‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ ವಿಚ್ಛೇದನ
x

ಕನ್ನಡದ ‘ಬಿಂದಾಸ್’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಪತಿ ಸೋಹೈಲ್ ಕತುರಿಯಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ

‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ ವಿಚ್ಛೇದನ

ನಟಿ ಹನ್ಸಿಕಾ ಮೊಟ್ವಾನಿ ಅವರು ಈ ವಿಚ್ಛೇದನ ಪ್ರಕ್ರಿಯೆಯಲ್ಲಿ ಪತಿಯಿಂದ ಯಾವುದೇ ರೀತಿಯ ಜೀವನಾಂಶ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.


Click the Play button to hear this message in audio format

ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಭಿನಯದ 'ಬಿಂದಾಸ್' ಸಿನಿಮಾ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅವರು ತಮ್ಮ ಪತಿ ಸೋಹೈಲ್ ಕತುರಿಯಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಇವರಿಬ್ಬರಿಗೂ ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನ ಮಂಜೂರು ಮಾಡಿದೆ.

ವಿಶೇಷವೆಂದರೆ, ನಟಿ ಹನ್ಸಿಕಾ ಮೊಟ್ವಾನಿ ಅವರು ಈ ವಿಚ್ಛೇದನ ಪ್ರಕ್ರಿಯೆಯಲ್ಲಿ ಪತಿಯಿಂದ ಯಾವುದೇ ರೀತಿಯ ಜೀವನಾಂಶ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಅರ್ಜಿಯ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ತಲೆದೂರಿದ್ದವು. ಸ್ವಭಾವ, ಅಭಿಪ್ರಾಯ ಮತ್ತು ಜೀವನಶೈಲಿಯಲ್ಲಿ ಹೊಂದಾಣಿಕೆಯಾಗದ ಕಾರಣ ಸಣ್ಣಪುಟ್ಟ ವಿಷಯಗಳಿಗೂ ದಂಪತಿಗಳ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.

ಇನ್ನು ಇವರ ಸಂಬಂಧವನ್ನು ಉಳಿಸಲು ಕುಟುಂಬದವರು ಮತ್ತು ಸ್ನೇಹಿತರು ಹಲವು ಬಾರಿ ಸಂಧಾನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಇಬ್ಬರೂ ಪ್ರತ್ಯೇಕವಾಗಿರಲು ನಿರ್ಧರಿಸಿದ್ದರು. 2024ರ ಜುಲೈ 2 ರಿಂದಲೇ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪರಸ್ಪರ ಮಾತುಕತೆಯ ನಂತರ ಯಾವುದೇ ಬೇಡಿಕೆಗಳಿಲ್ಲದೆ ಕಾನೂನುಬದ್ಧವಾಗಿ ಬೇರ್ಪಡಲು ಇಬ್ಬರೂ ಅಫಿಡವಿಟ್ ಸಲ್ಲಿಸಿದ್ದರು. ನಟಿ ಹನ್ಸಿಕಾ ಮತ್ತು ಸೊಹೈಲ್ ಕತುರಿಯಾ ಅವರ ಮದುವೆಯು 2022ರ ಡಿಸೆಂಬರ್ 4 ರಂದು ಜೈಪುರದ ಮಂದೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ನಡೆದಿತ್ತು.

'ಶಕ ಲಕ ಬೂಮ್ ಬೂಮ್' ಸರಣಿ ಮತ್ತು 'ಕೋಯಿ... ಮಿಲ್ ಗಯಾ' ಚಿತ್ರದ ಮೂಲಕ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಹನ್ಸಿಕಾ, ಬಳಿಕ ಅವರು ದೇಶಮುದುರು (2007) ಮತ್ತು ಆಪ್ ಕಾ ಸುರೂರ್ (2008) ಚಿತ್ರಗಳಲ್ಲಿ ನಟಿಸಿದರು. ಅವರು ಧನುಷ್ ಅಭಿನಯದ ಮಾಪಿಳ್ಳೈ (2011) ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅವರು ಎಂಗೆಯುಂ ಕಾದಲ್ (2011), ವೇಲಾಯುಧಂ (2011), ಒರು ಕಲ್ ಒರು ಕನ್ನಡಿ (2012), ಸಿಂಗಂ II (2013), ಬಿರಿಯಾನಿ (2013) ನಂತಹ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ʻಬಿಂದಾಸ್‌; ಸಿನಿಮಾದಲ್ಲಿ ನಟಿಸಿದ್ದರು. 2024 ರ ಗಾರ್ಡಿಯನ್ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

Read More
Next Story