ಮೆಲ್ಬರ್ನ್ ಚಿತ್ರೋತ್ಸವದಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಪ್ರದರ್ಶನ
x

17ನೇ ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿರುವ ಐಕಾನಿಕ್ 'ಲಗಾನ್' ಸಿನಿಮಾ

ಮೆಲ್ಬರ್ನ್ ಚಿತ್ರೋತ್ಸವದಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಪ್ರದರ್ಶನ

ಆಸ್ಕರ್ ನಾಮನಿರ್ದೇಶಿತ 'ಲಗಾನ್' ಚಿತ್ರದ 25ನೇ ವರ್ಷದ ಸಂಭ್ರಮಕ್ಕಾಗಿ ಮೆಲ್ಬೋರ್ನ್ ಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಯಾಗಿ ನಟ ಅಮೀರ್ ಖಾನ್ ಭಾಗಿಯಾಗಲಿದ್ದಾರೆ.


Click the Play button to hear this message in audio format

ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಲ್ಲಿ ಒಂದಾದ ಅಮೀರ್ ಖಾನ್ ಅಭಿನಯದ 'ಲಗಾನ್' ಚಿತ್ರ ಬಿಡುಗಡೆಯಾಗಿ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಮೆಲ್ಬರ್ನ್‌ನಲ್ಲಿ ನಡೆಯಲಿರುವ 17ನೇ ಭಾರತೀಯ ಚಲನಚಿತ್ರೋತ್ಸವದಲ್ಲಿ (IFFM) ಈ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಭಾರತದ ಹೊರಗೆ ಅಂದರೆ ವಿದೇಶದಲ್ಲಿ ನಡೆಯುವ ಭಾರತೀಯ ಚಿತ್ರರಂಗದ ಅತಿ ದೊಡ್ಡ ಸಂಭ್ರಮ ಎಂದು ಕರೆಸಿಕೊಳ್ಳುವ ಈ ಚಿತ್ರೋತ್ಸವವು ಆಗಸ್ಟ್ 13 ರಿಂದ 23 ರವರೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿ ಜರುಗಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ನಟ ಹಾಗೂ ನಿರ್ಮಾಪಕ ಅಮೀರ್ ಖಾನ್ ಅವರು ಮೆಲ್ಬರ್ನ್‌ಗೆ ಆಗಮಿಸಲಿದ್ದಾರೆ.

ಜುಲೈ 9 ರಂದು ಎಸಿಎಂಐ (ACMI) ಚಿತ್ರಮಂದಿರದಲ್ಲಿ ನಡೆಯಲಿರುವ ಲಗಾನ್ ಸಿನಿಮಾದ ವಿಶೇಷ ಪ್ರದರ್ಶನವು ಈ ಬಾರಿಯ ಚಿತ್ರೋತ್ಸವಕ್ಕೆ ಅಧಿಕೃತ ಮುನ್ನುಡಿ ಬರೆಯಲಿದೆ. ಅಶುತೋಷ್ ಗೋವಾರಿಕರ್ ನಿರ್ದೇಶನದ ಈ ಐತಿಹಾಸಿಕ ಸಿನಿಮಾ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿತ್ತು ಎಂಬುದು ಗಮನಾರ್ಹ.

ಚಿತ್ರೋತ್ಸವದ ನಿರ್ದೇಶಕಿ ಮಿಟು ಭೌಮಿಕ್ ಲಾಂಗೆ ಮಾತನಾಡಿ, ಲಗಾನ್ ಭಾರತೀಯ ಚಿತ್ರರಂಗದ ಒಂದು ಮೈಲಿಗಲ್ಲಾಗಿದ್ದು, ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ. ಈ ಸಂಭ್ರಮಾಚರಣೆಗೆ ಅಮೀರ್ ಖಾನ್ ಅವರನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ. ವಿಕ್ಟೋರಿಯಾ ಸರ್ಕಾರದ ಬೆಂಬಲದೊಂದಿಗೆ ನಡೆಯುವ ಈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಹಿಂದಿನ ಆವೃತ್ತಿಗಳಲ್ಲಿ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಎ.ಆರ್. ರೆಹಮಾನ್, ರಾಮ್ ಚರಣ್ ಮತ್ತು ವಿಜಯ್ ಸೇತುಪತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Read More
Next Story