
ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಆಂಧ್ರಾ ಕಿಂಗ್ ತಾಲೂಕಾ' ಸಿನಿಮಾ ಈಗ ಒಟಿಟಿ ಜಗತ್ತಿನಲ್ಲಿ ಹೊಸ ದಾಖಲೆ ಬರೆಯುತ್ತಿದೆ.
ಉಪೇಂದ್ರ ಅಭಿನಯದ 'ಆಂಧ್ರಾ ಕಿಂಗ್ ತಾಲೂಕಾ' ಒಟಿಟಿಯಲ್ಲಿ ನಂಬರ್ 1 ಟ್ರೆಂಡಿಂಗ್
ವಿವೇಕ್-ಮೆರ್ವಿನ್ ಸಂಗೀತದ ಹಾಡುಗಳು ಈಗಾಗಲೇ ಚಾರ್ಟ್‌ಬಸ್ಟರ್ ಆಗಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತ ನೋಡಲು ಇದು ಅತ್ಯುತ್ತಮ ಚಿತ್ರ ಎನ್ನುವ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕನ್ನಡದ 'ರಿಯಲ್ ಸ್ಟಾರ್' ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಆಂಧ್ರ ರಾಜ ತಾಲ್ಲೂಕು' ಸಿನಿಮಾ ಈಗ ಒಟಿಟಿಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರತದಾದ್ಯಂತ ಟಾಪ್ ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದಿದೆ. ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮಹೇಶ್ ಬಾಬು ಪಿ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ರಾಮ್ ಪೋತಿನೇನಿ ಒಬ್ಬ ಕಟ್ಟಾ ಅಭಿಮಾನಿ 'ಸಾಗರ್' ಆಗಿ ಕಾಣಿಸಿಕೊಂಡರೆ, ಉಪೇಂದ್ರ ಅವರು ಸೂಪರ್ ಸ್ಟಾರ್ 'ಸೂರ್ಯ ಕುಮಾರ್' ಪಾತ್ರದಲ್ಲಿ ಮಿಂಚಿದ್ದಾರೆ. ಅಭಿಮಾನ ಮತ್ತು ಮಹತ್ವಾಕಾಂಕ್ಷೆಯ ಸುತ್ತ ಸಾಗುವ ಈ ಕಥೆ ಆಕ್ಷನ್, ಕಾಮಿಡಿ ಮತ್ತು ಎಮೋಷನಲ್ ಡ್ರಾಮಾವನ್ನು ಒಳಗೊಂಡಿದೆ.
'ಆಂಧ್ರ ರಾಜ ತಾಲ್ಲೂಕು' ಟ್ರೇಲರ್
ಕಳೆದ ಡಿಸೆಂಬರ್ 25ರಂದು ಕ್ರಿಸ್‌ಮಸ್ ದಿನದ ಅಂಗವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ರಾಮ್ ಪೋತಿನೇನಿ ಅವರ ನಟನೆ ಹಾಗೂ ನಾಯಕಿ ಭಾಗ್ಯಶ್ರೀ ಬೋರ್ಸೆ ಜೊತೆಗಿನ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಅವರ ಭಾವನಾತ್ಮಕ ಸನ್ನಿವೇಶಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿವೆ.
ವಿವೇಕ್-ಮೆರ್ವಿನ್ ಸಂಗೀತದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತ ನೋಡಲು ಇದು ಅತ್ಯುತ್ತಮ ಚಿತ್ರ ಎನ್ನುವ ಪ್ರಶಂಸೆ ವ್ಯಕ್ತವಾಗುತ್ತಿದೆ. ಯುವಕರು ಮಾತ್ರವಲ್ಲದೆ ಫ್ಯಾಮಿಲಿ ಆಡಿಯನ್ಸ್ ಕೂಡ ಈ ಚಿತ್ರಕ್ಕೆ ಫಿದಾ ಆಗಿದ್ದು, ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ.

