29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ  ಪ್ರಯಾಣ
x
ನಟ ಶಿವರಾಜ್‌ಕುಮಾರ್‌

29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ ಪ್ರಯಾಣ

'ನಮ್ಮೂರ ಮಂದಾರ ಹೂವೇ' ಚಿತ್ರವನ್ನು ಜಯಶ್ರೀ ದೇವಿ ನಿರ್ಮಾಣ ಮಾಡಿದ್ದರು. ಅದಾಗಿ 29 ವರ್ಷಗಳ ಬಳಿಕ ನಟ ಶಿವಣ್ಣ ಮತ್ತೆ ಯಾಣಕ್ಕೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ.


ಕಳೆದ ಭಾನುವಾರ (ಜನವರಿ 26) ಅಮೇರಿಕಾದಿಂದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ವಾಪಸ್ಸಾದ ಶಿವರಾಜಕುಮಾರ್, ಚಿತ್ರೀಕರಣದಲ್ಲಿ ಭಾಗವಹಿಸದಿದ್ದರೂ, ಒಂದಲ್ಲ ಒಂದು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವು ಯೂಟ್ಯೂಬ್‍ ಚಾನಲ್‍ಗಳಿಗೆ ಸಂದರ್ಶನ ನೀಡಿರುವ ಅವರು, ಜೀ ಕನ್ನಡದ ‘ಸರಿಗಮಪ’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿ ಬಂದಿದ್ದಾರೆ.

ಈ ಮಧ್ಯೆ, ಅವರು ಶಿರಸಿ ಬಳಿಯ ಯಾಣಗೆ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡಿದ್ದಾರೆ. ಭಾನುವಾರ ಯಾಣಕ್ಕೆ ಭೇಟಿ ನೀಡಿದ್ದ ಉಪೇಂದ್ರ, ತಮ್ಮ ‘ಎಕ್ಸ್’ ಖಾತೆಯಲ್ಲಿ ಫೋಟೋ ಸಹ ಹಂಚಿಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ, ನಮ್ಮೂರೇ ನಮಗೆ ಮೇಲೂ ...' ಎಂದು ಕ್ಯಾಪ್ಶನ್‍ ನೀಡಿದ್ದಾರೆ. ಡಾ. ರಾಜಕುಮಾರ್ ಅವರ ‘ಆಕಸ್ಮಿಕ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು …’ ಹಾಡಿನ ಸಾಲುಗಳು ಇದಾಗಿದ್ದು, ಈ ಚಿತ್ರಕ್ಕಾಗಿ ಹಂಸಲೇಖ ಈ ಹಾಡನ್ನು ಬರೆದಿದ್ದರು.

ವಿಶೇಷವೆಂದರೆ, ‘ನಮ್ಮೂರ ಮಂದಾರ ಹೂವೆ’ ನಂತರ ಮತ್ತೆ 29 ವರ್ಷಗಳ ಬಳಿಕ ಅವರು ಭೇಟಿ ನೀಡಿದ್ದಾರೆ. ಈ ಕುರಿತು ಶಿವರಾಜಕುಮಾರ್‍ ನೆನಪಿಸಿಕೊಂಡಿದ್ದಾರೆ. ಶಿವರಾಜಕುಮಾರ್‍, ರಮೇಶ್‍ ಅರವಿಂದ್‍, ಪ್ರೇಮಾ ಮುಂತಾದವರು ನಟಿಸಿದ್ದ ‘ನಮ್ಮೂರ ಮಂದಾರ ಹೂವೇ’ ಚಿತ್ರವು 1996ರಲ್ಲಿ ಬಿಡುಗಡೆಯಾಗಿತ್ತು. ಸುನೀಲ್‍ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರವು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಆ ಚಿತ್ರದ ಕೆಲವು ಭಾಗದ ಚಿತ್ರೀಕರಣ ಯಾಣದಲ್ಲಿ ಆಗಿದ್ದು, ಆ ಸಂದರ್ಭದಲ್ಲಿ ಶಿವರಾಜಕುಮಾರ್ ಯಾಣಕ್ಕೆ ಭೇಟಿ ನೀಡಿದ್ದರಂತೆ. ಅದರ ನಂತರ ಅವರು ಅತ್ತ ಹೋಗಿರಲಿಲ್ಲ. ಇದೀಗ 29 ವರ್ಷಗಳ ನಂತರ ಶಿವರಾಜಕುಮಾರ್ ಮತ್ತೊಮ್ಮೆ ಯಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.

ತಾವು ಯಾಣಕ್ಕೆ ಭೇಟಿ ನೀಡಿರುವ ಹಳೆಯ ಫೋಟೋ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಫೋಟೋವನ್ನು ತಮ್ಮ 'ಇನ್ಸ್ಟಾಗ್ರಾಂʼ ಖಾತೆಯಲ್ಲಿ ಹಂಚಿಕೊಂಡಿರುವ ಶಿವರಾಜ್‌ ಕುಮಾರ್‌ 'ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..', 'ನಮ್ಮೂರ ಮಂದಾರ ಹೂವೆ' ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ..' ಎಂದೂ ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು, ಶಸ್ತ್ರಚಿಕಿತ್ಸೆಗೂ ಮುನ್ನ ‘ಶಿವಣ್ಣ 131’ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣ ಮಾರ್ಚ್‍ನಿಂದ ಪುನಃ ಪ್ರಾರಂಭವಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಆದಷ್ಟು ಬೇಗ ಚಿತ್ರೀಕರಣದಲ್ಲಿ ಭಾಗವಹಿಸುವ ಕುರಿತು ಶಿವರಾಜಕುಮಾರ್ ಸಹ ಆಸೆ ವ್ಯಕ್ತಪಡಿಸಿದ್ದಾರೆ .


Read More
Next Story