ಮೊದಲ ದಿನ ಕೇವಲ 1 ಕೋಟಿ ಗಳಿಸಿದ ಕಂಗನಾ ರಣಾವತ್ ಅವರ ಭಾರತ್ ಭಾಗ್ಯ ವಿಧಾತಾ
x

'ಭಾರತ್ ಭಾಗ್ಯ ವಿಧಾತಾ' ಸಿನಿಮಾದಲ್ಲಿ ಧೈರ್ಯಶಾಲಿ ಆರೋಗ್ಯ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್.

ಮೊದಲ ದಿನ ಕೇವಲ 1 ಕೋಟಿ ಗಳಿಸಿದ ಕಂಗನಾ ರಣಾವತ್ ಅವರ 'ಭಾರತ್ ಭಾಗ್ಯ ವಿಧಾತಾ'

ಕಂಗನಾ ರಣಾವತ್ ನಟನೆಯ 'ಭಾರತ್ ಭಾಗ್ಯ ವಿಧಾತಾ' ಮೊದಲ ದಿನ ಕೇವಲ 1 ಕೋಟಿ ರೂ. ಗಳಿಸಿದೆ. ಉತ್ತಮ ವಿಮರ್ಶೆಗಳಿದ್ದರೂ ಈ ಸಿನಿಮಾ ಕಂಗನಾ ಅವರ 'ಎಮರ್ಜೆನ್ಸಿ' ಚಿತ್ರದ ಓಪನಿಂಗ್ ದಾಖಲೆ ಮುರಿಯಲು ವಿಫಲವಾಗಿದೆ.


Click the Play button to hear this message in audio format

ಬಾಲಿವುಡ್ ನಟಿ ಕಂಗನಾ ರಣಾವತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ್ ಭಾಗ್ಯ ವಿಧಾತಾ’ ಸಿನಿಮಾ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಚಲನಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದರೂ ಸಹ, ಚಿತ್ರಮಂದಿರಗಳತ್ತ ಜನರನ್ನು ಸೆಳೆಯುವಲ್ಲಿ ಸಿನಿಮಾ ಸಂಪೂರ್ಣವಾಗಿ ವಿಫಲವಾಗಿದೆ. ಈ ಮೂಲಕ ಕಂಗನಾ ರಣಾವತ್ ಅವರ ಹಿಂದಿನ ಫ್ಲಾಪ್ ಸಿನಿಮಾಗಳ ಸಾಲಿಗೆ ಮತ್ತೊಂದು ಚಿತ್ರ ಸೇರಿದಂತಾಗಿದೆ.

ಟ್ರೇಡ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಮನೋಜ್ ತಪಾಡಿಯಾ ನಿರ್ದೇಶನದ ಈ ಚಿತ್ರವು ದೇಶದಾದ್ಯಂತ 2,181 ಶೋಗಳನ್ನು ಹೊಂದಿದ್ದರೂ, ಮೊದಲ ದಿನ ಕೇವಲ 1 ಕೋಟಿ ರೂಪಾಯಿ (ನೆಟ್) ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಕೇವಲ ಶೇಕಡಾ 11 ರಷ್ಟು ಮಾತ್ರ ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ. ಶುಕ್ರವಾರದ ರೇಸ್‌ನಲ್ಲಿ ದಿಲ್ಜಿತ್ ದೋಸಾಂಜ್ ಅವರ ‘ಮೈ ವಾಪಸ್ ಆವುಂಗಾ’ ಮತ್ತು ಮನೋಜ್ ಬಾಜಪೇಯಿ ಅವರ ‘ಗವರ್ನರ್’ ಚಿತ್ರಗಳ ತೀವ್ರ ಪೈಪೋಟಿ ಕೂಡ ಈ ಸಿನಿಮಾದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.

ವಿಶೇಷವೆಂದರೆ, ಕಂಗನಾ ಅವರ ಹಿಂದಿನ ವಿವಾದಾತ್ಮಕ ಚಿತ್ರಗಳಾದ ‘ಎಮರ್ಜೆನ್ಸಿ’ ಮೊದಲ ದಿನ 2.50 ಕೋಟಿ ರೂಪಾಯಿ ಹಾಗೂ ‘ತೇಜಸ್’ ಸಿನಿಮಾ 1.25 ಕೋಟಿ ರೂಪಾಯಿ ಗಳಿಸಿದ್ದವು. ಆದರೆ ‘ಭಾರತ್ ಭಾಗ್ಯ ವಿಧಾತಾ’ ಕೇವಲ ಒಂದು ಕೋಟಿ ಗಳಿಸುವ ಮೂಲಕ ಕಂಗನಾ ವೃತ್ತಿಜೀವನದಲ್ಲೇ ಅತ್ಯಂತ ಕಳಪೆ ಓಪನಿಂಗ್ ಪಡೆದ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರವು ವೀಕೆಂಡ್‌ನಲ್ಲಾದರೂ ಚೇತರಿಸಿಕೊಂಡು ಹೆಚ್ಚಿನ ಕಲೆಕ್ಷನ್ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story