
ಬಿಗ್‌ಬಾಸ್ ಮಧ್ಯರಾತ್ರಿ ನಡೆದ ದಿಢೀರ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಟ ಧ್ರುವಂತ್ ತಲ್ವಾರ್ ಅವರು ಮನೆಯಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಶಾಕ್: ಧ್ರುವಂತ್ ಔಟ್?
ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಧ್ರುವಂತ್ ತಲ್ವಾರ್ ಅವರು ಮಧ್ಯರಾತ್ರಿ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಘಟ್ಟ ಹತ್ತಿರವಾಗುತ್ತಿರುವಂತೆಯೇ ಮನೆಯಲ್ಲಿ ಸಂಚಲನ ಮೂಡಿದೆ. ಸದ್ಯ ದೊಡ್ಮನೆಯಿಂದ ಪ್ರಬಲ ಸ್ಪರ್ಧಿ ಧ್ರುವಂತ್ ತಲ್ವಾರ್ ಅವರ ಮಿಡ್ ನೈಟ್ ಎಲಿಮಿನೇಷನ್ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಈಗ ಕುತೂಹಲದ ಶಿಖರ ತಲುಪಿದೆ. ಗ್ರಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಗ್ ಬಾಸ್ ಸ್ಪರ್ಧಿಗಳಿಗೆ 'ಮಿಡ್ ನೈಟ್ ಸರ್ಪ್ರೈಸ್' ನೀಡಿದ್ದಾರೆ ಎನ್ನಲಾಗುತ್ತಿದೆ. ಮಧ್ಯರಾತ್ರಿ ನಡೆದ ದಿಢೀರ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಟ ಧ್ರುವಂತ್ ತಲ್ವಾರ್ ಅವರು ಮನೆಯಿಂದ ಹೊರಬಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಾರಿಯ ಸೀಸನ್‌ನಲ್ಲಿ ಧ್ರುವಂತ್ ಅವರು ತಮ್ಮ ನೇರ ನಡೆ ಹಾಗೂ ದಿಟ್ಟ ಆಟದಿಂದ ವೀಕ್ಷಕರ ಗಮನ ಸೆಳೆದಿದ್ದರು.
ಧ್ರುವಂತ್ ಎಲಿಮಿನೇಷನ್ ಸುದ್ದಿ ಕೇಳಿ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮನೆಯಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ ಅವರಂತಹ ಪ್ರಬಲ ಸ್ಪರ್ಧಿಗಳ ನಡುವೆ ಧ್ರುವಂತ್ ಕೂಡ ಫಿನಾಲೆ ರೇಸ್‌ನಲ್ಲಿದ್ದರು. ಆದರೆ, ಬಿಗ್ ಬಾಸ್ ನೀಡಿದ ಈ ಮಿಡ್ ನೈಟ್ ಟ್ವಿಸ್ಟ್ ಆಟದ ಚಿತ್ರಣವನ್ನೇ ಬದಲಿಸಿದೆ. ವರದಿಗಳ ಪ್ರಕಾರ, ಮನೆಯಲ್ಲಿದ್ದ ಸದಸ್ಯರ ಮತದಾನ ಅಥವಾ ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್ ಆಧಾರದ ಮೇಲೆ ಈ ಎಲಿಮಿನೇಷನ್ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಎಲಿಮಿನೇಷನ್ ಹಿಂದಿನ ಅಸಲಿ ಕಾರಣ ಇಂದಿನ ಎಪಿಸೋಡ್‌ನಲ್ಲಿ ಬಹಿರಂಗವಾಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ತನ್ನ ಅಂತಿಮ ಘಟ್ಟಕ್ಕೆ ತಲುಪಿದ್ದು,ಜನವರಿ 18ರಂದು ಅದ್ಧೂರಿ ಫೈನಲ್ ನಡೆಯಲಿದೆ. ಮೊದಲು 15 ವಾರಗಳಿಗೆ ಸೀಮಿತಗೊಳಿಸಲು ಯೋಜಿಸಲಾಗಿದ್ದರೂ, ಕಾರ್ಯಕ್ರಮದ ಜನಪ್ರಿಯತೆಯಿಂದಾಗಿ ಇದನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿತ್ತು. ಕಲರ್ಸ್ ಕನ್ನಡ ವಾಹಿನಿ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಈಗ ಟಾಪ್ 6 ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ.
ಕಳೆದ ವಾರದ ಫಿನಾಲೆಯಲ್ಲಿ ರಾಶಿಕಾ ಶೆಟ್ಟಿ ಅವರು ಮನೆಯಿಂದ ಹೊರಬಿದ್ದಿದ್ದರು. ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ರಾಶಿಕಾ, ಅಂತಿಮ ವಾರಕ್ಕೆ ಲಗ್ಗೆ ಇಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅವರು ಕಡಿಮೆ ಮತಗಳನ್ನು ಪಡೆದ ಕಾರಣ ಮನೆಯಿಂದ ಹೊರಹೋಗಬೇಕಾಯಿತು. ಇವರ ನಿರ್ಗಮನದ ನಂತರ ಮನೆಯಲ್ಲಿ ಈಗ ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯ ಶೈವ, ರಘು, ರಕ್ಷಿತಾ ಶೆಟ್ಟಿ ಮತ್ತು ಧನುಷ್ ಗೌಡ ಅವರು ಅಂತಿಮ ಕಾದಾಟಕ್ಕೆ ಸಜ್ಜಾಗಿದ್ದಾರೆ. ಈ ಪೈಕಿ ಧನುಷ್ ಗೌಡ ಅವರು ಈಗಾಗಲೇ 'ಟಿಕೆಟ್ ಟು ಫಿನಾಲೆ' ಗೆಲ್ಲುವ ಮೂಲಕ ನೇರವಾಗಿ ಫಿನಾಲೆ ಪ್ರವೇಶ ಪಡೆದಿದ್ದಾರೆ.

