
ಕನ್ನಡದ 2 ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡದ ‘ಕಂದೀಲು’, ‘ಸನ್ಫ್ಲವರ್ಸ್’ಗೆ ರಾಷ್ಟ್ರ ಪ್ರಶಸ್ತಿ ಮುಕುಟ
ಮೈಸೂರಿನ ವೈದ್ಯ ಡಾ. ಚಿದಾನಂದ ಎಸ್. ನಾಯ್ಕ್ ನಿರ್ದೇಶನದ ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ (ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು) ಕಿರುಚಿತ್ರ ಬೆಸ್ಟ್ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ರಾತ್ರಿ ಘೋಷಿಸಲಾಗಿದ್ದು, ಕನ್ನಡದ ಎರಡು ಚಿತ್ರಗಳು ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಭಾಜನವಾಗಿವೆ.
‘ಕಂದೀಲು’ ಚಿತ್ರವು ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಬೆಸ್ಟ್ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.
‘ಕಂದೀಲು’ ಚಿತ್ರವನ್ನು ಕೊಡಗು ಜಿಲ್ಲೆ ಮಡಿಕೇರಿ ನಿವಾಸಿ ಯಶೋದಾ ಪ್ರಕಾಶ್ ಕೊಟ್ಟುಕತ್ತೀರ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇವರು ಏಕೈಕ ಮಹಿಳಾ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ‘ಕಂದೀಲು’ ಗ್ರಾಮವೊಂದರ ಕಥೆಯಾಗಿದ್ದು, ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಅನೇಕ ಸವಾಲುಗಳ ನಡುವೆಯೂ ಬದುಕಿನ ಮಹತ್ವವನ್ನು ಹಲವು ಆಯಾಮಗಳನ್ನು ಚಿತ್ರ ಮೂಲಕ ಅತ್ಯುತ್ತಮವಾಗಿ ವಿವರಿಸಲಾಗಿದೆ.
ಮೈಸೂರಿನ ವೈದ್ಯ ಡಾ. ಚಿದಾನಂದ ಎಸ್. ನಾಯ್ಕ್ ನಿರ್ದೇಶನದ ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ (ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು) ಕಿರುಚಿತ್ರ ಬೆಸ್ಟ್ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಚಿದಾನಂದ ಅವರು ಎಂಬಿಬಿಎಸ್ ಶಿಕ್ಷಣವನ್ನು ಪೂರೈಸಿದ ನಂತರ ಪುಣೆಯ ಫಿಲ್ಮ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕಲಿಕೆ ಪ್ರಾರಂಭಿಸಿದರು. ಆ ವೇಳೆ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ತನ್ನ ಹಳ್ಳಿಯಿಂದ ಹುಂಜವೊಂದನ್ನು ಕದ್ದು ಸಮುದಾಯವನ್ನು ಕತ್ತಲೆಯಲ್ಲಿ ಮುಳುಗಿಸುವ ವೃದ್ಧ ಮಹಿಳೆಯ ಕುರಿತಾದ ಜಾನಪದ ಕಥೆಯನ್ನು ಚಿತ್ರ ಒಳಗೊಂಡಿದೆ.
ಇದು 2025ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಅರ್ಹತೆ ಪಡೆದಿತ್ತು. ಅಲ್ಲದೆ, ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ‘ಲಾ ಸಿನೆಫ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.
ಯಾರಿಗೆಲ್ಲ ಪ್ರಶಸ್ತಿ
ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
ಅತ್ಯುತ್ತಮ ನಟಿ: ರಾಣಿ ಮುಖರ್ಜಿ
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಜವಾನ್
ಅತ್ಯುತ್ತಮ ಹಿನ್ನೆಲೆ ಗಾಯಕ: ಬೇಬಿ
ಅತ್ಯುತ್ತಮ ಪೋಷಕ ನಟಿ: ಉಲ್ಲೊಜೊಕ್ಕು (ಊರ್ವಶಿ), ವಶ್ (ಜಾನಕಿ)
ಅತ್ಯುತ್ತಮ ಪೋಷಕ ನಟ: ಪೂಕಲಂ (ವಿಜಯರಾಘವನ್),
ಪಾರ್ಕಿಂಗ್ (ಮುತ್ತುಪೆಟ್ಟೈ)
ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳಿವು
ಅನಿಮಲ್ (ಮರು-ರೆಕಾರ್ಡಿಂಗ್ ಮಿಕ್ಸರ್) – ಎಂಆರ್ ರಾಧಾಕೃಷ್ಣನ್
ತೆಲುಗು ಚಿತ್ರ: ಭಗವಂತ ಕೇಸರಿ
ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ
ಮಲಯಾಳಂ ಚಿತ್ರ: ಉಲ್ಲೋಜೋಕ್ಕು
ಕನ್ನಡ ಚಿತ್ರ: ಕಂದೀಲು: ಭರವಸೆಯ ಕಿರಣ
ಅತ್ಯುತ್ತಮ ಹಿಂದಿ ಚಿತ್ರ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ, ಗುಜರಾತಿ ಚಿತ್ರ: ವಾಶ್
ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
ಅತ್ಯುತ್ತಮ ಅಸ್ಸಾಮಿ ಚಿತ್ರ: ರಂಗತಪು 1982
ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಅತ್ಯುತ್ತಮ ಸಾಹಿತ್ಯ: ಬಳಗಂ
ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)- ಹಾಡುಗಳು
ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್ ಡಿಸೈನರ್: ಸ್ಯಾಮ್ ಬಹದ್ದೂರ್
ಅತ್ಯುತ್ತಮ ನಿರ್ಮಾಣ ವಿನ್ಯಾಸಕಾರ: 2018- ಎವೆರಿವನ್ ಇಸ್ ಎ ಹೀರೋ (ಮಲಯಾಳಂ)
ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ) ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
ಅತ್ಯುತ್ತಮ ಛಾಯಾಗ್ರಹಣ: ಕೇರಳ ಕಥೆ (ಹಿಂದಿ)
ನಾನ್ ಫೀಚರ್ ಫಿಲ್ಮ್ ವಿಭಾಗ
ನೇಕಲ್ – ಮಲಯಾಳಂ
ದಿ ಸೀ ಆ್ಯಂಡ್ ಸೆವೆನ್ ವಿಲೇಜಸ್ – ಒಡಿಸ್ಸಿ
ಸನ್‌ಫ್ಲವರ್ ವೇರ್ ದ ಫಸ್ಟ್ ಒನ್ಸ್ ಟು ನೊ – ಚಿದಾನಂದ ನಾಯ್ಕ್ (ಸ್ಕ್ರಿಪ್ಟ್ ರೈಟರ್)