ಆಸ್ಕರ್ ಸಂಭ್ರಮಕ್ಕೆ ಯುದ್ಧಧ ನೆರಳು: ಪ್ರಶಸ್ತಿ ಸಮಾರಂಭಕ್ಕೆ ಡ್ರೋನ್ ಭೀತಿ!
x

2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಇರಾನ್‌ನಿಂದ ಸಂಭಾವ್ಯ ಡ್ರೋನ್ ದಾಳಿಯ ಭೀತಿ ಎದುರಾಗಿದೆ.

ಆಸ್ಕರ್ ಸಂಭ್ರಮಕ್ಕೆ ಯುದ್ಧಧ ನೆರಳು: ಪ್ರಶಸ್ತಿ ಸಮಾರಂಭಕ್ಕೆ ಡ್ರೋನ್ ಭೀತಿ!

ಆಸ್ಕರ್ 2026 ಸಂಭ್ರಮದ ನಡುವೆ ಡ್ರೋನ್ ದಾಳಿಯ ಭೀತಿ! ಇರಾನ್‌ನಿಂದ ಬೆದರಿಕೆ ಹಿನ್ನೆಲೆಯಲ್ಲಿ ಹಾಲಿವುಡ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.


Click the Play button to hear this message in audio format

ವಿಶ್ವದ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ 98ನೇ ಆಸ್ಕರ್ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 15ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಹತ್ತಿರವಾಗುತ್ತಿದ್ದಂತೆ ಅನಿರೀಕ್ಷಿತ ಆತಂಕವೊಂದು ಎದುರಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಘರ್ಷದ ಕಿಡಿ ಈಗ ಹಾಲಿವುಡ್ ಅಂಗಳಕ್ಕೂ ತಟ್ಟಿದ್ದು, ಸಮಾರಂಭದ ಮೇಲೆ ಡ್ರೋನ್ ದಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಇದು ಜಾಗತಿಕ ಸಿನಿಮಾ ಪ್ರೇಮಿಗಳಲ್ಲಿ ತುಸು ಆತಂಕ ಮೂಡಿಸಿದ್ದರೂ, ಅಮೆರಿಕದ ಭದ್ರತಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ.

ಎಫ್‌ಬಿಐ ಎಚ್ಚರಿಕೆ: ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಹೈ ಅಲರ್ಟ್

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮೆರಿಕದ ಪಶ್ಚಿಮ ಕರಾವಳಿಯನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಎಫ್‌ಬಿಐ (FBI) ಗಂಭೀರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಮೇಲೆ ಡ್ರೋನ್ ದಾಳಿ ನಡೆಯಬಹುದು ಎಂಬ ಗುಪ್ತಚರ ಮಾಹಿತಿ ಲಭ್ಯವಾದ ಬೆನ್ನಲ್ಲೇ, ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯು ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದೆ. ಮಿಲಿಟರಿ ಕ್ರಮಗಳಿಗೆ ಪ್ರತಿಯಾಗಿ ಇರಾನ್ ಈ ಸಾಹಸಕ್ಕೆ ಕೈಹಾಕಬಹುದು ಎಂಬ ಸಂಶಯವಿರುವುದರಿಂದ, ಆಸ್ಕರ್ ವೇದಿಕೆಯ ಸುತ್ತಮುತ್ತ ಅಘೋಷಿತ ತುರ್ತು ಪರಿಸ್ಥಿತಿಯಂತೆ ಕಾವಲು ಕಾಯಲಾಗುತ್ತಿದೆ.

ಸುರಕ್ಷತೆಯೇ ಮೊದಲ ಆದ್ಯತೆ: ರಾಜ್ ಕಪೂರ್ ಭರವಸೆ

ಈ ಭದ್ರತಾ ಸವಾಲುಗಳ ನಡುವೆಯೂ ಆಸ್ಕರ್ ಸಮಾರಂಭದ ಕಾರ್ಯಕಾರಿ ನಿರ್ಮಾಪಕ ರಾಜ್ ಕಪೂರ್ ಅವರು ಪ್ರೇಕ್ಷಕರು ಮತ್ತು ಗಣ್ಯರಿಗೆ ಧೈರ್ಯ ತುಂಬಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿ ವರ್ಷದಂತೆ ಈ ಬಾರಿಯೂ ನಾವು ಎಫ್‌ಬಿಐ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಜಾಗತಿಕ ವಿದ್ಯಮಾನಗಳನ್ನು ನಾವು ಕ್ಷಣ ಕ್ಷಣಕ್ಕೂ ಗಮನಿಸುತ್ತಿದ್ದು, ಡಾಲ್ಬಿ ಥಿಯೇಟರ್ ಒಳಗೆ ಇರುವ ಗಣ್ಯರು ಮಾತ್ರವಲ್ಲದೆ ಹೊರಗಿರುವ ಅಭಿಮಾನಿಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ. ಅಕಾಡೆಮಿ ಸಂಸ್ಥೆಯು ನೇರ ಪ್ರತಿಕ್ರಿಯೆ ನೀಡದಿದ್ದರೂ, ತೆರೆಮರೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಮರೋಪಾದಿಯಲ್ಲಿ ಸಿದ್ಧಪಡಿಸಲಾಗಿದೆ.

ಕೋನನ್ ಒಬ್ರಿಯಾನ್ ನಿರೂಪಣೆ: 200 ದೇಶಗಳಲ್ಲಿ ನೇರ ಪ್ರಸಾರ

ಎಲ್ಲಾ ಆತಂಕಗಳ ನಡುವೆಯೂ ಸಿನೆಮಾ ಹಬ್ಬದ ಸಿದ್ಧತೆಗಳು ಪೂರ್ಣಗೊಂಡಿವೆ. ಖ್ಯಾತ ನಿರೂಪಕ ಕೋನನ್ ಒಬ್ರಿಯಾನ್ ಈ ಬಾರಿ ಸಮಾರಂಭದ ಸಾರಥ್ಯ ವಹಿಸಲಿದ್ದು, ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಭಾರತದ ಅಭಿಮಾನಿಗಳು ಎಬಿಸಿ ವಾಹಿನಿ ಮತ್ತು ಹುಲು (Hulu) ಸ್ಟ್ರೀಮಿಂಗ್ ಮೂಲಕ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು. ಕೆಂಪು ಹಾಸಿನ ಮೇಲೆ ತಾರೆಯರ ಮೆರುಗು ಮತ್ತು ಪ್ರಶಸ್ತಿ ವಿಜೇತರ ಸಂಭ್ರಮಕ್ಕೆ ಯಾವುದೇ ಅಡೆತಡೆಯಾಗದಂತೆ ಅಮೆರಿಕದ ರಕ್ಷಣಾ ಪಡೆಗಳು ಸರ್ಪಗಾವಲು ಹಾಕಿವೆ.

Read More
Next Story