ಬಾರ್ಡರ್- 2| ಎರಡೇ ದಿನಕ್ಕೆ 65 ಕೋಟಿ ರೂ. ಬಾಚಿದ ಸನ್ನಿ ಡಿಯೋಲ್ ಸಿನಿಮಾ
x

ಬಾರ್ಡರ್- 2| ಎರಡೇ ದಿನಕ್ಕೆ 65 ಕೋಟಿ ರೂ. ಬಾಚಿದ ಸನ್ನಿ ಡಿಯೋಲ್ ಸಿನಿಮಾ

2025-26ನೇ ಸಾಲಿನ ಟಾಪ್ ಓಪನರ್ ಚಿತ್ರಗಳ ಪಟ್ಟಿಯಲ್ಲಿ 'ಚಾವಾ' ಮೊದಲ ಸ್ಥಾನದಲ್ಲಿದ್ದರೆ, 'ಬಾರ್ಡರ್ 2' ಎರಡನೇ ಸ್ಥಾನ ಅಲಂಕರಿಸಿದೆ.


Click the Play button to hear this message in audio format

ಬಾಲಿವುಡ್‌ನ ಬಹುನಿರೀಕ್ಷಿತ ಯುದ್ಧ ಆಧಾರಿತ ಚಿತ್ರ 'ಬಾರ್ಡರ್ 2' ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

1997ರ ಸೂಪರ್ ಹಿಟ್ 'ಬಾರ್ಡರ್' ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಸನ್ನಿ ಡಿಯೋಲ್ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದು, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಗಳಿಕೆಯ ವಿಷಯಕ್ಕೆ ಬರುವುದಾದರೆ, ಶುಕ್ರವಾರ ಮೊದಲ ದಿನವೇ 30 ಕೋಟಿ ರೂ. ಗಳಿಸುವ ಮೂಲಕ ಅದ್ಧೂರಿ ಓಪನಿಂಗ್ ಪಡೆದಿತ್ತು.

ಎರಡನೇ ದಿನವಾದ ಶನಿವಾರ ಚಿತ್ರದ ಕಲೆಕ್ಷನ್‌ನಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಅಂದಾಜು 35 ಕೋಟಿ ರೂ. ಗಳಿಸಿದೆ. ಇದರೊಂದಿಗೆ ಕೇವಲ ಎರಡೇ ದಿನಗಳಲ್ಲಿ ಚಿತ್ರವು ಒಟ್ಟು 65 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ತನ್ನದಾಗಿಸಿಕೊಂಡಿದೆ.

ಉತ್ತರ ಭಾರತದ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆ ಮತ್ತು ಕೆಲವು ಕೇಂದ್ರಗಳಲ್ಲಿ ಪ್ರಿಂಟ್‌ಗಳ ವಿಳಂಬ ಆಗಮನದ ಹೊರತಾಗಿಯೂ, ಸಿನಿಮಾ ಉತ್ತಮ ಪ್ರದರ್ಶನ ನೀಡಿದೆ. 2025-26ನೇ ಸಾಲಿನ ಟಾಪ್ ಓಪನರ್ ಚಿತ್ರಗಳ ಪಟ್ಟಿಯಲ್ಲಿ 'ಚಾವಾ' ಮೊದಲ ಸ್ಥಾನದಲ್ಲಿದ್ದರೆ, 'ಬಾರ್ಡರ್ 2' ಎರಡನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ ತಿಂಗಳು ಬಿಡುಗಡೆಯಾಗಿದ್ದ 'ಧುರಂಧರ್' ಚಿತ್ರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಮೊದಲ ದಿನವೇ ಗಳಿಸುವ ಮೂಲಕ ಸನ್ನಿ ಡಿಯೋಲ್ ಹೊಸ ದಾಖಲೆ ಬರೆದಿದ್ದಾರೆ.

ಗಣರಾಜ್ಯೋತ್ಸವ ದಿನಾಚರಣೆಯ ಸುದೀರ್ಘ ರಜೆ ಇರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಧೂಳೆಬ್ಬಿಸಿದ ಚಿತ್ರ

ಟ್ರೇಡ್ ರಿಪೋರ್ಟ್‌ಗಳ ಪ್ರಕಾರ, ಚಿತ್ರವು ಮೊದಲ ದಿನಕ್ಕಾಗಿ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮುಂಗಡವಾಗಿ ಮಾರಾಟ ಮಾಡಿದೆ. ಈ ಮೂಲಕ ಸುಮಾರು 12.5 ಕೋಟಿ ರೂ. ಗಳಿಕೆಯನ್ನು ಸಿನಿಮಾ ಮೊದಲೇ ಖಚಿತಪಡಿಸಿಕೊಂಡಿದೆ. ಕಳೆದ ವರ್ಷದ ಹಿಟ್ ಚಿತ್ರ 'ಧುರಂಧರ್' ದಾಖಲೆಯನ್ನು 'ಬಾರ್ಡರ್ 2' ಪ್ರಿ-ಸೇಲ್ಸ್ ಹಂತದಲ್ಲೇ ಹಿಂದಿಕ್ಕಿದೆ.

ಸನ್ನಿ ಡಿಯೋಲ್ ಹೆಸರಿಗಿಂತ ಮೊದಲು ತಂದೆಯ ಹೆಸರು

ಸಿನಿಮಾ ಆರಂಭವಾಗುತ್ತಿದ್ದಂತೆ ಬರುವ ಆರಂಭಿಕ ಕ್ರೆಡಿಟ್ಸ್‌ನಲ್ಲಿ ಸನ್ನಿ ಡಿಯೋಲ್ ಅವರ ಹೆಸರನ್ನು ಅತ್ಯಂತ ಭಾವನಾತ್ಮಕವಾಗಿ ಪ್ರದರ್ಶಿಸಲಾಗಿದೆ. ಸ್ವತಃ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ಸನ್ನಿ ಡಿಯೋಲ್ ಈ ಚಿತ್ರದಲ್ಲಿ ತಮ್ಮ ಹೆಸರನ್ನು "ಧರ್ಮೇಂದ್ರ ಜೀ ಕಾ ಬೇಟಾ" (ಧರ್ಮೇಂದ್ರ ಅವರ ಪುತ್ರ) ಎಂದು ಪರಿಚಯಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅವರ ಹೆಸರಿನ ಕೆಳಗೆ "ಧರ್ಮೇಂದ್ರ ಅವರ ಮಗ" ಎಂದು ನಮೂದಿಸುವ ಮೂಲಕ ತಮ್ಮ ತಂದೆಗೆ ಗೌರವ ಸಲ್ಲಿಸಿದ್ದಾರೆ.

Read More
Next Story