನಾಮ್‌

ಯುವ

ಮಣಿರತ್ನಂ ನಿರ್ದೇಶನದ 'ಯುವ' ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ವಿವೇಕ್ ಒಬೆರಾಯ್, ಇಶಾ ಡಿಯೋಲ್, ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

2004ರ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಮೂವರು ಯುವಕರ ಕಥೆ ಮತ್ತು ಒಂದು ವಿಧಿಯಾಟದ ಘಟನೆ ಅವರ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಿದೆ.

Read More
Next Story