ಬಿಗ್‌ಬಾಸ್ ವಿನ್ನರ್ ಗಿಲ್ಲಿ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್
x

ಗಿಲ್ಲಿ ನಟ ವಿರುದ್ಧ ಅಭಿಮಾನಿಗಳ ಅಸಮಾಧಾನ ಹೊರಹಾಕಿದ್ದಾರೆ. 

ಬಿಗ್‌ಬಾಸ್ ವಿನ್ನರ್ ಗಿಲ್ಲಿ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್

ಬಿಗ್‌ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರು ತಮ್ಮ ಅಭಿಮಾನಿಗಳನ್ನು ಗೌರವಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.


Click the Play button to hear this message in audio format

ಬಿಗ್‌ಬಾಸ್‌ ವಿನ್ನರ್‌ ನಟ ಗಿಲ್ಲಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಗಿಲ್ಲಿ ಅಭಿಮಾನಿಗಳನ್ನು ಗೌರವಿಸುತ್ತಿಲ್ಲ ಎಂದು ಗಿಲ್ಲಿ ಅಭಿಮಾನಿ ಹಾಗೂ ಅವರ ಫೋಟೋನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ವಾಗ್ದಾಳಿ ನಡೆಸಿದ್ದಾರೆ.

ಗಿಲ್ಲಿಗೆ ಸಿಕ್ಕಿರುವ ಫ್ಯಾನ್ಸ್‌ ಯಾರಿಗೂ ಸಿಕ್ಕಿಲ್ಲ. ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ಓರ್ವ ಸ್ಪರ್ಧಿಗೆ ಸಾಕಷ್ಟು ಫ್ಯಾನ್ಸ್ ಸಿಗುವುದು ಸಾಮಾನ್ಯ. ಆದರೆ, ಗಿಲ್ಲಿಗೆ ಸಿಕ್ಕಷ್ಟು ದೊಡ್ಡ ಅಭಿಮಾನಿ ಬಳಗ ಇನ್ಯಾರಿಗೂ ಸಿಕ್ಕಿರಲಿಲ್ಲ. ಆದರೆ, ಅಭಿಮಾನಿಗಳನ್ನು ಗಿಲ್ಲಿ ಗೌರವಿಸುತ್ತಿಲ್ಲ ಎಂಬುದು ಅಭಿಮಾನಿಗಳ ಆರೋಪ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಅವರಲ್ಲಿ ಟ್ಯಾಲೆಂಟ್ ಇತ್ತು. ಅದನ್ನು ನಾವು ಹೊರಗೆ ತಂದಿದ್ದೀವಿ. ಅವರು ಅಭಿಮಾನಿಗಳನ್ನು ಭೇಟಿ ಮಾಡಬೇಕಿತ್ತು, ಮಾಡುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗ ನನ್ನನ್ನು ಹೊರ ಹೋದ ತಕ್ಷಣ ಭೇಟಿ ಮಾಡ್ತೀನಿ ಎಂದು ಹೇಳಿದ್ದರು. ಆದರೆ ಇನ್ನೂ ಭೇಟಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಗಿಲ್ಲಿ ನಟ ಬಿಗ್‌ಬಾಸ್‌ ಮನೆಗೆ ಹೋಗಿದ್ದಾಗಿಂದ ಅವರ ಕ್ರೇಜ್‌ ಹೆಚ್ಚಾಗಿದ್ದು, ಕೇವಲ ಮೂರು ತಿಂಗಳಲ್ಲಿ ಅವರ ಇನ್​​ಸ್ಟಾಗ್ರಾಮ್​​ನಲ್ಲಿ 20 ಲಕ್ಷ ಹಿಂಬಾಲಕರನ್ನು ತಲುಪಿದ್ದಾರೆ. ಇಷ್ಟು ದೊಡ್ಡ ಅಭಿಮಾನಿ ವರ್ಗ ಸಿಕ್ಕಿದ್ದು ಇದೇ ಮೊದಲು. ಆದರೆ ಗಿಲ್ಲಿ ನಟ ತಮ್ಮ ಅಭಿಮಾನಿಗಳಿಗೆ ಗೌರವ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಗಿಲ್ಲಿ ನಟ ಅವರು ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಸುದೀಪ್‌ ಭೇಟಿಯ ಸಂದರ್ಭದಲ್ಲಿ ಗಿಲ್ಲಿ ನಟನಿಗೆ ಕಿಚ್ಚ ಕಿವಿ ಮಾತೊಂದು ಹೇಳಿದ್ದು, "ಗೆಲುವಿನ ಅಮಲಿನಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡ, ಜೀವನದ ಮುಂದಿನ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡು" ಎಂದು ಕಿವಿಮಾತು ಹೇಳಿದ್ದರು.

ಇನ್ನೊಂದೆಡೆ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಗಿಲ್ಲಿ ಇನ್ನೂ ಸ್ಪರ್ಧೆಯಲ್ಲಿದ್ದಾಗಲೇ ಶಿವಣ್ಣ ಅವರು ಟೇಬಲ್ ತಟ್ಟಿ ʻಗಿಲ್ಲಿ ಗೆದ್ದೇ ಗೆಲ್ಲುತ್ತಾನೆʼ ಎಂದು ಹೇಳಿದ್ದರು. ಭೇಟಿಯ ವೇಳೆ ಶಿವಣ್ಣ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಫೋನ್ ಕರೆ ಮಾಡಿ ಶುಭ ಹಾರೈಸಿದ್ದರು.

Read More
Next Story