ರಹಸ್ಯವಾಗಿ ಮದುವೆಯಾದರೇ ನಟಿ ಅನುಷ್ಕಾ ಶೆಟ್ಟಿ ?
x

ಅನುಷ್ಕಾ ಶೆಟ್ಟಿ ಸದ್ದಿಲ್ಲದೆ ಮದುವೆಯಾದರೇ

ರಹಸ್ಯವಾಗಿ ಮದುವೆಯಾದರೇ ನಟಿ ಅನುಷ್ಕಾ ಶೆಟ್ಟಿ ?

ಅನುಷ್ಕಾ ಅವರ ನಿಶ್ಚಿತಾರ್ಥ ರಹಸ್ಯವಾಗಿ ನೆರವೇರಿದೆ ಎಂಬ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪುರುಷನೊಬ್ಬನ ಜೊತೆಗಿರುವ ನಟಿಯ ಫೋಟೋವೊಂದು ವೈರಲ್ ಆಗಿದೆ.


Click the Play button to hear this message in audio format

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ವಿವಾಹದ ಕುರಿತಾದ ಸುದ್ದಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಅನುಷ್ಕಾ ಅವರ ನಿಶ್ಚಿತಾರ್ಥ ರಹಸ್ಯವಾಗಿ ನೆರವೇರಿದೆ ಎಂಬ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪುರುಷನೊಬ್ಬನ ಜೊತೆಗಿರುವ ನಟಿಯ ಫೋಟೋವೊಂದು ವೈರಲ್ ಆಗಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಇದೀಗ ಸಾಬೀತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋ ಇತ್ತೀಚಿನದ್ದಲ್ಲ, ಬದಲಾಗಿ ಎಂಟು ವರ್ಷಗಳಷ್ಟು ಹಳೆಯದು ಎಂಬ ಸತ್ಯ ಹೊರಬಿದ್ದಿದೆ. 2016ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಫ್ಯಾಶನ್ ಶೋ ಒಂದರಲ್ಲಿ ಅನುಷ್ಕಾ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಸಹ-ಮಾಡೆಲ್ ಒಬ್ಬರ ಜೊತೆ ರಾಂಪ್ ವಾಕ್ ಮಾಡಿ ಪೋಸ್ ನೀಡಿದ್ದ ಫೋಟೋವನ್ನು ಕಿಡಿಗೇಡಿಗಳು ಈಗಿನ ನಿಶ್ಚಿತಾರ್ಥದ ಫೋಟೋ ಎಂಬಂತೆ ಸುಳ್ಳು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಈ ಹಿಂದೆಯೂ ಕೂಡ ಅನುಷ್ಕಾ ಅವರ ಮದುವೆಯ ಬಗ್ಗೆ ಹಲವಾರು ಬಾರಿ ವದಂತಿಗಳು ಹಬ್ಬಿದ್ದವು. ಪ್ರತಿ ಬಾರಿಯೂ ನಟಿಯ ಆಪ್ತ ವಲಯ ಮತ್ತು ಅಧಿಕೃತ ವಕ್ತಾರರು ಅಂತಹ ಸುದ್ದಿಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತಾ ಬಂದಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋಗೂ ಮತ್ತು ಅನುಷ್ಕಾ ಅವರ ವೈಯಕ್ತಿಕ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರರಂಗದ ಮೂಲಗಳು ದೃಢಪಡಿಸಿವೆ.

ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಅವರು ಬೆಂಗಳೂರಿನ ಉದ್ಯಮಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಹಿಂದೆಲ್ಲಾ ತಮ್ಮ ಮದುವೆಯ ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದೇ ಮೌನವಾಗಿರುತ್ತಿದ್ದ ಅನುಷ್ಕಾ ಶೆಟ್ಟಿ ಈ ಬಾರಿ ಆಕ್ರೋಶ ಹೊರಹಾಕಿದ್ದರು. ಯಾರದ್ದೋ ವೈಯಕ್ತಿಕ ಜೀವನವನ್ನು ಪ್ರತಿದಿನದ ಸುದ್ದಿಯನ್ನಾಗಿ ಮಾಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಕೇವಲ ಊಹೆಗಳ ಆಧಾರದ ಮೇಲೆ ಮತ್ತು ಅನಧಿಕೃತ ಮಾಹಿತಿ ಪ್ರಕಟಿಸುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದೆ. ಮುಖ್ಯವಾಗಿ ಅನುಷ್ಕಾ ಅವರ ವಯಸ್ಸನ್ನು ಪ್ರತಿ ಪೋಸ್ಟ್‌ನಲ್ಲಿ '44' ಎಂದು ಹೈಲೈಟ್ ಮಾಡುತ್ತಿರುವುದಕ್ಕೆ ತಂಡವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಮದುವೆ ಎಂಬುದು ವೈಯಕ್ತಿಕ ನಿರ್ಧಾರ. ಇದು ಕೇವಲ 'ಬ್ರೇಕಿಂಗ್ ನ್ಯೂಸ್' ಅಲ್ಲ ಅಥವಾ ವೀವ್ಸ್‌ಗಾಗಿ ಬಳಸಿಕೊಳ್ಳುವ ವಿಷಯವಲ್ಲ. ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಬದುಕನ್ನು ಗೌಪ್ಯವಾಗಿಡುವ ಹಕ್ಕಿದೆ. ಆ ನಿರ್ಧಾರವನ್ನು ಗೌರವಿಸಬೇಕು. ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಮತ್ತು ನಟಿಯರನ್ನು ಕೂಡ ನಟರಷ್ಟೇ ಸಮಾನವಾಗಿ ಗೌರವಿಸಿ ಎಂದು ಅನುಷ್ಕಾ ಶೆಟ್ಟಿ ತಂಡ ಮಾಧ್ಯಮಗಳಿಗೆ ಖಡಕ್ ಸಂದೇಶ ರವಾನಿಸಿತ್ತು.

Read More
Next Story