ಬಾಕ್ಸಾಫೀಸ್‌ನಲ್ಲಿ 'ಭೀಮ' ಅಬ್ಬರ | 5ನೇ ದಿನವೂ ಭರ್ಜರಿ ಕಲೆಕ್ಷನ್
ದುನಿಯಾ ವಿಜಯ್ ಸಿನಿಮಾ 'ಭೀಮ' ಆಗಸ್ಟ್ 9 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಮೊದಲ ಮೂರು ದಿನಗಳು ಕಲೆಕ್ಷನ್ ಸೂಪರ್ ಆಗಿಯೇ ಆಗಿದೆ.
ಕಳೆದ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗದೆ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರಿಗೆ ಬಾರದೆ ಇರುವುದನ್ನು ನೋಡಿ ಸಿನಿಮಾ ಮಂದಿ ಕಂಗಲಾಗಿದ್ದರು. 2024 ರಲ್ಲಿ ಕನ್ನಡದ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಲಾಭ ಮಾಡಿದ ಉದಾಹರಣೆ ಇಲ್ಲ.
ಇದೀಗ ಕನ್ನಡ ಚಿತ್ರರಂಗಕ್ಕೊಂದು ಹಿಟ್ ಸಿನಿಮಾ ಸಿಕ್ಕಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಬಿಡುಗಡೆಯಾದ ದಿನದಿಂದ 'ಭೀಮ' ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರಿದಂತೆ ಆಗಿದೆ.
ದುನಿಯಾ ವಿಜಯ್ ಸಿನಿಮಾ 'ಭೀಮ' ಆ.9 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಮೊದಲ ಮೂರು ದಿನಗಳು ಕಲೆಕ್ಷನ್ ಸೂಪರ್ ಆಗಿಯೇ ಆಗಿದೆ.
ಕಳೆದ ಐದು ದಿನಗಳಲ್ಲಿ 'ಭೀಮ' ಬಾಕ್ಸಾಫೀಸ್ ಕಲೆಕ್ಷನ್ ಉತ್ತಮವಾಗಿದೆ. ಮೊದಲ ದಿನ 4.1 ಕೋಟಿ ರೂಪಾಯಿ, ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ 4.3 ಕೋಟಿ ರೂಪಾಯಿ, ನಾಲ್ಕನೇ ದಿನ 1.5 ಕೋಟಿ ರೂಪಾಯಿ ಹಾಗೂ ಐದನೇ ದಿನ 1.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಐದು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 15 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಮಾಡಿದ್ದಾರೆ.
ದುನಿಯಾ ವಿಜಯ್ ನಟನೆಯ ಭೀಮಾ ಸಿನಿಮಾ ನೋಡುವ ಸಿನಿಪ್ರಿಯರಿಗೆ ಆಗಸ್ಟ್ 15 ರಿಂದ ನಾಲ್ಕು ದಿನಗಳ ರಜೆಗಳು ಸಿಗುತ್ತಿದೆ. ಈ ನಾಲ್ಕು ದಿನಗಳಲ್ಲಿ 'ಭೀಮ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್‌ನ ಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ. ಇನ್ನು ನಾಲ್ಕು ದಿನಗಳಲ್ಲಿ 'ಭೀಮ' ಕಲೆಕ್ಷನ್ 8 ರಿಂದ 10 ಕೋಟಿ ರೂಪಾಯಿ ಆಗಬಹುದೆಂದು ಅಂದಾಜು ಹಾಕಿದ್ದಾರೆ.
'ಭೀಮ' ಸಿನಿಮಾದ ಕಥೆ ಏನು?
ಸೆನ್ಸಾರ್ನಿಂದ 'ಎ' ಪ್ರಮಾಣ ಪತ್ರ ಪಡೆದಿರುವ 'ಭೀಮ' ಸಿನಿಮಾದಲ್ಲಿ ಮಾದಕ ವಸ್ತುಗಳ ಚಟದಿಂದ ಯುವ ಜನಾಂಗದ ಬದುಕಿನ ಮೇಲೆ ಆಗುತ್ತಿರುವ ಪರಿಣಾಮ ಏನು? ಅವರ ಬದುಕು ಹೇಗೆ ಹಾಳಾಗುತ್ತಿದೆ? ದುಶ್ಚಟಗಳಿಂದ ಆಗುವ ಸಮಸ್ಯೆಗಳೇನು ಎಂಬುದನ್ನು 'ಭೀಮ' ಸಿನಿಮಾದಲ್ಲಿ ಹೇಳಲಾಗಿದೆ.
ಕಲ್ಯಾಣಿ, ಅಚ್ಯುತ್ ಕುಮಾರ್, ನಯನಾ ಸೂಡ, ರಂಗಾಯಣ ರಘು, ರಾಘು ಶಿವಮೊಗ್ಗ, ಗೋಪಾಲಕೃಷ್ಣ ದೇಶಪಾಂಡೆ, ಪ್ರಿಯಾ ಶತಮರ್ಷನ, ಕಾಕ್ರೋಚ್ ಸುಧೀ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಈ ಸಿನಿಮಾಕ್ಕಿದೆ.