SIIMA ಪ್ರಶಸ್ತಿ ಸಮಾರಂಭ | ಶಿವರಾಜ್‌ ಕುಮಾರ್‌ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯಾ ರೈ ಮಗಳು
x
ಶಿವರಾಜ್‌ ಕುಮಾರ್‌ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಮಗಳು

SIIMA ಪ್ರಶಸ್ತಿ ಸಮಾರಂಭ | ಶಿವರಾಜ್‌ ಕುಮಾರ್‌ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯಾ ರೈ ಮಗಳು

ದುಬೈನಲ್ಲಿ ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್‌ ನಟ ಶಿವರಾಜ್‌ಕುಮಾರ್‌ ಅವರನ್ನು ಅತ್ಯಂತ ಗೌರವಯುತವಾಗಿ ಕಾಣುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.


Click the Play button to hear this message in audio format

ದುಬೈನಲ್ಲಿ ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಐಶ್ವರ್ಯಾ ರೈ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್ ಅವರು ನಟ ಶಿವರಾಜ್‌ಕುಮಾರ್‌ ಅವರನ್ನು ಅತ್ಯಂತ ಗೌರವದಿಂದ ಕಾಣುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಅಮ್ಮ ಮಗಳ ಸಂಸ್ಕಾರಕ್ಕೆ ಇಡೀ ಕರುನಾಡೇ ಮೆಚ್ಚುಗೆ ಮಾತುಗಳನ್ನಾಡುತ್ತಿದೆ.

ಐಶ್ವರ್ಯಾ ರೈ ಅವರು ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾ ತಮ್ಮ ಮಗಳು ಆರಾಧ್ಯಳೊಂದಿಗೆ ಭಾಗಿಯಾಗಿದ್ದರು.

ಸಮಾರಂಭದಲ್ಲಿ ಅಮ್ಮ ಪ್ರಶಸ್ತಿ ಪಡೆದುಕೊಂಡು ಕೆಳಗೆ ಬರುತ್ತಿದ್ದಂತೆ ಮಗಳು ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡಿದ್ದಾಳೆ. ಬಳಿಕ ಅಮ್ಮ ಮಗಳು ಇಬ್ಬರೂ ವಿವಿಐಪಿ ಗ್ಯಾಲರಿ ಕಡೆ ಹೊರಟಿದ್ದಾರೆ. ಇದೇ ವೇಳೆ ಐಶ್ವರ್ಯಾ ಅವರಿಗೆ ಶಿವಣ್ಣ ಅವರು ಬೇರೆಯವರ ಜೊತೆ ಮಾತನಾಡುತ್ತಾ ನಿಂತಿರುವುದು ಕಂಡಿದೆ. ಶಿವಣ್ಣ ಅವರು ಆ ಹೊತ್ತಿಗೆ ನಟ ಚಿಯಾನ್ ವಿಕ್ರಂ ಹಾಗೂ ಇತರರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಐಶ್ವರ್ಯಾ ರೈ ಅವರು ಶಿವರಾಜ್​ಕುಮಾರ್ ಅವರನ್ನು ನೋಡುತ್ತಿದ್ದಂತೆ ಬಂದು ಶಿವಣ್ಣನಿಗೆ ಶೇಕ್​ಹ್ಯಾಂಡ್ ಮಾಡಿದರು. ಇದರ ಜೊತೆಗೆ ಅಲ್ಲೇ ಇದ್ದ ಮಗಳಿಗೆ ಶಿವರಾಜ್​ಕುಮಾರ್ ಅವರನ್ನು ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಆರಾಧ್ಯ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಆರಾಧ್ಯಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ತಾಯಿಯ ಬೇರು ಕರ್ನಾಟಕದ್ದು, ಮಗಳಿಗೆ ತುಂಬಾ ಚೆನ್ನಾಗಿ ಸಂಸ್ಕಾರ ಕಲಿಸಿದ್ದಾರೆ ಐಶ್ವರ್ಯಾ ಎಂದೂ ಕಮೆಂಟ್‌ ಮಾಡಿದ್ದಾರೆ.

Read More
Next Story