ಕನ್ನಡಿಗನ ಬಯೋಪಿಕ್‌ನಲ್ಲಿ ನಟ ಅಕ್ಷಯ್ ಕುಮಾರ್: ಟ್ರೇಲರ್‌ ಬಿಡುಗಡೆ
x
ನಟ ಅಕ್ಷಯ್‌ ಕುಮಾರ್‌

ಕನ್ನಡಿಗನ ಬಯೋಪಿಕ್‌ನಲ್ಲಿ ನಟ ಅಕ್ಷಯ್ ಕುಮಾರ್: ಟ್ರೇಲರ್‌ ಬಿಡುಗಡೆ

ಕನ್ನಡಿಗನೊಬ್ಬನ ಕತೆಯನ್ನು ತೆರೆಗೆ ತರುತ್ತಿದೆ ಬಾಲಿವುಡ್ ಸಿನಿಮಾದಲ್ಲಿ ನಾಯಕನಾಗಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಿದ್ದು ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.


Click the Play button to hear this message in audio format

ಕನ್ನಡಿಗನೊಬ್ಬನ ಕತೆಯನ್ನು ತೆರೆಗೆ ತರುತ್ತಿದೆ. ಬಾಲಿವುಡ್ ಸಿನಿಮಾದಲ್ಲಿ ನಾಯಕನಾಗಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಿದ್ದು ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

ಕಡಿಮೆ ವೆಚ್ಚದ ಏರ್​ಲೈನ್ ಆರಂಭಿಸಿದ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಕುರಿತಾದ ‘ಸರ್ಫಿರಾ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಈ ಹಿಂದೆ ತಮಿಳಿನಲ್ಲಿ ನಿರ್ಮಿಸಲಾಗಿದ್ದ ‘ಸೂರರೈ ಪೊಟ್ರು’ ಸಿನಿಮಾವನ್ನು ‘ಸರ್ಫಿರಾ’ ಹೆಸರಲ್ಲಿ ಹಿಂದಿಯಲ್ಲಿ ನಿರ್ಮಿಸಲಾಗಿದೆ. ತಮಿಳಿನಲ್ಲಿ ‘ಸೂರರೈ ಪೊಟ್ರು’ ಸಿನಿಮಾವನ್ನು ನಿರ್ದೇಶಿಸಿದ್ದ ಸುಧಾ ಕೊಂಗರಾ ಅವರೇ ಹಿಂದಿಯಲ್ಲಿಯೂ ನಿರ್ದೇಶನ ಮಾಡಿದ್ದಾರೆ. ತಮಿಳಿನಲ್ಲಿ ‘ಸೂರರೈ ಪೊಟ್ರು’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾ ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತಾದರೂ ಭಾರಿ ಜನಪ್ರಿಯತೆ ಗಳಿಸಿತ್ತು. ಇದೀಗ ‘ಸರ್ಫಿರಾ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ತಮಿಳಿನಲ್ಲಿ ಸೂರ್ಯ, ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟಿಸಿದ್ದರೆ, ಹಿಂದಿ ಸಿನಿಮಾದಲ್ಲಿ ಸೂರ್ಯ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿಯೂ ಸೂರ್ಯ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಪರೇಶ್ ರಾವಲ್ ಅವರೇ ಹಿಂದಿಯಲ್ಲಿ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಇತರೆ ಪಾತ್ರಗಳ ನಟರನ್ನು ಬದಲು ಮಾಡಲಾಗಿದೆ.

ಹಿಂದಿ ಸಿನಿಮಾಕ್ಕೆ ತಮಿಳು ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಬಂಡವಾಳ ಹೂಡಿದ್ದಾರೆ. ಜೊತೆಗೆ ವಿಕ್ರಂ ಭಾಟಿಯಾ ಮತ್ತು ವಿಕ್ರಂ ಮಲ್ಹೋತ್ರಾ ಸಹ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ರಾಧಿಕಾ ನಾಯಕಿಯಾಗಿದ್ದಾರೆ. ಸಿನಿಮಾ ಜುಲೈ 12 ಸಿನಿಮಾ ಬಿಡುಗಡೆ ಆಗಲಿದೆ.

Read More
Next Story