ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೋ: ಎಫ್‌ಐಆರ್ ದಾಖಲು
x
ನಟ ಅಮೀರ್‌ ಖಾನ್‌

ಅಮೀರ್ ಖಾನ್ ಡೀಪ್‌ಫೇಕ್ ವಿಡಿಯೋ: ಎಫ್‌ಐಆರ್ ದಾಖಲು

ನಟ ಅಮೀರ್ ಖಾನ್ ಅವರ ಡೀಪ್‌ಫೇಕ್ ವಿಡಿಯೋದಲ್ಲಿ ರಾಜಕೀಯ ಪಕ್ಷ ಪರ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಎಡಿಟ್ ಮಾಡಲಾಗಿದೆ.


ಮುಂಬೈ: ನಟ ಅಮೀರ್ ಖಾನ್ ಅವರ ಡೀಪ್‌ಫೇಕ್ ವಿಡಿಯೋದಲ್ಲಿ ರಾಜಕೀಯ ಪಕ್ಷ ಪರ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಎಡಿಟ್ ಮಾಡಲಾಗಿದೆ. ಮುಂಬೈ ಪೊಲೀಸರು ಅನಾಮಧೇಯ ವ್ಯಕ್ತಿಯ ವಿರುದ್ಧ ಎಫ್‌ ಐ ಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸೆಕ್ಷನ್​ 419, 420 ಅಡಿಯಲ್ಲಿ ಪೊಲೀಸ್​ ಠಾಣೆಯಲ್ಲಿ FIR ದಾಖಲಿಸಲಾಗಿದೆ. AI ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ.

ಅಮೀರ್‌ ಖಾನ್ ಅವರು ಈ ಹಿಂದೆ ಚುನಾವಣಾ ಆಯೋಗದ ಪ್ರಚಾರಗಳ ಮೂಲಕ ಹಲವಾರು ವರ್ಷಗಳಿಂದ ಜಾಗೃತಿ ಮೂಡಿಸಿದ್ದಾರೆ. ಆದರೆ ಅವರು ಯಾವುದೇ ರಾಜಕೀಯ ಪಕ್ಷವನ್ನು ಪ್ರಚಾರ ಮಾಡಿಲ್ಲ ಎಂದು ಅಮೀರ್‌ ಖಾನ್‌ ವಕ್ತಾರರನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ಪ್ರಸಿದ್ಧ ಷೋ 'ಸತ್ಯಮೇವ್ ಜಯತೇ' ಒಂದು ಕ್ಲಿಪ್‌ ಅನ್ನು ಬಳಸಿಕೊಂಡು ಕಾಂಗ್ರೆಸ್‌ ಡೀಪ್‌ಫೇಕ್‌ ಮಾಡಿದೆ. ಆ ಕಾರ್ಯಕ್ರಮದ ದೃಶ್ಯವನ್ನು ಇಟ್ಟುಕೊಂಡು ಕಾಂಗ್ರೆಸ್​​ ಪಕ್ಷವು ಬಿಜೆಪಿ ವಿರುದ್ಧ ಜಾಹೀರಾತು ಮಾಡಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌, ಡೀಪ್‌ ಫೇಕ್​​ ತಂತ್ರಜ್ಞಾನದ ಮೂಲಕ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದೆ ಎಂದು ಆಮೀರ್‌ ಖಾನ್‌ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಆಮೀರ್ ಖಾನ್​ ವಕ್ತಾರ ಮುಂಬೈ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Read More
Next Story