ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ ನಾಳೆ ತೆರೆಗೆ
x
ʻಸಹಾರಾʼ ನಾಳೆ ತೆರೆ ಕಾಣುತ್ತಿದೆ.

ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ ನಾಳೆ ತೆರೆಗೆ

ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ ನಾಳೆ(ಜೂ.7) ತೆರೆ ಕಾಣುತ್ತಿದೆ. ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼಸಹಾರಾʼ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು.


ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ ನಾಳೆ (ಜೂ.7) ತೆರೆ ಕಾಣುತ್ತಿದೆ. ಸಾರಿಕಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼಸಹಾರಾʼ ಚಿತ್ರಕಥೆಯು ಮಹಿಳಾ ಕ್ರಿಕೆಟ್ ಪಟು ಕುರಿತಾದದ್ದು.

ಮಂಡ್ಯದ ಹುಡುಗಿ ಒಬ್ಬಳು ಮಹಿಳಾ ಕ್ರಿಕೆಟ್ ಪಟು ಆಗುವ‌ ಕನಸನ್ನು ಕಂಡು, ಅದನ್ನು ನನಸಾಗಿಸುವ ಹಾದಿಯಲ್ಲಿ ಆಕೆ ಎದುರಿಸುವ ಅಡೆತಡೆಗಳು, ಹೇಗೆ ಅವುಗಳನ್ನು ಮೀರಿ‌ ಸಾಧನೆಯ ಮೆಟ್ಟಿಲೇರುತ್ತಾಳೆ ಎಂಬುದನ್ನು ಕಥೆ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಈ‌ ನಿಟ್ಟಿನಲ್ಲಿ ʼಸಹಾರಾʼ ಸಿನಿ‌ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ʼಸಹಾರಾʼ ಚಿತ್ರಕ್ಕೆ ಮಂಜೇಶ್ ಭಗವತ್ ಆಕ್ಷನ್ ಕಟ್ ಹೇಳಿದ್ದು, ಅಂಕುಶ್ ರಜತ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದು, ಆಂಟೊನಿ ರುತ್ ವಿನ್ಸೆಂಟ್ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಜಯ್ ಎಂ ಕುಮಾರ್ ಸಂಕಲನಕಾರರಾಗಿದ್ದಾರೆ. ಪಾತ್ರಕ್ಕಾಗಿಯೇ ಸಾರಿಕಾ ಅವರು ರಣಜಿ ಆಟಗಾರ ಕೆ.ಬಿ. ಪವನ್ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ- ಚಿತ್ರಕಥೆ– ಸಂಭಾಷಣೆ ರಚಿಸಿದ್ದಾರೆ.

ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಮಹಿಳಾ ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಪಿ.ಆರ್.ಸಂಸ್ಥೆ ಸಪೋರ್ಟ್ ಮಾಡಿದೆ. ಆಡಿಯೋ ಹಕ್ಕನ್ನು ಕೂಡ ಪಡೆದುಕೊಂಡಿದೆ. ಕೆಆರ್.ಜಿ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ.

Read More
Next Story