ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ನಟಿ ಹರ್ಷಿಕಾ ಪೂಣಚ್ಚ ದಂಪತಿ ಕೊಟ್ರು ಖಡಕ್ ಉತ್ತರ
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2023 ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್ ನೀಡಿದ್ದಾರೆ. ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಇದೀಗ ಜೋಡಿ ಮಾಧ್ಯಮಗಳ ಮೂಲಕ ಉತ್ತರ ಕೊಟ್ಟಿದೆ.
ಭುವನ್ ಪೊನ್ನಣ್ಣ ಮಾತನಾಡಿ ʻʻತುಂಬಾ ಖುಷಿ ಇದೆ. ಈಗಿನ ಸನ್ನಿವೇಶದಲ್ಲಿ ಹೇಳೋದು ಏನೆಂದರೆ, ಈಗಿನ ಸಮಯದಲ್ಲಿ ಹಲವಾರು ಜನ ಫ್ಯಾಮಿಲಿ ಪ್ಲ್ಯಾನಿಂಗ್ ಎಂದುಕೊಂಡು ಮದುವೆಯಾಗಿ 5-10 ವರ್ಷ ಮಕ್ಕಳು ಮಾಡಿಕೊಳ್ಳದೇ ಹಾಗೇ ಇರ್ತಾರೆ. ನನ್ನ ಪ್ರಕಾರ ತಪ್ಪು. ಮದುವೆಯಾದ ಕೂಡಲೇ ಮಕ್ಕಳು ಮಾಡಿಕೊಳ್ಳಿ. ಈಗಿನ ಪೊಲಿಟಿಕಲ್ ಸಂದರ್ಭಗಳನ್ನು ನೋಡಿದರೆ, ಜಗತ್ತು ಎಷ್ಟು ದಿವಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇದ್ದಷ್ಟು ದಿನ ಖುಷಿಯಾಗಿರಿ.ʼʼಎಂದರು.
ಇನ್ನು ನಟಿ ಹರ್ಷಿಕಾ ʻʻಭುವನ್ ಅವರ ನಿರ್ಧಾರವೇ ನನ್ನದೂ ಆಗಿತ್ತು. ಸಾಕಷ್ಟು ವರ್ಷ ನಾವು ಸ್ನೇಹಿತರಾಗಿ ಆಮೇಲೆ ಮದುವೆ ಆದ್ವಿ. ನಮ್ಮ ನಿರ್ಧಾರ ಅದೇ ಇತ್ತು. ದೇವರು ಮಕ್ಕಳು ಕೊಟ್ಟರೆ ಮಾಡಿಕೊಳ್ಳಬೇಕು ಎಂದೇ ಇತ್ತು. ದೇವರ ಆಶೀರ್ವಾದಿಂದ ಒಳ್ಳೆಯದು ಆಗಿದೆ. ಮುಂದೆ ಸಿನಿಮಾ ಮಾಡುತ್ತೇನೆ. ತಾಯಿಯಾಗಿ ಮಗುವಿಗೆ ಎಷ್ಟು ಸಮಯ ಕೊಡಬೇಕು ಅಷ್ಟು ಕೊಡುತ್ತೇನೆ. ಅದರ ನಂತರ ಸಿನಿಮಾ ಮಾಡೋದು ಇದ್ದೇ ಇದೆʼ ಎಂದರು.
2008ರಲ್ಲಿ ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹರ್ಷಿಕಾ ಬಳಿಕ ಕೊಡವ, ಕೊಂಕಣಿ, ತೆಲುಗು, ಮಲಯಾಳಂ, ಬೋಜಪುರಿ, ತಮಿಳು ಮುಂತಾದ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡದ ಕನ್ನಡದ ʼತಮಸ್ಸುʼ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.