
ನಟಿ ಮೇಘನಾ ಗಾಂವ್ಕರ್
ನಟಿ ಮೇಘನಾ ಗಾಂವ್ಕರ್ ಈಗ, ಡಾಕ್ಟರ್ ಮೇಘನಾ ಗಾಂವ್ಕರ್
ನಟಿ ಮೇಘನಾ ಗಾಂವ್ಕರ್ ಅವರ ಮೊದಲ ಸಿನಿಮಾ ʼನಮ್ ಏರಿಯಾದಲ್ ಒಂದ್ ದಿನʼ ಈ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು.
ನಟಿ ಮೇಘನಾ ಗಾಂವ್ಕರ್ ತಮ್ಮ ಅಭಿನಯ ಕೌಶಲ್ಯದಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. 'ಚಾರ್‌ಮಿನಾರ್', 'ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ', 'ಶುಭಮಂಗಳ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2023ರಲ್ಲಿ ಬಿಡುಗಡೆಯಾದ 'ಶಿವಾಜಿ ಸುರತ್ಕಲ್ 2' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಮಿಂಚಿದರು.
ಸಿನಿರಂಗದಲ್ಲಿ ಮಿಂಚುತ್ತಿರುವ ಮೇಘನಾ ಗಾಂವ್ಕರ್ ಇದೀಗ ಡಾ.ಮೇಘನಾ ಗಾಂವ್ಕರ್ ಆಗಿದ್ದಾರೆ. ಮೇಘನಾ ಅವರು 'ಸಿನಿಮಾ ಮತ್ತು ಸಾಹಿತ್ಯ' ಎಂಬ ವಿಷಯದ ಬಗ್ಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ನಿಮ್ಮೆಲ್ಲರ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ... ಡಾ. ಮೇಘನಾ ಗಾಂವ್ಕರ್. ಈ ಮಹಿಳೆಯ ಬಗ್ಗೆ ತುಂಬಾ ಹೆಮ್ಮೆ!! ಕಳೆದ 6 ವರ್ಷಗಳಿಂದ (ಅದಕ್ಕಿಂತ ಹೆಚ್ಚಾಗಿ) ಪಿಎಚ್‌ಡಿ ಪ್ರಯಾಣ ಸುಲಭವಾಗಿರಲಿಲ್ಲ. ಆದರೆ ನಾನು ಏನನ್ನಾದರೂ ಉತ್ಸಾಹದಿಂದ ಕೈಗೆತ್ತಿಕೊಂಡು ಅದನ್ನು ಸಮರ್ಪಣಾಭಾವದಿಂದ ಪೂರ್ಣಗೊಳಿಸಿದಾಗ ನನಗೆ ಬಲವಾದ ಇಚ್ಛಾಶಕ್ತಿ ಇರುತ್ತದೆ. ಆದ್ದರಿಂದ ಇದು ವಿಶೇಷವಾಗಿದೆ! ಎಂದು ತಮ್ಮ ಪಿಎಚ್‌ಡಿ ಮಾಡಿರುವ ಕುರಿತು ಪೋಸ್ಟ್ ಮಾಡಿದ್ದಾರೆ.
ಮೇಘನಾ ಗಾಂವ್ಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ಅವರು ಕಲಬುರಗಿಯಲ್ಲಿ ಜನಿಸಿದ್ದು, ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ. ಅಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಆದರ್ಶ ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ಅಭಿನಯ ಮತ್ತು ನಿರ್ಮಾಣದಲ್ಲಿ ಡಿಪ್ಲೊಮಾ ಪಡೆದಿದ್ದಾರೆ.
ನಟಿ ಮೇಘನಾ ಗಾಂವ್ಕರ್ ಅವರ ಮೊದಲ ಸಿನಿಮಾ ʼನಮ್ ಏರಿಯಾದಲ್ ಒಂದ್ ದಿನʼ ಈ ಸಿನಿಮಾ 2010ರಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದರು. ಇದು ಅವರ ಡೆಬ್ಯೂ ಸಿನಿಮಾ ಆಗಿದ್ದು, ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು.