
ಅಖಂಡ 2
ಅಖಂಡ -2|ಆಂಧ್ರಪ್ರದೇಶದಲ್ಲಿ ಟಿಕೆಟ್ ದರ ಹೆಚ್ಚಳ; ತೆಲಂಗಾಣದತ್ತ ಅಭಿಮಾನಿಗಳ ವಲಸೆ
ಆಂಧ್ರಪ್ರದೇಶ ಸರ್ಕಾರವು ದರ ಹೆಚ್ಚಳಕ್ಕೆ ಅನುಮತಿ ನೀಡಿರುವುದರಿಂದ ಇದೀಗ ಎಲ್ಲರ ಕಣ್ಣು ತೆಲಂಗಾಣ ಸರ್ಕಾರದ ಮೇಲೆ ಬಿದ್ದಿದೆ. ತೆಲಂಗಾಣದಲ್ಲಿಯೂ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ 'ಅಖಂಡ-2' ಬಿಡುಗಡೆಗೆ ಕೇವಲ ಮೂರು ದಿನ ಬಾಕಿ ಇರುವಾಗಲೇ, ಆಂಧ್ರಪ್ರದೇಶ ಸರ್ಕಾರವು ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಇದರಿಂದ ಡಿ.4 ರಂದು ಪೇಯ್ಡ್ ಪ್ರೀಮಿಯರ್‌ಗಳು ಮತ್ತು ಬೆನಿಫಿಟ್ ಶೋಗಳಿಗೂ ಅವಕಾಶ ನೀಡಿದೆ.
ಆಂಧ್ರ ಪ್ರದೇಶದಲ್ಲಿ ಡಿಸೆಂಬರ್ 4 ರಂದು ರಾತ್ರಿ 8 ರಿಂದ 10 ಗಂಟೆಯವರೆಗೆ ಬೆನಿಫಿಟ್ ಶೋಗಳು ನಡೆಯಲಿದ್ದು, ಟಿಕೆಟ್ ದರ ಜಿಎಸ್‌ಟಿ ಸೇರಿ 600 ರೂ.ಇರಲಿದೆ. ಡಿಸೆಂಬರ್ 5 ರಿಂದ ಚಿತ್ರ ಬಿಡುಗಡೆಯಾದ ಮೊದಲ 10 ದಿನಗಳವರೆಗೆ, ಸಿಂಗಲ್ ಸ್ಕ್ರೀನ್ ಟಿಕೆಟ್‌ಗಳ ಮೇಲೆ 75 ರೂ. ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್‌ಗಳ ಮೇಲೆ 100 ರೂ.ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ. ಇದರರ್ಥ ಸಿಂಗಲ್ ಸ್ಕ್ರೀನ್ ಟಿಕೆಟ್ ಬೆಲೆ ಸುಮಾರು 222ರೂ. ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆ ಸುಮಾರು 277 ರೂ. ಆಗಲಿದೆ.
ಆಂಧ್ರ ಪ್ರದೇಶ ಸರ್ಕಾರವು ದರ ಹೆಚ್ಚಳಕ್ಕೆ ಅನುಮತಿ ನೀಡಿರುವುದರಿಂದ, ಇದೀಗ ಎಲ್ಲರ ಕಣ್ಣು ತೆಲಂಗಾಣ ಸರ್ಕಾರದ ಮೇಲೆ ಬಿದ್ದಿದೆ. ತೆಲಂಗಾಣದಲ್ಲಿಯೂ ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಹಿಂದೆ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ನಿರ್ಮಾಪಕರು ಚಲನಚಿತ್ರ ಕಾರ್ಮಿಕರಿಗೆ ಲಾಭದಲ್ಲಿ ಶೇ. 20 ರಷ್ಟು ಪಾಲನ್ನು ನೀಡಲು ಒಪ್ಪಿದರೆ, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದರು.
ಒಂದು ವೇಳೆ 'ಅಖಂಡ-2' ನಿರ್ಮಾಪಕರು ಈ ಷರತ್ತುಗಳಿಗೆ ಒಪ್ಪಿಕೊಂಡರೆ, ತೆಲಂಗಾಣದಲ್ಲಿಯೂ ಟಿಕೆಟ್ ದರ ಹೆಚ್ಚಳ ಮತ್ತು ಪೇಯ್ಡ್ ಪ್ರೀಮಿಯರ್‌ಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆಂಧ್ರದಲ್ಲಿ ಬೆನಿಫಿಟ್ ಶೋಗಳು ಖಚಿತವಾಗಿರುವ ಹಿನ್ನೆಲೆಯಲ್ಲಿ, ಕಾಲಮಿತಿ ವ್ಯತ್ಯಾಸವನ್ನು ತಪ್ಪಿಸಲು ತೆಲಂಗಾಣದಲ್ಲಿಯೂ ಅವುಗಳನ್ನು ನಡೆಸಲು ಅನುಮತಿ ದೊರೆಯುವ ಸಾಧ್ಯತೆ ಹೆಚ್ಚಿದೆ. ತೆಲಂಗಾಣದ ಟಿಕೆಟ್ ದರ ಹೆಚ್ಚಳದ ಬಗ್ಗೆ ನಾಳೆಯೊಳಗೆ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ.

