3 ದಿನ.. 3 ರಜೆ.. ಯುವ ಕಲೆಕ್ಷನ್‌ ಎಷ್ಟು ಗೊತ್ತಾ?
x
ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಚಿತ್ರ 'ಯುವ' ಶುಕ್ರವಾರ ಬಿಡುಗಡೆಗೊಂಡಿದೆ.

3 ದಿನ.. 3 ರಜೆ.. 'ಯುವ' ಕಲೆಕ್ಷನ್‌ ಎಷ್ಟು ಗೊತ್ತಾ?

ಯುವ ಸಿನಿಮಾ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ ಸಿನಿಮಾ 5.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ .


Click the Play button to hear this message in audio format

ಡಾ.ರಾಜ್‌ಕುಮಾರ್ ಕುಟುಂಬದ ಕುಡಿಯ ಎಂಟ್ರಿ -ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಚಿತ್ರ 'ಯುವ' ಶುಕ್ರವಾರ ( ಮಾರ್ಚ್‌ 29) ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಹಾಗೂ ಇವೆಲ್ಲವೂ 'ಯುವ' ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.

ಕಳೆದ ಮೂರು ದಿನಗಳು ಕಾಲೇಜುಗಳಿಗೆ ಮತ್ತು ಅನೇಕ ಖಾಸಗಿ ಸಂಸ್ಥೆಗಳಿಗೆ ರಜೆ ಇತ್ತು. ಕೆಲವೆಡೆ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಇವೆಲ್ಲವನ್ನೂ ಲೆಕ್ಕಾಚಾರ ಹಾಕಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಐಪಿಎಲ್ ಆರಂಭ ಆದ ಬೆನ್ನಲ್ಲೇ 'ಯುವ' ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ ಮ್ಯಾಚ್ ಶುರುವಾಗುವ ಸಮಯದಲ್ಲಿ ಥಿಯೇಟರ್‌ಗೆ ಜನ ಹೋಗುವುದು ಕಡಿಮೆಯಾಗಿದೆ.

ಮೊದಲ ಮೂರು ದಿನಗಳ ಕಲೆಕ್ಷನ್ ಎಷ್ಟು ಅಂತ ಕೇಳಿದ್ರೆ, ಸಿನಿಮಾಗೆ ಇದೂವರೆಗೂ ಸಿಕ್ಕಿರುವ ರಿಯಾಕ್ಷನ್ ಉತ್ತಮವಾಗಿದ್ರೂ, ದೊಡ್ಡ ಮಟ್ಟದ ಓಪನಿಂಗ್ ಸಿನಿಮಾಗೆ ಸಿಕ್ಕಿಲ್ಲ.

ʼಯುವ' ಸಿನಿಮಾದ ಕಲೆಕ್ಷನ್‌ ಎಷ್ಟು?

ಯುವ ಸಿನಿಮಾ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ ಸಿನಿಮಾ 5.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮೊದಲ ದಿನ - 2.10 ಕೋಟಿ ರೂಪಾಯಿ, ಎರಡನೇ ದಿನ - 1.60 ಕೋಟಿ ರೂಪಾಯಿ, ಮೂರನೇ ದಿನ - 1.80 ಕೋಟಿ ರೂಪಾಯಿ ಒಟ್ಟು - 5.50 ಕೋಟಿ ರೂಪಾಯಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಕಲೆಕ್ಷನ್‌

ಬೆಂಗಳೂರಿನಲ್ಲಿ ಅತಿ ಹೆಚ್ಚು 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಉಳಿದಂತೆ ಮಂಡ್ಯ, ಹಾಸನ, ದಾವಣಗೆರೆ, ಬಳ್ಳಾರಿ, ತುಮಕೂರು, ಹೊಸಪೇಟೆ, ಚಿತ್ರದುರ್ಗ, ಹುಬ್ಬಳ್ಳಿ ಭಾಗಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ ಎಂದು ಕರ್ನಾಟಕ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

Read More
Next Story