‘ಭಕ್ಷ್ಯಗಳಿಗೆ ಫಿಲ್ಮೀ ಸ್ಪರ್ಶ’ |ಬೆಂಗಳೂರಿನ ಬಾಣಸಿಗರಿಗೆ ಸ್ಪೂರ್ತಿಯಾದ ಚಲನಚಿತ್ರಗಳು
x

  ಎಐ ಚಿತ್ರ

‘ಭಕ್ಷ್ಯಗಳಿಗೆ ಫಿಲ್ಮೀ ಸ್ಪರ್ಶ’ |ಬೆಂಗಳೂರಿನ ಬಾಣಸಿಗರಿಗೆ ಸ್ಪೂರ್ತಿಯಾದ ಚಲನಚಿತ್ರಗಳು

ಬೆಂಗಳೂರಿನ ರೆಸ್ಟೋರೆಂಟ್ ಗಳು ಮತ್ತು ಅಲ್ಲಿನ ಬಾಣಸಿಗರು ಚಲನಚಿತ್ರಗಳಿಂದ ಸ್ಫೂರ್ತಿ ಪಡೆದು ಅದಕ್ಕೆ ತಕ್ಕಂತೆ ಆಕರ್ಷಕ ಮೆನುಗಳನ್ನು ಸಿದ್ಧಪಡಿಸುವ ಪ್ರಯೋಗಗಳನ್ನು ಶುರು ಹಚ್ಚಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದನ್ನು ‘ಭಕ್ಷ್ಯಗಳಿಗೆ ಫಿಲ್ಮೀ ಸ್ಪರ್ಶ’ ಎಂದು ಕರೆದರೆ ತಪ್ಪೇನಿಲ್ಲ.


ರೆಸ್ಟೋರೆಂಟ್ ನಲ್ಲಿ ಕುಂತಾಗ ಟೇಬಲ್ ಮುಂದಿನ ಮೆನು ಕಾರ್ಡ್ ನಲ್ಲಿ ಚಲನಚಿತ್ರದ ಜನಪ್ರಿಯ ಪಾತ್ರಗಳ ಹೆಸರಿನ ಭಕ್ಷ್ಯಗಳೇ ಕಾಣಿಸಿಕೊಂಡರೆ? ಒಮ್ಮೆಗೇ ಅಚ್ಚರಿ ಬೀಳುವ ಸರದಿ ನಿಮ್ಮದಾಗುವುದು ಖಚಿತ.

ಹೌದು, ಬೆಂಗಳೂರಿನ ರೆಸ್ಟೋರೆಂಟ್ ಗಳು ಮತ್ತು ಅಲ್ಲಿನ ಬಾಣಸಿಗರು ಚಲನಚಿತ್ರಗಳಿಂದ ಸ್ಫೂರ್ತಿ ಪಡೆದು ಅದಕ್ಕೆ ತಕ್ಕಂತೆ ಆಕರ್ಷಕ ಮೆನುಗಳನ್ನು ಸಿದ್ಧಪಡಿಸುವ ಪ್ರಯೋಗಗಳನ್ನು ಶುರು ಹಚ್ಚಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಇದನ್ನು ‘ಭಕ್ಷ್ಯಗಳಿಗೆ ಫಿಲ್ಮೀ ಸ್ಪರ್ಶ’ ಎಂದು ಕರೆದರೆ ತಪ್ಪೇನಿಲ್ಲ.

ಬೆಂಗಳೂರಿನ ಹೊರವಲಯದಲ್ಲೊಂದು ರೆಸ್ಟೋರೆಂಟ್ ಇದೆ. ಅದರ ಹೆಸರು ‘ಫಾರ್ಮ್-ಲೋರ್’ (FARMLORE). ‘ಫಾರ್ಮ್-ಟು-ಟೇಬಲ್’ ಎಂಬುದು ಅದರ ಪರಿಕಲ್ಪನೆ. ಅಲ್ಲಿ ಹನ್ನೊಂದು ಕೋರ್ಸ್ ಗಳ ಊಟ ಬೇಕೆಂದು ಸೂಚಿಸುವುದಾದರೂ ಹೇಗೆ? ಅಲ್ಲಿಗೆ ಬಂದ ಅತಿಥಿಗಳಿಗೆ ‘ಬ್ಯಾಡ್ ಬಾಯ್ ಗಮ್ಮೀಸ್’ ಎಂದು ಲೇಬಲ್ ಮಾಡಲಾದ ಒಂದು ಪುಟ್ಟದಾದ ಬಿಳಿ ಬಾಕ್ಸ್ ನೀಡುತ್ತಾರೆ. ಇದರೊಳಗೆ ವಿಸ್ಕಿ ಮತ್ತು ವೋಡ್ಕಾ ಸ್ವಾದಭರಿತವಾದ ಪುಟ್ಟ ಪುಟ್ಟ gummy bear ಗಳಿರುತ್ತವೆ. ಅವುಗಳನ್ನು ಎತ್ತಿ ಏಕಾಏಕಿ ನಿಮ್ಮ ಬಾಯಿಯೊಳಗೆ ಹಾಕಿಕೊಳ್ಳುವಂತಿಲ್ಲ. ಅದಕ್ಕೂ ಮುನ್ನ ಚಲನಚಿತ್ರದ ಹೆಸರನ್ನು ಹೇಳಬೇಕು. ಅದಕ್ಕೆ ಬೇಕಾದ ಸುಳಿವುಗಳು ಆ ಬಾಕ್ಸ್ ನಲ್ಲಿಯೇ ಇರುತ್ತವೆ. ಅವುಗಳನ್ನು ಗಮನಿಸಿ ಚಿತ್ರದ ಹೆಸರನ್ನು ಊಹಿಸಬೇಕು. ಈ ಸುಳಿವುಗಳು ಮತ್ತು ಚಲನಚಿತ್ರಗಳ ಹೆಸರು ಕಾಲಕಾಲಕ್ಕೆ ಬದಲಾಗುತ್ತವೆ.

ಬಾಯಿ ನೀರೂರಿಸುವ ತರಾವರಿ ಆಹಾರಗಳು, ಅದನ್ನು ತಯಾರಿಸುವ ಬಾಣಸಿಗರು ಹಾಗೂ ರೆಸ್ಟೋರೆಂಟ್ ಗಳ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಅವುಗಳಲ್ಲಿ ಮನಸೆಳೆಯುವ ರಾಟಾಟೂಯಿಲ್ (2007), ಜಪಾನಿನ ಟಾಂಪೊಪೊ (1985), ಅಂಗ್ ಲೀ ಅವರ ಈಟ್ ಡ್ರಿಂಕ್ ಮ್ಯಾನ್ ವುಮನ್ (1994) ಮತ್ತು ರಿತೇಶ್ ಬಾತ್ರಾ ಅವರ ಲಂಚ್ ಬಾಕ್ಸ್ (2013) ಸೇರಿವೆ. ರೆಸ್ಟೋರೆಂಟ್ ನಲ್ಲಿ ನಿಮಗೆ ಕೊಡಲಾದ ಬಾಕ್ಸ್ ನಲ್ಲಿ ಈ ಚಿತ್ರಗಳಲ್ಲಿನ ಅನಿಮೇಟೆಡ್ ಪಾತ್ರಗಳು ಅಥವಾ ನೈಜ ಪಾತ್ರಗಳ ಬಗ್ಗೆ ಸುಳಿವುಗಳು ಇರಬಹುದು.

ತಮ್ಮ ಹೋಟೆಲ್ ಗಳಿಗೆ ಅತಿಥಿಗಳನ್ನು ಆಕರ್ಷಿಸಲು ಅದರ ಮಾಲೀಕರು ಮತ್ತು ಬಾಣಸಿಗರು ಏನೆಲ್ಲ ಸೃಜನಾತ್ಮಕ ಮಾರ್ಗಗಳನ್ನು ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಈಗ ಫಾರ್ಮ್-ಲೋರ್ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇಲ್ಲಿ Omniscience ಎಂಬ ಪರಿಕಲ್ಪನೆಯ ಒಂದು ಜಾಗವನ್ನು ವ್ಯವಸ್ಥೆ ಮಾಡುತ್ತಾರೆ. ಹೆಸರೇ ಹೇಳುವಂತೆ ಸಮುದಾಯ ಶೈಲಿಯ ಊಟಕ್ಕಾಗಿ ಉದ್ದಾನುದ್ದದ ಟೇಬಲ್ ಜೋಡಿಸಿರುತ್ತಾರೆ. ಇಲ್ಲಿ ಒದಗಿಸಲಾದ ಮೆನುವಿನಲ್ಲಿ ಇರುವ ಭಕ್ಷ್ಯಗಳು ಚಲನಚಿತ್ರ ಶೀರ್ಷಿಕೆಯ ಸುಳಿವುಗಳಾಗಿರುತ್ತವೆ.

ಈ ಟೇಬಲ್ ನ ಸಮುದಾಯ ಊಟದಲ್ಲಿ ಭಾಗಿಯಾದವರನ್ನು ಸಂಪೂರ್ಣ ತೊಡಗಿಸುವ ಉದ್ದೇಶದಿಂದ ಡಂಬ್ ಶರಾಡ್ಸ್ ಕಾರ್ಡ್ ಗೇಮ್ ಆಡಿಸಲಾಗುತ್ತದೆ. ಕೇವಲ ಊಟ ಮಾಡುವುದು, ಆಹಾರವನ್ನು ಸವಿಯುವುದು ಮಾತ್ರವಲ್ಲದೆ ಮೋಜು-ಮಸ್ತಿಯ ಮೂಲಕ ಉತ್ತೇಜನ ನೀಡುವುದು ಇದರ ಉದ್ದೇಶ ಎನ್ನುತ್ತಾರೆ ಫಾರ್ಮ್-ಲೋರ್ ಮಾಲೀಕ ಕೌಶಿಕ್ ರಾಜು.

ಇನ್ನೂ ಕುತೂಹಲದ ಸಂಗತಿ ಎಂದರೆ ಕಳೆದ ಹ್ಯಾಲೋವಿನ್ ಸಂದರ್ಭದಲ್ಲಿ ಫಾರ್ಮ್-ಲೋರ್ ನಲ್ಲಿ ರಾಲ್ಫ್ ಫಿಯೆನ್ಸ್ ಅಭಿನಯಿಸಿದ ‘ದಿ ಮೆನು’ ಎಂಬ ಹಾರರ್ ಕಾಮಿಡಿ ಚಿತ್ರದ ಸುತ್ತ ಊಟವನ್ನು ಸಿದ್ಧಪಡಿಸಲಾಗಿತ್ತು. ಆ ಚಿತ್ರದಲ್ಲಿನ ಭಕ್ಷ್ಯಗಳನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ಅದರ ನಡುವೆ ಬಾಣಸಿಗರು ಬಂದು ಚಿತ್ರದ ಕೆಲವು ದೃಶ್ಯಗಳನ್ನು ವ್ಯಾಖ್ಯಾನಿಸುವ ಕೆಲಸಮಾಡಿದ್ದರು.

ಪಾರ್ಟ್-ಟೂ (ParTTwo) ರೆಸ್ಟೋರೆಂಟ್ ನ ಬಾಣಸಿಗ ಕರಣ್ ಉಪಮನ್ಯು ಇನ್ನೊಂದು ಪ್ರಯೋಗವನ್ನು ಮಾಡಿದ್ದರು. 1966ರಲ್ಲಿ ಬಿಡುಗಡೆಯಾದ ಸರ್ಫಿಂಗ್ ವಸ್ತು ವಿಷಯವನ್ನು ಒಳಗೊಂಡ ಎಂಡ್-ಲೆಸ್ ಸಮ್ಮರ್ ಸಾಕ್ಷ್ಯಚಿತ್ರವನ್ನು ತಮ್ಮ ಮೆನುವಿನಲ್ಲಿ ಬಳಸಿಕೊಂಡಿದ್ದರು. ಇಂತಹ ಪರಿಕಲ್ಪನೆಯನ್ನು ಬಳಸಿಕೊಳ್ಳಲು ಬಾಣಸಿಗರಿಗೆ ಆ ಚಲನಚಿತ್ರದ ಬಗ್ಗೆ ಅಥವಾ ಟಿವಿ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಇರಬೇಕಾಗುತ್ತದೆ. ಅದರಲ್ಲಿ ಬರುವ ಪಾತ್ರಗಳನ್ನು ಗಮನಿಸಿ ಅವುಗಳನ್ನು ಮೆನುವಿನಲ್ಲಿ ಅಳವಡಿಸಲು ಸಾಧ್ಯವಾಗುತ್ತದೆ.

ಕರಣ್ ಉಪಮನ್ಯು ಅವರು ಪಶ್ಚಿಮ ಕರಾವಳಿಯಲ್ಲಿ ಸರ್ಫಿಂಗ್ ಕುರಿತ ತರಬೇತಿಯನ್ನು ಪಡೆಯುತ್ತಿದ್ದಾಗ ಆದ ಅನುಭವಗಳಿಗೆ ಮರುಳಾಗಿದ್ದರು. ‘ನಿಮ್ಮ ಕಾಲ್ಬೆರಳಗಳ ನಡುವೆ ಮರಳು ಸಿಕ್ಕಿಹಾಕಿಕೊಂಡಾಗ, ನಿಮ್ಮ ತಲೆಗೂದಲಲ್ಲಿ ಉಪ್ಪುಪ್ಪು ಅಂಟಿನ ಅನುಭವವಾಗುತ್ತಿದ್ದಾಗ ಅಲ್ಲಿ ಸಿಗುವ ಸಾಮಾನ್ಯ ಮೀನಿನ ಊಟ ಕೂಡ ವಿಶೇಷ ಸ್ವಾದಭರಿತವಾಗಿ ಕಾಣುತ್ತದೆ’ ಎಂದು ಅವರು ಹೇಳುತ್ತಾರೆ.

ಕಳೆದ ಬೇಸಿಗೆ ಋತುವಿನಲ್ಲಿ ಇಂತಹುದೇ ಪರಿಕಲ್ಪನೆಯನ್ನು ತಮ್ಮ ಮೆನುವಿನಲ್ಲಿ ಅಳವಡಿಸಲು ಮುಂದಾದರು. ಆ ಸಮಯದಲ್ಲಿ ಯಾವುದು ಲಭ್ಯವಿರುತ್ತದೆ ಎನ್ನುವುದರ ಮೇಲೆ ಆ ಸೀಸನ್ ನ ಪದಾರ್ಥಗಳು ಅವಲಂಬಿಸಿರುತ್ತವೆ. ನಾನು ನೋಡಿದ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಹತ್ತಾರು ಕಡೆಗಳ ಪ್ರವಾಸದ ವೇಳೆ ಸಿಕ್ಕ ಅನುಭವಗಳು ಮೆನುವಿನಲ್ಲಿ ಸೃಜನಾತ್ಮಕವಾಗಿ ಅರಳಿಕೊಳ್ಳುತ್ತವೆ ಎನ್ನುತ್ತಾರೆ ಕರಣ್.

ಪ್ರಪಂಚದ ನಾನಾ ಭಾಗಗಳಲ್ಲಿ ಬೇಸಿಗೆ ಋತುವನ್ನು ಹೇಗೆ ಭಿನ್ನ ಭಿನ್ನ ಆಹಾರಗಳ ಮೂಲಕ ಅನುಭವಿಸುತ್ತಾರೆ ಎಂಬುದನ್ನು ಪಾರ್ಟ್-ಟೂ (ParTTwo) ರೆಸ್ಟೋರೆಂಟ್ ನ ಮೆನುವಿನಲ್ಲಿ ಅನಾವರಣಗೊಳಿಸುವ ಪ್ರಯತ್ನವನ್ನು ಅವರು ಮಾಡಿದ್ದರು. ಇದಕ್ಕೆ ನಿಜಕ್ಕೂ ಸ್ಪೂರ್ತಿಯಾಗಿದ್ದು ಎಂಡ್-ಲೆಸ್ ಸಮ್ಮರ್ ಸಾಕ್ಷ್ಯಚಿತ್ರ.

ಆ ಅವಧಿಯಲ್ಲಿ ಲಭ್ಯವಿರುವ ಲಿಚಿ ಹಣ್ಣುಗಳಿಂದ ಮಾಡಲಾದ ಸೆವಿಚಿ (ಲ್ಯಾಟಿನ್ ಅಮೆರಿಕದ ಡಿಶ್)ಯನ್ನು ಅತಿಥಿಗಳಿಗೆ ಉಣಬಡಿಸಲಾಗಿತ್ತು. ಇದಕ್ಕೆ ಸಂಸ್ಕರಿಸಿದ ತಾಜಾ ಮೀನನ್ನು ಬಳಸಲಾಗುತ್ತದೆ. ಜೊತೆಗೆ ಬ್ಯಾಂಕಾಕ್ ಬೀದಿಗಳಲ್ಲಿ ಸಿಗುವ ನ್ಯಾಮ್ ಪ್ಲಾ ವಾನ್ ಎಂಬ ಸಿಹಿ ಮತ್ತು ಉಪ್ಪು ಮಿಶ್ರಿತ ಸಾಸ್ ಅದ್ದಿದ ಕಟ್-ಫ್ರೂಟ್ ನೀಡಲಾಗಿತ್ತು. ಇದಕ್ಕೆ ನೆಲ್ಲಿಕಾಯಿ, ಬಿಂಬಲ ಹಣ್ಣು (StarFruit) ಮತ್ತು ಆಯಾ ಕಾಲದಲ್ಲಿ ಲಭ್ಯವಿರುವ ಇತರ ಹಣ್ಣುಗಳ ತುಣುಕುಗಳನ್ನು ಸಿಂಪಡಿಸಲಾಗಿತ್ತು ಎಂದು ಅವರು ವಿವರಿಸುತ್ತಾರೆ.

ಇದಕ್ಕೂ ಹಿಂದೆ ಓಟಿಟಿಯಲ್ಲಿ ದಿ ಬೇರ್ (The Bear-2022) ಚಿತ್ರ ಭಾರೀ ಜನಪ್ರಿಯತೆಯನ್ನು ಪಡೆದಾಗ ಅನೇಕ ರೆಸ್ಟೋರೆಂಟ್ ಗಳ ಅಡುಗೆ ಮನೆಗಳಲ್ಲಿ ಅದು ಪ್ರವೇಶಪಡೆದಿದ್ದನ್ನು ಬಾಣಸಿಗ ಉಪಮನ್ಯು ನೆನಪಿಸಿಕೊಳ್ಳುತ್ತಾರೆ.

Read More
Next Story