ಆಗಸ್ಟ್ 9ರಂದು ‘ಭೀಮ’ ಸಿನಿಮಾ ರಿಲೀಸ್‌: ಮುಚ್ಚಲ್ಪಟ್ಟ 18 ಥಿಯೇಟರ್​ಗಳಿಗೆ ಮರುಜೀವ
x
ಭೀಮಾ ಸಿನಿಮಾ ಆಗಸ್ಟ್‌ 9 ರಂದು ತೆರೆಕಾಣಲಿದೆ.

ಆಗಸ್ಟ್ 9ರಂದು ‘ಭೀಮ’ ಸಿನಿಮಾ ರಿಲೀಸ್‌: ಮುಚ್ಚಲ್ಪಟ್ಟ 18 ಥಿಯೇಟರ್​ಗಳಿಗೆ ಮರುಜೀವ

ದುನಿಯಾ ವಿಜಯ್‌ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್​ಗಳು ಈಗ ಮರುಜೀವ ಪಡೆಯುತ್ತಿವೆ.


Click the Play button to hear this message in audio format

ದುನಿಯಾ ವಿಜಯ್‌ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್​ಗಳು ಈಗ ಮರುಜೀವ ಪಡೆಯುತ್ತಿವೆ.

ಈ ಸಿನಿಮಾವನ್ನು ನಟ ದುನಿಯಾ ವಿಜಯ್‌ ಅವರೇ ನಿರ್ದೇಶನ ಮಾಡುತ್ತಿದ್ದು, ರೌಡಿಸಂ ಕುರಿತಾದ ಚಿತ್ರ ಇದಾಗಿದೆ. ಈ ಸಿನಿಮಾವನ್ನು ಜಗದೀಶ್ ಗೌಡ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಗದೀಶ್ ಗೌಡ ಅವರು, ʻʻಈ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ‌ ಶಾಲೆಯಲ್ಲಿ ಬಿ+, ಸಿ+ ಗ್ರೇಡ್ ತಗೆದುಕೊಳ್ಳುತ್ತಿದ್ದೆ, ಆದರೆ ನಾನು ಎ+ ತೆಗೆದುಕೊಳ್ಳಬೇಕು ಎಂದು ನನ್ನ ತಂದೆ ನಿರೀಕ್ಷಿಸುತ್ತಿದ್ದರು. ಕೊನೆಗೂ ದುನಿಯಾ ವಿಜಯ್ ಅವರು ‘ಎ’ ಪ್ರಮಾಣಪತ್ರ ಕೊಡಿಸಿದ್ದಾರೆ. ಅವರ ಈ ಹಿಂದಿನ ಚಿತ್ರ ಸಲಗ ಕೂಡ ʻಎʼ ಸರ್ಟಿಫಿಕೇಟ್ ಆಗಿತ್ತುʼʼ ಎಂದರು .

ಭೀಮ ಸಿನಿಮಾ ಬೆಂಗಳೂರಿನ ಸ್ಲಮ್​ಗಳಲ್ಲಿ ಶೂಟ್ ಮಾಡಲಾಗಿದೆ. 125 ದಿನಗಳ ಕಾಲ ಸಿನಿಮಾ ಶೂಟ್ ಮಾಡಲಾಗಿದೆ. ಬಹುತೇಕ ಸಿನಿಮಾಗಳು ನಿಜವಾದ ಲೊಕೇಶನ್​ಗಳಲ್ಲಿ ಶೂಟ್ ಮಾಡಲಾಗಿದೆ. ಈ ಸಿನಿಮಾ ಮೂಲಕ ಹಲವು ಹೊಸ ಮುಖಗಳನ್ನು ದುನಿಯಾ ವಿಜಯ್ ಪರಿಚಯಿಸುತ್ತಿದ್ದಾರೆ. ಬ್ಲ್ಯಾಕ್​ ಡ್ರಾಗನ್ ಮಂಜು ಹೆಸರಿನ ವ್ಯಕ್ತಿ ಈ ಚಿತ್ರದ ಮೂಲಕ ವಿಲನ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಭೈರಾಗಿ’ ಚಿತ್ರವನ್ನು ಅವರು ನಿರ್ಮಾಣ ಮಾಡಿದ್ದರು. ಇವರ ಜೊತೆ ಜಗದೀಶ್ ಗೌಡ ಕೂಡ ಕೈ ಜೋಡಿಸಿದ್ದಾರೆ. ಚರಣ್​ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವಸೇನಾ ಅವರು ಈ ಚಿತ್ರವನ್ನು ಛಾಯಾಗ್ರಾಹಣ ಮಾಡಿದ್ದರು, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ.

Read More
Next Story