ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್..!
x
ನಿವೇದಿತಾ ಗೌಡ ಹಾಗೂ ರಾಪರ್ ಚಂದನ್‌

ಬಿಗ್​ಬಾಸ್​ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್..!

ಕಿರುತೆರೆ ಬಾರ್ಬಿ ಡಾಲ್‌ ಖ್ಯಾತಿಯ ನಿವೇದಿತಾ ಗೌಡ ಹಾಗೂ ರಾಪರ್ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌ ಪಡೆದುಕೊಂಡಿದ್ದಾರೆ.


Click the Play button to hear this message in audio format

ಕಿರುತೆರೆ ಬಾರ್ಬಿ ಡಾಲ್‌ ಖ್ಯಾತಿಯ ನಿವೇದಿತಾ ಗೌಡ ಹಾಗೂ ರಾಪರ್ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಿವೇದಿತ ಗೌಡ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 5ರಲ್ಲಿ ಕಾಣಿಸಿಕೊಂಡಿದ್ದು, ಕನ್ನಡ ರಾಪರ್, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಕೂಡ ಬಿಗ್​ಬಾಸ್​ ಸೀಸನ್​ 5ರಲ್ಲಿ ಪಾಲ್ಗೊಂಡಿದ್ದರು. ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಬಳಿಕ ಈ ಇಬ್ಬರು ತುಂಬಾ ಆತ್ಮೀಯರಾಗಿ ಇದ್ದರು. ಹೀಗಾಗಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರಲ್ಲಿ ದಿನ ಕಳೆದಂತೆ ಆ ಸ್ನೇಹ ಪ್ರೀತಿಗೆ ತಿರುಗಿತು. ಬಿಗ್​ಬಾಸ್ ಶೋ ಮುಕ್ತಾಯಗೊಳ್ಳುತ್ತಿದ್ದಂತೆ 2019ರಂದು ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು.ಇದು ಬಹಳಷ್ಟು ಕಾಂಟ್ರೋವರ್ಸಿಗೆ ಕೂಡ ಕಾರಣವಾಗಿತ್ತು.

ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ 2020ರ ಫೆಬ್ರವರಿ ತಿಂಗಳಿನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಇಬ್ಬರು ಸಖತ್​ ರೀಲ್ಸ್​ ಮಾಡುತ್ತಿದ್ದರು. ಅದರಲ್ಲೂ ನಿವೇದಿತಾ ಗೌಡ ರೀಲ್ಸ್​ ಮಾಡಿ ಸಖತ್​ ಟ್ರೋಲ್​ ಆಗುತ್ತಿದ್ದರು.

ಆದರೆ ಇದೀಗ ಮದುವೆಯಾಗಿ ನಾಲ್ಕು ವರ್ಷದ ಬಳಿಕ ಈ ಇಬ್ಬರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ಸಂಬಂಧ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

Read More
Next Story