ಹಾರರ್‌, ಕಾಮಿಡಿ ಸಮ್ಮಿಶ್ರಣದ ಭೂತ್ ಬಂಗ್ಲಾ ಟೀಸರ್ ಔಟ್
x

ಗುರುವಾರ ಬಿಡುಗಡೆಯಾದ ಈ ಚಿತ್ರದ ಟೀಸರ್ ಅಕ್ಷಯ್ ಕುಮಾರ್ ಅವರ ಹಳೆಯ ಕಾಮಿಡಿ ಶೈಲಿಯನ್ನು ನೆನಪಿಸುವಂತಿದೆ.

ಹಾರರ್‌, ಕಾಮಿಡಿ ಸಮ್ಮಿಶ್ರಣದ 'ಭೂತ್ ಬಂಗ್ಲಾ' ಟೀಸರ್ ಔಟ್

'ಭೂತ್ ಬಂಗ್ಲಾ'ಚಿತ್ರದಲ್ಲಿ ಟಬು, ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ವಮಿಖಾ ಗಬ್ಬಿ ಅವರಂತಹ ಪ್ರಮುಖ ನಟರ ದಂಡೇ ಇದೆ.


Click the Play button to hear this message in audio format

ಬಾಲಿವುಡ್‌ನ ಹಿಟ್ ಜೋಡಿ ಅಕ್ಷಯ್ ಕುಮಾರ್ ಮತ್ತು ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ನಂತರ ಮತ್ತೆ ಒಂದಾಗಿದ್ದು, ಇವರ ಬಹುನಿರೀಕ್ಷಿತ ಚಿತ್ರ 'ಭೂತ್ ಬಂಗ್ಲಾ' ಸಿನಿಮಾದ ಟೀಸರ್ ಗುರುವಾರ ಬಿಡುಗಡೆಯಾಗಿದೆ.

1 ನಿಮಿಷ 23 ಸೆಕೆಂಡ್‌ಗಳ ಈ ಟೀಸರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಅಕ್ಷಯ್ ಕುಮಾರ್ ತಮ್ಮ ಹಳೆಯ ಹಾಸ್ಯ ಶೈಲಿಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮಂಗಲ್‌ಪುರದ ವಧುಸೂರನ ಭಯಾನಕ ಹಿನ್ನೆಲೆಯೊಂದಿಗೆ ಆರಂಭವಾಗುವ ಈ ಟೀಸರ್‌ನಲ್ಲಿ ಅಕ್ಷಯ್ ಕುಮಾರ್ ಅರಮನೆಯೊಂದನ್ನು ಪರಂಪರೆಯಾಗಿ ಪಡೆಯುವ ದೃಶ್ಯವಿದೆ.

'ಭೂತ್ ಬಂಗ್ಲಾ' ಸಿನಿಮಾದ ಟೀಸರ್

ಚಿತ್ರದಲ್ಲಿ ಪರೇಶ್ ರಾವಲ್, ಟಬು, ರಾಜ್‌ಪಾಲ್ ಯಾದವ್ ಮತ್ತು ವಮಿಖಾ ಗಬ್ಬಿ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದ್ದು, ಇದು 2007ರ ಸಾರ್ವಕಾಲಿಕ ಹಿಟ್ ಸಿನಿಮಾ 'ಭೂಲ್ ಭುಲೈಯಾ' ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದ್ದು, ನೆಟ್ಟಿಗರು ಇದನ್ನು ಅಸಲಿ 'ಭೂಲ್ ಭುಲೈಯಾ 2' ಎಂದು ಬಣ್ಣಿಸುತ್ತಿದ್ದಾರೆ. ಅನೀಸ್ ಬಾಜ್ಮಿ ನಿರ್ದೇಶನದ ಮತ್ತು ಕಾರ್ತಿಕ್ ಆರ್ಯನ್ ನಟನೆಯ ಸಿಕ್ವೆಲ್‌ಗಳಿಗಿಂತ ಅಕ್ಷಯ್-ಪ್ರಿಯದರ್ಶನ್ ಜೋಡಿಯ ಈ ಹೊಸ ಪ್ರಯತ್ನವೇ ಹೆಚ್ಚು ಆಪ್ತವಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಕ್ಷಯ್ ಕುಮಾರ್ ಅವರ ಕಾಮಿಡಿ ಟೈಮಿಂಗ್ ಕಂಡು ಫಿದಾ ಆಗಿರುವ ಸಿನಿಪ್ರೇಮಿಗಳು, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹೇರಾ ಫೇರಿ ಮತ್ತು ಗರಂ ಮಸಾಲಾದಂತಹ ಕ್ಲಾಸಿಕ್ ಕಾಮಿಡಿ ನೀಡಿದ ಈ ಜೋಡಿ ಮತ್ತೆ ಒಂದಾಗಿರುವುದು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

'ಭೂತ್ ಬಂಗ್ಲಾ' ಸಿನಿಮಾವು ಇದೇ ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಕಾಶ್ ಕೌಶಿಕ್ ಅವರ ಕಥೆ ಹೊಂದಿರುವ ಈ ಚಿತ್ರಕ್ಕೆ ಪ್ರೀತಮ್ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ಈ ಹಾರರ್ ಕಾಮಿಡಿ ಮಾತ್ರವಲ್ಲದೆ 'ಹೈವಾನ್' ಎಂಬ ಥ್ರಿಲ್ಲರ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಇದು ಮಲಯಾಳಂನ 'ಒಪ್ಪಂ' ಚಿತ್ರದ ರಿಮೇಕ್ ಆಗಿದ್ದು, ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಒಟ್ಟಿನಲ್ಲಿ ಅಕ್ಷಯ್ ಕುಮಾರ್ ಸರಣಿ ಸೋಲುಗಳ ನಂತರ ತಮ್ಮ ಲಕ್ಕಿ ನಿರ್ದೇಶಕನ ಜೊತೆ ಸೇರಿ ಮತ್ತೆ ಗೆಲುವಿನ ಹಾದಿಗೆ ಮರಳುವ ಭರವಸೆಯಲ್ಲಿದ್ದಾರೆ.

Read More
Next Story