
ಅನುಪಮಾ ಪರಮೇಶ್ವರ್
ಆನ್‌ಲೈನ್‌ನಲ್ಲಿ ಕಿರುಕುಳ| ನಟಿ ಅನುಪಮಾ ಪರಮೇಶ್ವರನ್ ಕೇರಳ ಸೈಬರ್ ಕ್ರೈಮ್ ಮೊರೆ
ಅನುಪಮಾ ಅವರ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಗುರುತಿಸಿದ್ದಾರೆ. ಆರೋಪಿಯು ತಮಿಳುನಾಡಿನ 20 ವರ್ಷದ ಯುವತಿ ಎಂದು ತಿಳಿದುಬಂದಿದೆ.
ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಮೇಲೆ ಮತ್ತು ಕುಟುಂಬದ ವಿರುದ್ಧ ಆನ್‌ಲೈನ್‌ನಲ್ಲಿ ನಡೆದ ವ್ಯವಸ್ಥಿತ ಕಿರುಕುಳ ಮತ್ತು ಮಾನಹಾನಿ ಅಭಿಯಾನದ ಬಗ್ಗೆ ಕೇರಳ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ನಟಿಯ ಮಾರ್ಫ್ ಮಾಡಿದ ಚಿತ್ರಗಳು ಮತ್ತು ಆಧಾರರಹಿತ ಸುಳ್ಳು ಆರೋಪಗಳನ್ನು ಪ್ರಸಾರ ಮಾಡಲು ಹಲವಾರು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಲಾಗಿದೆ ಎಂದು ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಅನುಪಮಾ ಅವರ ದೂರಿನ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಗುರುತಿಸಿದ್ದಾರೆ. ಆರೋಪಿಯು ತಮಿಳುನಾಡಿನ 20 ವರ್ಷದ ಯುವತಿ ಎಂದು ತಿಳಿದುಬಂದಿದೆ. ಆಕೆ ದ್ವೇಷವನ್ನು ಹರಡುವ ಮತ್ತು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವ ಉದ್ದೇಶದಿಂದಲೇ ಅನೇಕ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಈ ಕೃತ್ಯ ಎಸಗಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಯುವತಿಯ ಕಿರಿಯ ವಯಸ್ಸಿನ ಕಾರಣದಿಂದಾಗಿ ಆಕೆಯ ಗುರುತನ್ನು ಬಹಿರಂಗಪಡಿಸದಿರಲು ಅನುಪಮಾ ನಿರ್ಧರಿಸಿದ್ದಾರೆ. ನಾನು ಅವಳ ಭವಿಷ್ಯ ಅಥವಾ ಮನಸ್ಸಿನ ಶಾಂತಿಯನ್ನು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ನಟಿ ತಮ್ಮ ಮಾನವೀಯನ್ನು ಪ್ರದರ್ಶಿಸಿದ್ದಾರೆ. ಆದರೂ, ಕಾನೂನು ಕ್ರಮಗಳು ಮುಂದುವರಿಯುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯನ್ನು ಬಳಸಿಕೊಂಡು ನಟಿ ಆನ್‌ಲೈನ್ ಜವಾಬ್ದಾರಿಯ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಸ್ಮಾರ್ಟ್‌ಫೋನ್ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಪ್ರವೇಶ ಇರುವುದರಿಂದ ಯಾರಿಗೂ ಕಿರುಕುಳ ನೀಡುವ, ಮಾನಹಾನಿ ಮಾಡುವ ಅಥವಾ ದ್ವೇಷ ಹರಡುವ ಹಕ್ಕು ಸಿಗುವುದಿಲ್ಲ. ಆನ್‌ಲೈನ್‌ನಲ್ಲಿ ಮಾಡುವ ಪ್ರತಿ ಕ್ರಿಯೆಯೂ ಒಂದು ಕುರುಹು ಬಿಡುತ್ತದೆ ಮತ್ತು ಹೊಣೆಗಾರಿಕೆ ಅನುಸರಿಸುತ್ತದೆ ಎಂದು ಅವರು ಬರೆದಿದ್ದಾರೆ. ಸೈಬರ್ ಬೆದರಿಕೆ ಶಿಕ್ಷಾರ್ಹ ಅಪರಾಧ ಎಂದು ಒತ್ತಿ ಹೇಳಿದ್ದಾರೆ.
ಸದ್ಯ ಅನುಪಮಾ ಪರಮೇಶ್ವರ್ ಅವರ, 'ಡ್ರ್ಯಾಗನ್', 'ಪರಧ', 'ಕಿಷ್ಕಿಂಧಾಪುರಿ', 'ಜೆಎಸ್‌ಕೆ', 'ದಿ ಪೆಟ್ ಡಿಟೆಕ್ಟಿವ್' ಮತ್ತು 'ಬೈಸನ್' ಬಿಡುಗಡೆಯಾಗಿವೆ. ತಮಿಳು ಚಿತ್ರ 'ಲಾಕ್‌ಡೌನ್‌ನಲ್ಲಿ' ಕೂಡ ಕಾಣಿಸಿಕೊಳ್ಳಲಿದ್ದಾರೆ.

